Sumalatha Ambareesh

ಮಂಡ್ಯ ಲೋಕಸಭೆ ಕದನ ಕುತೂಹಲ: ಪ್ರಧಾನಿ ಮೋದಿ ಭೇಟಿಯಾದ ಸಂಸದೆ ಸುಮಲತಾ; ಟಿಕೆಟ್ ಗೆ ಬೇಡಿಕೆ?
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಯಾರು ಕಣಕ್ಕಿಳಿಯುತ್ತಾರೆ ಎಂಬ ಕುತೂಹಲ ಸಾಕಷ್ಟಿದೆ. ಈಗಾಗಲೇ ಬಿಜೆಪಿಗೆ ಬಾಹ್ಯ ಬೆಂಬಲ ಘೋಷಿಸಿರುವ ಸಂಸದೆ ಸುಮಲತಾ ಅಂಬರೀಷ್ ಈ ಬಾರಿ ಕೂಡ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಸುಮಲತಾ ಅವರೇನು ನನ್ನ ಶತ್ರುನಾ? ಅವರನ್ನು ಭೇಟಿ ಮಾಡಿದರೆ ತಪ್ಪೇನಿದೆ?: ಹೆಚ್ ಡಿ ಕುಮಾರಸ್ವಾಮಿ
ಲೋಕಸಭೆ ಚುನಾವಣೆಗೆ ಈವರೆಗೂ ಬಿಜೆಪಿ ಜೆಡಿಎಸ್ ಮೈತ್ರಿಯಲ್ಲಿ ಕ್ಷೇತ್ರ ಹಂಚಿಕೆಯಾಗಿಲ್ಲ. ಮುಂದೆ ಭೇಟಿ ಮಾಡುವ ಅವಶ್ಯಕತೆ ಬಂದರೆ ಸಂಸದೆ ಸುಮಲತಾ ಅವರನ್ನು ಕೂಡಾ ಭೇಟಿ ಆಗುತ್ತೇನೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ನಿನ್ನೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದರು.

ನಾನು ಮಂಡ್ಯ ಸೊಸೆ, ನಾನ್ಯಾಕೆ ಕ್ಷೇತ್ರ ಬಿಟ್ಕೊಡಲಿ: ಸಂಸದೆ ಸುಮಲತಾ ಅಂಬರೀಷ್
ನಾನು ಮಂಡ್ಯ ಸೊಸೆ, ಯಾವತ್ತೂ ಮಂಡ್ಯ ಬಿಡಲ್ಲ. ಮುಂದೊಮ್ಮೆ ರಾಜಕಾರಣ ಬಿಡಬಹುದು ಆದರೆ ಸ್ವಾಭಿಮಾನ, ಸಿದ್ದಾಂತ ಬಿಡಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಪುನರುಚ್ಛರಿಸಿದ್ದಾರೆ.

ನಾಡು ನುಡಿ ಜಲ ವಿಚಾರದಲ್ಲಿ ರಾಜಕೀಯ ಸರಿಯಲ್ಲ, ಎಲ್ಲರೂ ಒಗ್ಗೂಡಿ ಹೋರಾಡಬೇಕು: ಸಂಸದೆ ಸುಮಲತಾ
ನಾಡು ನುಡಿ ಜಲ ವಿಚಾರದಲ್ಲಿ ರಾಜಕೀಯ ಮಾಡಬಾರದು, ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕೆಂದು ಸಂಸದೆ ಸುಮಲತಾ ಅಂಬರೀಷ್ ಅವರು ಶನಿವಾರ ಹೇಳಿದರು.

ಸಪ್ತಪದಿ ತುಳಿದ 'ರೆಬೆಲ್ ಸ್ಟಾರ್' ಪುತ್ರ ಅಭಿಷೇಕ್: ಅವಿವಾ ಬಿಡಪ್ಪ ಜೊತೆ ಕಂಕಣ ಭಾಗ್ಯ
ಕನ್ನಡದ ರೆಬೆಲ್ ಸ್ಟಾರ್, ರಾಜಕಾರಣಿ ದಿವಂಗತ ಅಂಬರೀಷ್ ಹಾಗೂ ಸಂಸದೆ ನಟಿ ಸುಮಲತಾ ಅವರ ಪುತ್ರ ನಟ ಅಭಿಷೇಕ್ ಮತ್ತು ಮಾಡೆಲ್ ಅವಿವಾ ಬಿಡಪ್ಪ ಅವರ ವಿವಾಹ ಇಂದು ಸೋಮವಾರ)ಜೂನ್ 5) ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಒಕ್ಕಲಿಗ ಸಂಪ್ರದಾಯ ಪ್ರಕಾರ ನೆರವೇರಿತು.

ರಾಜಕಾರಣ ಬದಿಗೊತ್ತಿ ಪುತ್ರನ ಮದುವೆಗೆ ಸಿಎಂ ಸಿದ್ದಾರಾಮಯ್ಯ ಆಹ್ವಾನಿಸಿದ ಸುಮಲತಾ
ರಾಜಕೀಯ ಕೆಸರೆರಚಾಟಗಳನ್ನು ಬದಿಗೊತ್ತಿದ ಸುಮಲತಾ ಅಂಬರೀಷ್ ಅವರು, ಮುಖ್ಯಮಂತ್ರಿ ಸಿದ್ದರಾಯ್ಯ ಅವರನ್ನು ಸೋಮವಾರ ಭೇಟಿ ಮಾಡಿದ್ದು, ಪುತ್ರ ಅಭಿಷೇಕ್ ಅಂಬರೀಷ್ ಮದುವೆಗೆ ಆಹ್ವಾನಿಸಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ನಿಖಿಲ್ ಸೋಲಿಸಿ ಸುಮಲತಾ ಗೆಲ್ಲಿಸಿದ್ದು ಸರಿಯಲ್ಲ: ಸಿದ್ದರಾಮಯ್ಯ
2019ರ ಲೋಕಸಭೆ ಚುನಾವಣೆ ಮುಗಿದು ಈಗ 2023ರ ವಿಧಾನಸಭೆ ಚುನಾವಣೆ ಬಂದರೂ ಅಂದಿನ ಚುನಾವಣಾ ಸಂದರ್ಭದ ಬಗ್ಗೆ ರಾಜಕೀಯ ನಾಯಕರ ಮಾತುಗಳು ಮಾತ್ರ ನಿಂತಿಲ್ಲ. ಜೆಡಿಎಸ್ ಅಂದಿನ ಸೋಲಿನ ಕಹಿಯನ್ನೂ ಇನ್ನೂ ಮರೆತಿಲ್ಲ.

ಒಂದು ಕುಟುಂಬ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ಬರಲಿ ಎಂದು ಕಾಯುತ್ತಾ ಕುಳಿತಿದೆ: ಹೆಚ್ ಡಿಕೆಗೆ ಸುಮಲತಾ ಟಾಂಗ್
ಸ್ವಾಭಿಮಾನಿ ಹೆಸರಿನಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ವಿರುದ್ಧ ಗೆದ್ದು ಸಂಸದೆಯಾಗಿ ಇತ್ತೀಚೆಗೆ ಬಿಜೆಪಿಗೆ ಬಾಹ್ಯ ಬೆಂಬಲ ನೀಡಿರುವ ಸುಮಲತಾ ಅಂಬರೀಷ್ ಇಂದು ಬುಧವಾರ ಮಂಡ್ಯದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕರ್ನಾಟಕ ವಿಧಾನಸಭೆ ಚುನಾವಣೆ 2023: ಮಂಡ್ಯದಲ್ಲಿ ಬಿಜೆಪಿ ಅರಳುವುದೇ ಅಥವಾ ಸಣ್ಣ ಪಕ್ಷಗಳು ದೊಡ್ಡ ಛಾಪು ಮೂಡಿಸುವುದೇ?
ದಕ್ಷಿಣ ಕರ್ನಾಟಕದ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಸಂಸದೆಯಾಗಿರುವ ನಟಿ ಸುಮಲತಾ ಅಂಬರೀಶ್ ಅವರನ್ನು ಬಿಜೆಪಿ ಕಣಕ್ಕಿಳಿಸಲಿದೆಯೇ? ಬಿಜೆಪಿ ಬಯಸಿದಲ್ಲಿ ಸ್ಪರ್ಧಿಸುವ ಸುಳಿವನ್ನು ಅವರು ನೀಡಿದ್ದಾರೆ.

