ರಾಜಕಾರಣ ಬದಿಗೊತ್ತಿ ಪುತ್ರನ ಮದುವೆಗೆ ಸಿಎಂ ಸಿದ್ದಾರಾಮಯ್ಯ ಆಹ್ವಾನಿಸಿದ ಸುಮಲತಾ
ರಾಜಕೀಯ ಕೆಸರೆರಚಾಟಗಳನ್ನು ಬದಿಗೊತ್ತಿದ ಸುಮಲತಾ ಅಂಬರೀಷ್ ಅವರು, ಮುಖ್ಯಮಂತ್ರಿ ಸಿದ್ದರಾಯ್ಯ ಅವರನ್ನು ಸೋಮವಾರ ಭೇಟಿ ಮಾಡಿದ್ದು, ಪುತ್ರ ಅಭಿಷೇಕ್ ಅಂಬರೀಷ್ ಮದುವೆಗೆ ಆಹ್ವಾನಿಸಿದರು.

ಬೆಂಗಳೂರು: ರಾಜಕೀಯ ಕೆಸರೆರಚಾಟಗಳನ್ನು ಬದಿಗೊತ್ತಿದ ಸುಮಲತಾ ಅಂಬರೀಷ್ ಅವರು, ಮುಖ್ಯಮಂತ್ರಿ ಸಿದ್ದರಾಯ್ಯ ಅವರನ್ನು ಸೋಮವಾರ ಭೇಟಿ ಮಾಡಿದ್ದು, ಪುತ್ರ ಅಭಿಷೇಕ್ ಅಂಬರೀಷ್ ಮದುವೆಗೆ ಆಹ್ವಾನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಆಮಂತ್ರಣ ಪತ್ರಿಕೆ ನೀಡಿದ ಫೋಟೋಗಳನ್ನ ಸ್ವತಃ ಸುಮಲತಾ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ವಿವಾಹಕ್ಕೆ ದಿನಗಣನೆ ಶುರುವಾಗಿದ್ದು, ಚಂದನವನದಲ್ಲಿ ಮತ್ತೊಂದು ಜೋಡಿ ಹಸೆಮಣೆ ಏರಲು ಸಜ್ಜಾಗಿದೆ.
ಅಭಿಷೇಕ್ ಅಂಬರೀಶ್ ಅವರ ವಿವಾಹ ಮಾಡೆಲ್ ಅವಿವಾ ಬಿದ್ದಪ್ ಜೊತೆಗೆ ಫಿಕ್ಸ್ ಆಗಿದ್ದು, ಜೂನ್ 5ರಂದು ಅದ್ದೂರಿಯಾಗಿ ವಿವಾಹ ಕಾರ್ಯಕ್ರಮ ಜರುಗಲಿದೆ.
ಜೂನ್ 7ರಂದು ಭರ್ಜರಿಯಾಗಿ ಆರತಕ್ಷತೆ ಸಮಾರಂಭ ನಡೆಯಲಿದ್ದು, ಅಭಿಷೇಕ್- ಅವಿವಾ ವಿವಾಹದ ಆಮಂತ್ರಣ ಪತ್ರ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


