Suresh kumar

'ಮಾಜಿ ಸಿಎಂ ಸಿದ್ದರಾಮಯ್ಯ ವ್ಯಾಕರಣ ಮೇಷ್ಟ್ರು, ಆದರೂ ಅವರಿಗೆ ವ್ಯಾಕರಣ ಗೊತ್ತಿಲ್ಲ'
ಮಾಜಿ ಸಿಎಂ ವ್ಯಾಕರಣ ಮೇಷ್ಟ್ರು, ಆದರೂ ಕೂಡ ಅವರಿಗೆ ವ್ಯಾಕರಣ ಗೊತ್ತಿಲ್ಲ ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.

ಡೆಲಿವರಿ ಬಾಯ್ಸ್ ಗಳಿಗೆ ಸಾಮಾಜಿಕ ಭದ್ರತಾ ಸೌಲಭ್ಯ- ಎಸ್. ಸುರೇಶ್ ಕುಮಾರ್
ಡೆಲಿವರಿ ಬಾಯ್ಸ್ ಹಾಗೂ ಮೊಬೈಲ್ ಆಪ್ ಆಧಾರಿತ ಕೆಲಸ ಮಾಡುವ ಚಾಲಕರಿಗೆ ಸೂಕ್ತ ಸಾಮಾಜಿಕ ಭದ್ರತಾ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಕಾರ್ಮಿಕ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಆನ್ ಲೈನ್, ಆಪ್ ಆಧಾರಿತ ಸಂಸ್ಥೆಗಳ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಕ್ರಮ: ಸುರೇಶ್ ಕುಮಾರ್
ಆನ್ ಲೈನ್ ಅಥವಾ ಮೊಬೈಲ್ ಆಪ್ ಆಧಾರಿತ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಕುರಿತು ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಾರ್ಮಿಕ ಸಚಿವ ಸುರೇಶ್ ಕುಮಾರ್ ಅವರು ಸೋಮವಾರ ಹೇಳಿದ್ದಾರೆ.

ರಾಜಕೀಯ ರಾಜ್ಯದಲ್ಲಿ 34 ಜಿಲ್ಲೆಗಳಿರೋದು ಸತ್ಯ: ಇದು ಬಿಜೆಪಿ ಲೆಕ್ಕ, ನಳೀನ್ ಪರ ನಿಂತ ಸುರೇಶ್ ಕುಮಾರ್
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ರಾಜ್ಯದಲ್ಲಿ 32 ಜಿಲ್ಲೆ, 34 ಜಿಲ್ಲೆ ಹೇಳಿಕೆಯನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಮರ್ಥಿಸಿಕೊಂಡಿದ್ದಾರೆ.

ಅನುದಾನ ಬಳಕೆ ಮಾಡಿ ನೆರೆಪೀಡಿತ ಶಾಲಾ ಕಟ್ಟಡ ದುರಸ್ತಿ ಮಾಡಿ: ಶಿಕ್ಷಣ ಸಚಿವ
ಪ್ರವಾಹ ಪರಿಹಾರ ಅನುದಾನವಾದಿ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಹಣವನ್ನು ಬಳಕೆ ಮಾಡಿಕೊಂಡು ತುರ್ತಾಗಿ ಶಾಲಾ ಕಟ್ಟಡಗಳ ದುರಸ್ತಿ ಕಾರ್ಯಗಳನ್ನು ಕೈಗೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಬುಧವಾರ ಸೂಚನೆ ನೀಡಿದ್ದಾರೆ.

6 ಮತ್ತು 8ನೇ ತರಗತಿಯಿಂದಲೇ ಪಬ್ಲಿಕ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಚಿಂತನೆ
10ನೇ ತರಗತಿವರೆಗೂ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸದೆ ಪಾಸ್ ಮಾಡುವ ಪದ್ಧತಿಯನ್ನು ತೆಗೆದುಹಾಕುವ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶನಿವಾರ ಹೇಳಿದ್ದಾರೆ.

ಅನುದಾನ ನೀಡದ ಕೇಂದ್ರ: ವಿದ್ಯಾರ್ಥಿಗಳಿಗೆ ಸಿಗದ 2ನೇ ಸಮವಸ್ತ್ರ
ಕೇಂದ್ರ ಸರ್ಕಾರ ಅನುದಾನ ನೀಡದ ಕಾರಣ ಸರ್ಕಾರಿ ಶಾಲಾ ಮಕ್ಕಳಿಗೆ ನೀಡುವ ಎರಡನೇ ಜೊತೆ ಸಮವಸ್ತ್ರ ಪ್ರಸಕ್ತ ಸಾಲಿನಲ್ಲಿ ನೀಡಲಾಗುತ್ತಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಶಾಲಾ ಮಕ್ಕಳೊಂದಿಗೆ ಕಾಲ ಕಳೆದ ಶಿಕ್ಷಣ ಸಚಿವ ಸುರೇಶ್ ಕುಮಾರ್
ಅಕ್ಷರ ಕ್ರಾಂತಿ ಮೂಡಿಸುವ ಸಂಕಲ್ಪ ಮಾಡಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಾಲಾ ಮಕ್ಕಳೊಂದಿಗೆ ಗುರುವಾರ ಕಾಲ ಕಳೆದಿದ್ದಾರೆ.

ಕನ್ನಡದಂತೆ ಹಿಂದಿಗೂ ಮಹತ್ವ ನೀಡಿ: ಶಿಕ್ಷಣ ಸಚಿವ ಸುರೇಶ್ ಕುಮಾರ್
ರಾಜ್ಯದಲ್ಲಿ ಮಾತೃಭಾಷೆ ಕನ್ನಡದಂತೆಯೇ ರಾಷ್ಟ್ರೀಯ ಭಾಷೆ ಹಿಂದಿ ಕಲಿಕೆಗೂ ಅವಕಾಶ ನೀಡಬೇಕು, ಈ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯಪ್ರವೃತ್ತರಾಗಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

