ದೇಶ

ಸಿಐಎಸ್‌ಸಿಇ ಫಲಿತಾಂಶ ಪ್ರಕಟ: ಶೇ.99.98ರಷ್ಟು 10ನೇ ಹಾಗೂ ಶೇ. 99.66ರಷ್ಟು 12ನೇ ತರಗತಿ ವಿದ್ಯಾರ್ಥಿಗಳು ಪಾಸ್

ಐಸಿಎಸ್ಇ 10ನೇ ತರಗತಿ ಮತ್ತು ಐಎಸ್ ಸಿ 12ನೇ ತರಗತಿ ಫಲಿತಾಂಶವನ್ನು ಸಿಐಎಸ್‌ಸಿಇ ಶನಿವಾರ ಫಲಿತಾಂಶ ಪ್ರಕಟಿಸಿದ್ದು, 10ನೇ ತರಗತಿ ಬಾಲಕಿಯರು ಮತ್ತು ಬಾಲಕರು ಒಂದೇ ರೀತಿಯ ಫಲಿತಾಂಶವನ್ನು ಸಾಧಿಸಿದ್ದಾರೆ.

ಸಿಐಎಸ್‌ಸಿಇ ಫಲಿತಾಂಶ ಪ್ರಕಟ: ಶೇ.99.98ರಷ್ಟು 10ನೇ ಹಾಗೂ ಶೇ. 99.66ರಷ್ಟು 12ನೇ ತರಗತಿ ವಿದ್ಯಾರ್ಥಿಗಳು ಪಾಸ್
ವಿದ್ಯಾರ್ಥಿಗಳು
Published On :

ನವದೆಹಲಿ: ಐಸಿಎಸ್ಇ 10ನೇ ತರಗತಿ ಮತ್ತು ಐಎಸ್ ಸಿ 12ನೇ ತರಗತಿ ಫಲಿತಾಂಶವನ್ನು ಸಿಐಎಸ್‌ಸಿಇ ಶನಿವಾರ ಫಲಿತಾಂಶ ಪ್ರಕಟಿಸಿದ್ದು, 10ನೇ ತರಗತಿ ಬಾಲಕಿಯರು ಮತ್ತು ಬಾಲಕರು ಒಂದೇ ರೀತಿಯ ಫಲಿತಾಂಶವನ್ನು ಸಾಧಿಸಿದ್ದಾರೆ.

ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್(ಸಿಐಎಸ್‌ಸಿಇ) 12ನೇ ತರಗತಿಯ ಫಲಿತಾಂಶದಲ್ಲಿ ಬಾಲಕಿಯರು ಬಾಲಕರನ್ನು 0.2 ಶೇಕಡಾ ಅಂತರದಿಂದ ಮೀರಿಸಿದ್ದಾರೆ. ಫಲಿತಾಂಶವನ್ನು ವೆಬ್ ಸೈಟ್ cisec.org ನಲ್ಲಿ ಚೆಕ್ ಮಾಡಬಹುದು.

ಮಹಾಮಾರಿ ಕೊರೋನಾ ಎರಡನೇ ಅಲೆಯಿಂದಾಗಿ CISCE ಈ ವರ್ಷ ಎರಡೂ ತರಗತಿಗಳ ಪರೀಕ್ಷೆಗಳನ್ನು ರದ್ದುಗೊಳಿಸಿತ್ತು. ಮಂಡಳಿಯು ನಿರ್ಧರಿಸಿದ ಪರ್ಯಾಯ ಮೌಲ್ಯಮಾಪನ ನೀತಿಯ ಮೇಲೆ ಫಲಿತಾಂಶಗಳನ್ನು ಸಿದ್ಧಪಡಿಸಲಾಗಿದೆ.

'10ನೇ ತರಗತಿಯಲ್ಲಿ ಬಾಲಕಿಯರು ಮತ್ತು ಬಾಲಕರು ಶೇಕಡಾ 99.98ರಷ್ಟು ಉತ್ತೀರ್ಣರಾಗಿದ್ದಾರೆ. 12ನೇ ತರಗತಿಯಲ್ಲಿ ಬಾಲಕಿಯರ ಉತ್ತೀರ್ಣ ಶೇಕಡ 99.86ರಷ್ಟಿದ್ದರೆ, ಬಾಲಕರದ್ದು ಶೇಕಡ 99.66 ರಷ್ಟಿದೆ ಎಂದು ಸಿಐಎಸ್ಸಿಇ ಮುಖ್ಯ ಕಾರ್ಯನಿರ್ವಾಹಕ ಮತ್ತು ಕಾರ್ಯದರ್ಶಿ ಗೆರ್ರಿ ಅರಾಥೂನ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.