study

ಕೊರೋನಾ ತಡೆ ಸಲಹೆ, ಅಪಾಯದ ಬಗ್ಗೆ ಶೇ.90 ಮಂದಿಗೆ ಅರಿವು, ಆದರೆ ಶೇ.46 ಮಂದಿಯಿಂದ ಮಾತ್ರ ನಿಯಮ ಪಾಲನೆ!
ವಿವಿಧ ರೂಪಾಂತರಗಳನ್ನು ಹೊಂದುತ್ತಿರುವ ಕೊರೋನಾದಿಂದ ದೇಶದಲ್ಲಿ ಸೋಂಕು ಹಾಗೂ ಸಾವಿನ ಪ್ರಮಾಣ ಹೆಚ್ಚಳವಾಗುತ್ತಿದೆ. ಆದರೂ ಬಹುತೇಕ ಜನರು ಅಗತ್ಯವಿರುವಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ.

ಶೇ.24 ರಷ್ಟು ಜನರು ಬಾರ್ಡರ್ಲೈನ್ ಮಧುಮೇಹಿಗಳು: ಅಧ್ಯಯನ
ಅಹಮದಾಬಾದ್, ಬೆಂಗಳೂರು, ಚೆನ್ನೈ, ಕೊಚ್ಚಿ ಮತ್ತು ಹೈದರಾಬಾದ್ ನಗರಗಳಲ್ಲಿ 4,53,854 ಜನರ ಮೇಲೆ ನ್ಯೂಬರ್ಗ್ ಡಯಾಗ್ನೋಸ್ಟಿಕ್ಸ್ ನಡೆಸಿದ ಅಧ್ಯಯನದ ಪ್ರಕಾರ, ಶೇಕಡಾ 24 ರಷ್ಟು ಜನರು ಪೂರ್ವಭಾವಿ ಮಧುಮೇಹಿಗಳಾಗಿದ್ದಾರೆ.

ಕಳಪೆ ನೈರ್ಮಲ್ಯ, ನೀರಿನ ಗುಣಮಟ್ಟವಿರುವ ರಾಷ್ಟ್ರಗಳಲ್ಲಿ ಕೋವಿಡ್ ಸಾವಿನ ಪ್ರಮಾಣ ಕಡಿಮೆ: ಅಧ್ಯಯನ
ಉತ್ತಮ ನೈರ್ಮಲ್ಯವನ್ನು ಹೊಂದಿರುವ ಶ್ರೀಮಂತ ರಾಷ್ಟ್ರಗಳಿಗೆ ಹೋಲಿಸಿದರೆ, ಕಳಪೆ ನೈರ್ಮಲ್ಯ, ಸ್ವಚ್ಛತೆ ಮತ್ತು ನೀರಿನ ಗುಣಮಟ್ಟ ಹೊಂದಿರುವ ರಾಷ್ಟ್ರಗಳಲ್ಲಿ ಕೋವಿಡ್-19 ಸಾವಿನ ಪ್ರಮಾಣ ಕಡಿಮೆ ಇರುವುದನ್ನು ಅಧ್ಯಯನವೊಂದು ಕಂಡುಹಿಡಿದಿದೆ.

ಅರ್ಥಶಾಸ್ತ್ರದಲ್ಲಿ 4 ಚಿನ್ನದ ಪದಕ, 7 ನಗದು ಬಹುಮಾನ ಪಡೆದ ಚಾಮರಾಜನಗರ ಕಾನ್ಸ್‌ಟೇಬಲ್
ಮಹಿಳಾ ಪೊಲೀಸ್ ಕಾನ್ಸಟೇಬಲ್ ಒಬ್ಬರು ಮೈಸೂರು ವಿವಿಯ ಬಿಎ ಅರ್ಥಶಾಸ್ತ್ರದಲ್ಲಿ ವಿಷಯದಲ್ಲಿ ನಾಲ್ಕು ಚಿನ್ನದ ಪದಕ ಹಾಗೂ 7 ನಗದು ಬಹುಮಾನ ಪಡೆದಿದ್ದಾರೆ.

ಮಂಗಳೂರು ಸಮುದ್ರ ತೀರದಲ್ಲಿ ಡಾಲ್ಫಿನ್ ಸಂರಕ್ಷಣೆ ಯೋಜನೆಗೆ ಅರಣ್ಯ ಇಲಾಖೆ ಮುಂದು
ಕಡಲ ನಗರಿ ಮಂಗಳೂರಿನ ತೀರದಲ್ಲಿ ಡಾಲ್ಫಿನ್ ಸಂರಕ್ಷಣಾ ಕಾರ್ಯಕ್ರಮವನ್ನು ನಡೆಸಲು ಕರ್ನಾಟಕ ಅರಣ್ಯ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ.

ಪಾಲಿಶ್ ಅಕ್ಕಿಯಿಂದ ನವಜಾತ ಶಿಶುವಿಗೆ ಅಪಾಯ: ಜಯದೇವ ಹೃದ್ರೋಗ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ದೃಢ
ಪಾಲಿಶ್ ಮಾಡಿದ ಅಕ್ಕಿಯನ್ನು ಸೇವಿಸುವ ತಾಯಂದಿರ ಎದೆಹಾಲಿನಲ್ಲಿ ಪೌಷ್ಟಿಕಾಂಶ ಕೊರತೆ ಎದುರಾಗಲಿದ್ದು, ಪರಿಣಾಮವಾಗಿ ಶಿಶುಗಳು ಹೃದಯ ಸಂಬಂಧಿ ಸಮಸ್ಯೆಗಳಿಗೆ ಗುರಿಯಾಗಬಹುದು ಎಂಬ ಆತಂಕಕಾರಿ ವಿಷಯ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರು ನಡೆಸಿದ ಸಂಶೋಧನೆಯಿಂದ ಬಹಿರಂಗಗೊಂಡಿದೆ.

ಲಾಕ್ ಡೌನ್ ಕಾರಣದಿಂದ ನಿದ್ರೆಯ ಪ್ರಮಾಣ, ಗುಣಮಟ್ಟದಲ್ಲಿ ಬದಲಾವಣೆ: ಅಧ್ಯಯನ
ಕೋವಿಡ್-19 ಲಾಕ್ ಡೌನ್ ಜನರ ನಿದ್ರೆಯ ಮೇಲೆ ಪರಿಣಾಮ ಬೀರಿದ್ದು, ರಾತ್ರಿ ಸಮಯದ ನಿದ್ರೆಯ ಪ್ರಮಾಣ ಹಾಗೂ ಗುಣಮಟ್ಟದಲ್ಲಿ ಬದಲಾವಣೆಯಾಗಿರುವುದು ಹೃಷಿಕೇಶದ ಏಮ್ಸ್ ಮತ್ತಿತರ ದೇಶದಲ್ಲಿನ 25 ವೈದ್ಯಕೀಯ ಸಂಶೋಧನೆಗಳ ಅಧ್ಯಯನಗಳಿಂದ ಬಹಿರಂಗವಾಗಿದೆ.

ಕೋವಿಡ್-19 ನಿಂದ ಭೂಮಿಯ ಕಂಪನದ ಪ್ರಮಾಣ ದಾಖಲೆಯ ಇಳಿಕೆ!
ಕೋವಿಡ್-19 ಲಾಕ್ ಡೌನ್ ನಿಂದಾಗಿ ಪರಿಸರದ ಮೇಲೆ ಹಲವು ಸಕಾರಾತ್ಮಕ ಪರಿಣಾಮ ಉಂಟಾಗಿದ್ದು, ಇತ್ತೀಚಿನ ವರದಿಯ ಪ್ರಕಾರ ಸೈಸ್ಮಿಕ್ ನಾಯ್ಸ್ ದಾಖಲೆಯ ಪ್ರಮಾಣದಲ್ಲಿ ಕಡಿಮೆಯಾಗಿದೆ.

ಆತಂಕಕಾರಿ ವರದಿ: ಕೊರೋನಾ ವೈರಸ್ ನ ಒಂದು ಹನಿ ಅರ್ಧ ಆಸ್ಪತ್ರೆಗೆ ಸೋಂಕು ಹರಡಿಸುತ್ತೆ!
ಮಹಾಮಾರಿ ಕೊರೋನಾ ವೈರಸ್ ಕೇವಲ 10 ಗಂಟೆ ಅವಧಿಯಲ್ಲಿ ಒಂದು ಸ್ಥಳದಿಂದ ಇಡೀ ಅರ್ಧ ಆಸ್ಪತ್ರೆಗೆ ಹರಡಬಹುದು ಎಂಬ ಆಘಾತಕಾರಿ ವಿಷಯ ಅಧ್ಯಯನದ ಮೂಲಕ ತಿಳಿದುಬಂದಿದೆ.

