ರಾಜಕೀಯ

ರಾಜಕೀಯ ರಾಜ್ಯದಲ್ಲಿ 34 ಜಿಲ್ಲೆಗಳಿರೋದು ಸತ್ಯ: ಇದು ಬಿಜೆಪಿ ಲೆಕ್ಕ, ನಳೀನ್ ಪರ ನಿಂತ ಸುರೇಶ್ ಕುಮಾರ್

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ರಾಜ್ಯದಲ್ಲಿ 32 ಜಿಲ್ಲೆ, 34 ಜಿಲ್ಲೆ ಹೇಳಿಕೆಯನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಮರ್ಥಿಸಿಕೊಂಡಿದ್ದಾರೆ.

ರಾಜಕೀಯ ರಾಜ್ಯದಲ್ಲಿ 34 ಜಿಲ್ಲೆಗಳಿರೋದು ಸತ್ಯ: ಇದು ಬಿಜೆಪಿ ಲೆಕ್ಕ, ನಳೀನ್ ಪರ ನಿಂತ ಸುರೇಶ್ ಕುಮಾರ್
ಸುರೇಶ್ ಕುಮಾರ್
Published On :

ಚಾಮರಾಜನಗರ:  ಬಿಜೆಪಿ ರಾಜ್ಯಾಧ್ಯಕ್ಷ  ನಳೀನ್ ಕುಮಾರ್ ಕಟೀಲ್ ರಾಜ್ಯದಲ್ಲಿ 32 ಜಿಲ್ಲೆ, 34 ಜಿಲ್ಲೆ ಹೇಳಿಕೆಯನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಮರ್ಥಿಸಿಕೊಂಡಿದ್ದಾರೆ.

ನಮ್ಮ ರಾಜ್ಯದಲ್ಲಿ ಬಿಜೆಪಿಯ ಸಂಘಟನಾ ದೃಷ್ಟಿಯಿಂದ ನಾವೇ ಜಿಲ್ಲೆಗಳನ್ನ ಮಾಡಿಕೊಂಡಿದ್ದೇವೆ. ಉದಾಹರಣೆಗೆ ಮೈಸೂರು ನಗರ ಮತ್ತು ಗ್ರಾಮಾಂತರ ಎಂದು ಭಾಗ ಮಾಡಲಾಗಿದೆ. ನಳೀನ್ ಕುಮಾರ್ 52 ದಿನದಲ್ಲಿ ಇಷ್ಟು ಜಿಲ್ಲೆಗೆ ಪ್ರವಾಸ ಹೋಗಿದ್ದೇನೆ ಎಂದಿದ್ದಾರೆ. ಕರ್ನಾಟಕದ ಆಡಳಿತಾತ್ಮಕ ಜಿಲ್ಲೆಗಳ ಸಂಖ್ಯೆ ಜೊತೆ ನಮ್ಮ ಸಂಘಟನಾತ್ಮಕ ಜಿಲ್ಲೆಗಳನ್ನ ನೋಡಿದಾಗ ಸ್ವಲ್ಪ ಗೊಂದಲ ಬರುತ್ತದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಈ ವೇಳೆ ವಿಶ್ವನಾಥ್, ಸಾರಾ ಮಹೇಶ್ ಆಣೆ ಪ್ರಮಾಣ ವಿಚಾರ ಪ್ರಸ್ತಾಪಿಸಿದ ಸಚಿವರು ಸಾರಾ ಮಹೇಶ್, ವಿಶ್ವನಾಥ್ ಇಬ್ಬರು ರಾಜಕೀಯ ಅನುಭವಿಗಳು. ನನಗೆ ಇದು ಯಾಕೋ ಸರಿ ಅನ್ನಿಸುತ್ತಿಲ್ಲ, ರಾಜಕೀಯದಲ್ಲಿ ಈ ರೀತಿ ಪರಸ್ಪರ ಮಾತಿನ ವಿನಿಮಯ ಆದಾಗ ಸಮಾಜಕ್ಕೆ ಕೆಟ್ಟ ಸಂದೇಶ ಹೋಗುತ್ತದೆ. ಬಹುಶಃ ಚಾಮುಂಡೇಶ್ವರಿ ಮನಸ್ಸಿನಲ್ಲಿ ಅಂದುಕೊಂಡಿರಬೇಕು. ಈ ಆಣೆ ಭಕ್ತರಿಂದ ನನ್ನನ್ನು ಕಾಪಾಡು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.