ಕ್ರಿಕೆಟ್

ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಸಂಬಂಧಿ ಕೊಲೆ: ಮೂವರ ಬಂಧನ

ಕ್ರಿಕೆಟಿಗ ಸುರೇಶ್ ರೈನಾ ಸಂಬಂಧಿಯ ಕೊಲೆ ಪ್ರಕರಣ ಬೇಧಿಸಿರುವ ಪೋಲೀಸರು ಮೂವರನ್ನು ಬಂಧಿಸಿದ್ದಾರೆ.. ಮೂವರು ದರೋಡೆಕೋರರು, ಅಂತರರಾಜ್ಯ ಗ್ಯಾಂಗ್‌ನ ಸದಸ್ಯರೆಂದು ತಿಳಿದುಬಂದಿದ್ದು ಇತರೆ 11 ಮಂದಿ ಆರೋಪಿಗಳನ್ನು ಇನ್ನೂ ಬಂಧಿಸಬೇಕಿದೆ ಎಂದು ಪಂಜಾಬ್ ಸರ್ಕಾರ ತಿಳಿಸಿದೆ.

ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಸಂಬಂಧಿ ಕೊಲೆ: ಮೂವರ ಬಂಧನ
ಸುರೇಶ್ ರೈನಾ
Published On :

ಅಮೃತಸರ್: ಕ್ರಿಕೆಟಿಗ ಸುರೇಶ್ ರೈನಾ ಸಂಬಂಧಿಯ ಕೊಲೆ ಪ್ರಕರಣ ಬೇಧಿಸಿರುವ ಪೋಲೀಸರು ಮೂವರನ್ನು ಬಂಧಿಸಿದ್ದಾರೆ. ಮೂವರು ದರೋಡೆಕೋರರು, ಅಂತರರಾಜ್ಯ ಗ್ಯಾಂಗ್‌ನ  ಸದಸ್ಯರೆಂದು ತಿಳಿದುಬಂದಿದ್ದು ಇತರೆ 11 ಮಂದಿ ಆರೋಪಿಗಳನ್ನು ಇನ್ನೂ ಬಂಧಿಸಬೇಕಿದೆ ಎಂದು ಪಂಜಾಬ್ ಸರ್ಕಾರ ತಿಳಿಸಿದೆ.

ಆಗಸ್ಟ್ 19 ರಂದು ಪಂಜಾಬ್‌ನ ಪಠಾಣ್‌ಕೋಟ್ ಜಿಲ್ಲೆಯ ತರಿಯಾಲ್ ಗ್ರಾಮದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರ ಸಂಬಂಧಿಯನ್ನು  ಕೊಂದ ಗ್ಯಾಂಗ್ ಅದೇ ದಿನ ರಾತ್ರಿ ಅಕ್ಕಪಕ್ಕದ ಇನ್ನೆರಡು ಸ್ಥಳಗಳಲ್ಲಿ ಸಹ ದರೋಡೆ ಕೃತ್ಯ ಎಸಗಿತ್ತು. ಆದರೆ ಆ ಪ್ರಕರಣದಲ್ಲಿ ಕಳುವಾದ ವಸ್ತುಗಳ ಮೌಲ್ಯ ಇನ್ನೂ ಪತ್ತೆಯಾಗಬೇಕಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಉನ್ನತ ಪೋಲೀಸ್ ಅಧಿಕಾರಿ ವಿಶೇಷ ತನಿಖಾ ತಂಡವು, ರೈನಾದ ಚಿಕ್ಕಪ್ಪ ಅಶೋಕ್ ಕುಮಾರ್ ಅವರ ಮನೆಗೆ ನುಗ್ಗುವ ಮೊದಲು ದರೋಡೆಕೋರರು ಮೊದಲು ಹಳ್ಳಿಯ ಗೋಡೌನ್, ನಂತರ ಹತ್ತಿರದ ಖಾಲಿ ಮನೆ ಪ್ರವೇಶಿಸಿದ್ದಾರೆ ಎಂದು ಪತ್ತೆ ಮಾಡಿದೆ. 

ಅಂದು ನಡೆದ ಘಟನೆಯಲ್ಲಿ ರೈನಾ ಅವರ ಚಿಕ್ಕಪ್ಪ ಅಶೋಕ್ ಕುಮಾರ್, ಗುತ್ತಿಗೆದಾರ ಸ್ಥಳದಲ್ಲೇ ಮೃತಪಟ್ಟರೆ ಅವರ ಮಗ ಕೌಶಲ್ ಕುಮಾರ್ ಆಗಸ್ಟ್ 31 ರಂದು  ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಇನ್ನು ಅಶೋಕ್ ಅವರ ಪತ್ನಿ ಆಶಾ ರಾಣಿ ಗಂಭೀರ ಗಾಯಗಳೊಂದಿಗೆ ಜೀವನ್ಮರಣ ಹೋರಾಟ ನಡೆಸಿದ್ದಾರೆ.  ದಾಳಿಯಲ್ಲಿ ಗಾಯಗೊಂಡ ಇತರ ಇಬ್ಬರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.