ಅರ್ಥಶಾಸ್ತ್ರದಲ್ಲಿ 4 ಚಿನ್ನದ ಪದಕ, 7 ನಗದು ಬಹುಮಾನ ಪಡೆದ ಚಾಮರಾಜನಗರ ಕಾನ್ಸ್‌ಟೇಬಲ್
ಮಹಿಳಾ ಪೊಲೀಸ್ ಕಾನ್ಸಟೇಬಲ್ ಒಬ್ಬರು ಮೈಸೂರು ವಿವಿಯ ಬಿಎ ಅರ್ಥಶಾಸ್ತ್ರದಲ್ಲಿ ವಿಷಯದಲ್ಲಿ ನಾಲ್ಕು ಚಿನ್ನದ ಪದಕ ಹಾಗೂ 7 ನಗದು ಬಹುಮಾನ ಪಡೆದಿದ್ದಾರೆ.

ಚಾಮರಾಜನಗರ: ಮಹಿಳಾ ಪೊಲೀಸ್ ಕಾನ್ಸಟೇಬಲ್ ಒಬ್ಬರು ಮೈಸೂರು ವಿವಿಯ ಬಿಎ ಅರ್ಥಶಾಸ್ತ್ರದಲ್ಲಿ ವಿಷಯದಲ್ಲಿ ನಾಲ್ಕು ಚಿನ್ನದ ಪದಕ ಹಾಗೂ 7 ನಗದು ಬಹುಮಾನ ಪಡೆದಿದ್ದಾರೆ.
ಚಾಮರಾಜನರದಲ್ಲಿ ಸಿವಿಲ್ ಪೊಲೀಸ್ ಕಾನ್ಸಟೇಬಲ್ ತರಬೇತಿ ಪಡೆಯುತ್ತಿರುವ ನಂಜನಗೂಡು ತಾಲೂಕಿನ ಕೂಡ್ಲಾಪುರ ಗ್ರಾಮದ ಬೆಳ್ಳಶೆಟ್ಟಿ ಮಗಳು ಕಾವೇರಿ ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು ಬಡತನದಲ್ಲೂ ಅರಳಿದ ಪ್ರತಿಭೆಯಾಗಿದ್ದಾರೆ.
ತಂದೆ ರೈತರಾಗಿದ್ದು ಹಣದ ಮುಗ್ಗಟ್ಟಿನ ನಡುವೆ ಆಸ್ಥೆಯಿಟ್ಟು ಓದಿದ ಕಾವೇರಿ ಪದವಿ ಪರೀಕ್ಷೆ ಬಳಿಕ ಕಾನ್ಸ್‌ಟೇಬಲ್ ಹುದ್ದೆಗೆ ನೇಮಕವಾಗಿದ್ದಾರೆ. ನಾಲ್ಕು ಚಿನ್ನದಪದಕ ಪಡೆದ ಈ ಸ್ವರ್ಣ ಹುಡುಗಿಗೆ ಎಂಎ ಮಾಡಲು ಆರ್ಥಿಕ ಸಮಸ್ಯೆ ಎದುರಾಗಿದ್ದರಿಂದ ನೌಕರಿ ಮಾಡುತ್ತಲೇ ಪಿಎಸ್ಐ ಜೊತೆಗೆ ಕೆಪಿಎಸ್ಸಿ ಪರೀಕ್ಷೆಗಳನ್ನು ಬರೆಯಲು ತಯಾರಿ ನಡೆಸುತ್ತಿದ್ದಾರೆ.
ಚಿನ್ನದ ಹುಡುಗಿ ಕುರಿತು ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಪ್ರತಿಕ್ರಿಯಿಸಿ, ಬಿಎ ಅರ್ಥಶಾಸ್ತ್ರದಲ್ಲಿ ವಿಶ್ವವಿದ್ಯಾಲಯಕ್ಕೆ ಟಾಪರ್ ಆಗುವ ಮೂಲಕ ಇಲಾಖೆಗೆ ಕೀರ್ತಿ ತಂದಿದ್ದಾರೆ. ಕಾನ್ಸ್‌ಟೇಬಲ್ ಹುದ್ದೆಯಲ್ಲೇ ಮುಂದುವರಿಯದೇ ಪಿಎಸ್ಐ, ಕೆಎಎಸ್ ಪರೀಕ್ಷೆಗಳನ್ನು ಅವರು ತೆಗೆದುಕೊಳ್ಳಬೇಕು. ಅವರಿಗೆ ಉಜ್ವಲ ಭವಿಷ್ಯವಿದೆ ಎಂದು ಅಭಿನಂದಿಸಿದರು.
ಇನ್ನು, ಕಾವೇರಿ ಚಿನ್ನದ ಪದಕ ಪಡೆದಿರುವುದಕ್ಕೆ ಸಹೋದ್ಯೋಗಿಗಳು ಕೂಡ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ವಿದ್ಯೆಗೆ ಹಣ-ಆಸ್ತಿಗಿಂತ ಕಠಿಣ ಪರಿಶ್ರಮ, ಶ್ರದ್ಧೆ ಮುಖ್ಯ ಎಂಬುದಕ್ಕೆ ಚಿನ್ನದ ಹುಡುಗಿ ನಿದರ್ಶನವಾಗಿದ್ದಾರೆ.
ವರದಿ: ಗುಳಿಪುರ ನಂದೀಶ. ಎಂ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


