Students

ಶಾಲಾ-ಕಾಲೇಜು ಭೌತಿಕ ತರಗತಿ ಆರಂಭ; 2ನೇ ದಿನ ಶೇ.60ರಷ್ಟು ಮಕ್ಕಳು ಹಾಜರು
ರಾಜ್ಯದ 26 ಜಿಲ್ಲೆಗಳಲ್ಲಿ ಪ್ರೌಢ ಶಾಲೆ ಮತ್ತು ಪಿಯು ಕಾಲೇಜುಗಳು ಆರಂಭವಾದ ಎರಡನೇ ದಿನ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಭರ್ಜರಿ ಏರಿಕೆ ಕಂಡುಬಂದಿದ್ದು, ಶೇ.60 ದಾಟಿದೆ ಎಂದು ತಿಳಿದುಬಂದಿದೆ.

ಕಾಲೇಜುಗಳು ಪುನರಾರಂಭ ಬಳಿಕ ದಕ್ಷಿಣ ಕನ್ನಡದಲ್ಲಿ 600 ವಿದ್ಯಾರ್ಥಿಗಳಲ್ಲಿ ಕೋವಿಡ್ ಪಾಸಿಟಿವ್!
ಕಾಲೇಜುಗಳು ಪುನರಾರಂಭಗೊಂಡ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 600 ಮಂದಿ ವಿದ್ಯಾರ್ಥಿಗಳಲ್ಲಿ ಮಹಾಮಾರಿ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.

ಕೋವಿಡ್ ಆತಂಕ: ಮನೆಯಲ್ಲಿರುವುದೇ... ಸ್ನೇಹಿತರ ಭೇಟಿಯಾಗುವುದೇ?; ಗೊಂದಲದಲ್ಲಿ ವಿದ್ಯಾರ್ಥಿಗಳು!
ಕೋವಿಡ್ ಆತಂಕದ ನಡುವಲ್ಲೂ ಬೆಂಗಳೂರು ಸೇರಿದಂತೆ 26 ಜಿಲ್ಲೆಗಳಲ್ಲಿ 9ರಿಂದ 12ನೇ ತರಗತಿವರೆಗಿನ ಮಕ್ಕಳಿಗೆ ಭೌತಿಕ ತರಗತಿಗಳು ಸೋಮವಾರದಿಂದ ಆರಂಭವಾಗಿದ್ದು, ಶಾಲೆ ಹಾಗೂ ಕಾಲೇಜುಗಳ ಭೌತಿಕ ತರಗತಿಗೆ ಹಾಜರಾಗುವ ಕುರಿತು ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿಕೊಂಡಿದ್ದಾರೆ.

ನಮ್ಮ ಪೋಷಕರನ್ನೂ ಭಾರತಕ್ಕೆ ಕರೆ ತನ್ನಿ: ಸರ್ಕಾರಕ್ಕೆ ಆಫ್ಘನ್ ವಿದ್ಯಾರ್ಥಿಗಳ ಮನವಿ
ಅಫ್ಘಾನಿಸ್ತಾನ ರಾಷ್ಟ್ರ ತಾಲಿಬಾನಿಗಳ ಹಿಡಿತಕ್ಕೆ ಸಿಲುಕಿಕೊಂಡಿರುವ ಹಿನ್ನೆಲೆಯಲ್ಲಿ ನಗರದಲ್ಲಿರುವ ಅಫ್ಘನ್ ವಿದ್ಯಾರ್ಥಿಗಳು ಕರ್ನಾಟಕ ಹೆಲ್ಪ್ ಡೆಸ್ಕ್ಗೆ ಮೇಲಿಂದ ಮೇಲೆ ಮನವಿ ಮಾಡುತ್ತಿದ್ದಾರೆ.

ರಾಜ್ಯದಲ್ಲಿನ ಆಫ್ಘನ್ ವಿದ್ಯಾರ್ಥಿಗಳಿಗೆ ತಮ್ಮ ದೇಶದ ಭವಿಷ್ಯದ್ದೇ ಚಿಂತೆ
ಹಲವಾರು ಬಾರಿ ಮನೆಗೆ ಕರೆ ಮಾಡಲು ಯತ್ನಿಸಿದೆ. ಆದರೆ ಕರೆ ಹೋಗಲಿಲ್ಲ. ನಂತರ ಇಂಟರ್ನೆಟ್ ಸಹಾಯದಿಂದ ಅವರನ್ನು ಸಂಪರ್ಕಿಸಿದೆ. ಅವರು ತಾವು ಸುರಕ್ಷಿತವಾಗಿರುವುದಾಗಿ ತಿಳಿಸಿದರು. ನನ್ನ ಮನಸ್ಸು ನಿರಾಳವಾಯಿತು.' ಎಂದು ಓರ್ವ ಆಫ್ಘನ್ ವಿದ್ಯಾರ್ಥಿ ತನ್ನ ಆತಂಕವನ್ನು ಮುಂದಿಟ್ಟಿದ್ದಾನೆ.

ಹಾಸನ: ನರ್ಸಿಂಗ್ ಪರೀಕ್ಷೆ ಬರೆಯಲು ಕೇರಳದಿಂದ ಬಂದಿದ್ದ 21 ವಿದ್ಯಾರ್ಥಿನಿಯರಲ್ಲಿ ಕೊರೋನಾ ಪಾಸಿಟಿವ್!
ನರ್ಸಿಂಗ್ ಪರೀಕ್ಷೆ ಬರೆಯುವ ಸಲುವಾಗಿ ನೆರೆ ರಾಜ್ಯ ಕೇರಳದಿಂದ ಹಾಸನಕ್ಕೆ ಬಂದಿದ್ದ ಒಂದೇ ಕಾಲೇಜಿನ 21 ಮಂದಿ ವಿದ್ಯಾರ್ಥಿನಿಯರಲ್ಲಿ ಕೊರೋನಾ ಪಾಸಿಟಿವ್ ಬಂದಿದ್ದು, ಆತಂಕ ಹೆಚ್ಚಾಗುವಂತೆ ಮಾಡಿದೆ.

ಕೋವಿಡ್ ಸಂಕಷ್ಟ: ಗ್ರಾಮೀಣ ಭಾಗದ ಗ್ರಂಥಾಲಯಗಳಿಗೆ ಪುಸ್ತಕ ನೀಡಿ, ಮಕ್ಕಳಿಗೆ ನೆರವಾಗುತ್ತಿರುವ ವಿದ್ಯಾರ್ಥಿಗಳು
ಮಹಾಮಾರಿ ಕೊರೋನಾ ವೈರಸ್ ಶಿಕ್ಷಣ ಕ್ಷೇತ್ರದ ಮೇಲೆ ಗಂಭೀರ ಪರಿಣಾಮವನ್ನು ಬೀರಿದೆ. ಸಾಂಕ್ರಾಮಿಕ ರೋಗದ ಪರಿಣಾಮ ಶಾಲೆಗಳು ಬಂದ್ ಆಗಿದ್ದು, ಇದರಿಂದ ವಿದ್ಯಾರ್ಥಿಗಳಲ್ಲಿ ಓದು ಹಾಗೂ ಕಲಿಕೆಯ ಆಸಕ್ತಿ ದೂರಾಗುತ್ತಿದೆ.

ಸಿಐಎಸ್ಸಿಇ ಫಲಿತಾಂಶ ಪ್ರಕಟ: ಶೇ.99.98ರಷ್ಟು 10ನೇ ಹಾಗೂ ಶೇ. 99.66ರಷ್ಟು 12ನೇ ತರಗತಿ ವಿದ್ಯಾರ್ಥಿಗಳು ಪಾಸ್
ಐಸಿಎಸ್ಇ 10ನೇ ತರಗತಿ ಮತ್ತು ಐಎಸ್ ಸಿ 12ನೇ ತರಗತಿ ಫಲಿತಾಂಶವನ್ನು ಸಿಐಎಸ್ಸಿಇ ಶನಿವಾರ ಫಲಿತಾಂಶ ಪ್ರಕಟಿಸಿದ್ದು, 10ನೇ ತರಗತಿ ಬಾಲಕಿಯರು ಮತ್ತು ಬಾಲಕರು ಒಂದೇ ರೀತಿಯ ಫಲಿತಾಂಶವನ್ನು ಸಾಧಿಸಿದ್ದಾರೆ.

ಕೊರೋನಾ ಆತಂಕದ ನಡುವೆಯೇ ಇಂದಿನಿಂದ ಎಸ್ಎಸ್ಎಲ್'ಸಿ ಪರೀಕ್ಷೆ: ಆಲ್ ದಿ ಬೆಸ್ಟ್ ಮಕ್ಕಳೇ!
ಕೊರೋನಾ ಆತಂಕದ ನಡುವೆಯೇ ಇಂದಿನಿಂದ 2020-21ನೇ ಸಾಲಿನ ಎಸ್ಎಸ್ಎಲ್'ಸಿ ಪರೀಕ್ಷೆ ಆರಂಭವಾಗುತ್ತಿದ್ದು, ಸಾಂಕ್ರಾಮಿಕ ರೋಗ ಕಾರಣದಿಂದಾಗಿ ಈ ಬಾರಿ ವಿಭಿನ್ನ ಹಾಗೂ ವಿಶೇಷವಾಗಿ ಪರೀಕ್ಷೆ ನಡೆಯುತ್ತಿದೆ.

