'ಮಾಜಿ ಸಿಎಂ ಸಿದ್ದರಾಮಯ್ಯ ವ್ಯಾಕರಣ ಮೇಷ್ಟ್ರು, ಆದರೂ ಅವರಿಗೆ ವ್ಯಾಕರಣ ಗೊತ್ತಿಲ್ಲ'
ಮಾಜಿ ಸಿಎಂ ವ್ಯಾಕರಣ ಮೇಷ್ಟ್ರು, ಆದರೂ ಕೂಡ ಅವರಿಗೆ ವ್ಯಾಕರಣ ಗೊತ್ತಿಲ್ಲ ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.

ಚಿತ್ರದುರ್ಗ: ಮಾಜಿ ಸಿಎಂ ವ್ಯಾಕರಣ ಮೇಷ್ಟ್ರು, ಆದರೂ ಕೂಡ ಅವರಿಗೆ ವ್ಯಾಕರಣ ಗೊತ್ತಿಲ್ಲ ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹೊಸಯಳನಾಡು ಗ್ರಾಮದಲ್ಲಿ ಮಧ್ಯಮಗಳೊಂದಿಗೆ ಸಿದ್ದರಾಮಯ್ಯ ಸ್ಪೀಕರ್ ಗೆ ಏಕವಚನದಲ್ಲಿ ಮಾತನಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವು ಬಹುವಚನ, ಏಕವಚನ ಕಲಿತಿದ್ದೇವೆ, ಹಾಗಾಗಿ ನಾವು ಮರ್ಯಾದೆ ಕೊಟ್ಟು ಮಾತಾಡ್ತಿವಿ, ಸಿದ್ದರಾಮಯ್ಯಗೆ ವ್ಯಾಕರಣ ಬರೋದಿಲ್ಲ ಹಾಗಾಗಿ ಏಕವಚನದಲ್ಲಿ ಮಾತಾಡ್ತಾರೆ ಎಂದು ಟಾಂಗ್ ನೀಡಿದರು.
ನಂತರ ಅನರ್ಹ ಶಾಸಕರ ಜೆಡ್ಜ್ ಮೆಂಟ್ ವಿಚಾರವಾಗಿ ತಿಳಿಸಿದ ಅವರು ಅನರ್ಹ ಶಾಸಕರ ತೀರ್ಪಿಗಾಗಿ ಕಾಯುತ್ತಿದ್ದೇವೆ. ಅನರ್ಹ ಶಾಸಕರ ಜೆಡ್ಜ್ ಮೆಂಟ್ ಬಂದ್ಮೇಲೆ ನಮ್ಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


