Sira bypoll

ಬಿಜೆಪಿ ಸಂಘರ್ಷದಿಂದಲೇ ಗೆದ್ದಿದೆ ಶಿರಾದಲ್ಲಿ ಚುನಾವಣೆಯ ಇತಿಹಾಸ ಬದಲಿಸಲಿದ್ದೇವೆ: ತೇಜಸ್ವಿ ಸೂರ್ಯ
ಬಿಜೆಪಿಯ ಇತಿಹಾಸದಲ್ಲಿ ಗೆಲುವು ಸುಲಭವಾಗಿ ಸಿಕ್ಕಿಲ್ಲ, ದೇಶಾದ್ಯಂತ ಈಗ 303 ಬಿಜೆಪಿಯ ಸಂಸದರಿದ್ದಾರೆ, ಪ್ರತಿಯೊಂದನ್ನೂ ಸಂಘರ್ಷದಿಂದ ಗೆದ್ದಿದ್ದೇವೆ ಶಿರಾದಲ್ಲೂ ಸಂಘರ್ಷದಿಂದಲೇ ಗೆಲ್ಲಲಿದ್ದೇವೆ ಎಂದು ಬೆಂಗಳೂರು ದಕ್ಷಿಣ ಸಂಸದ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಶಿರಾ ಉಪಚುನಾವಣೆ ಗೆಲ್ಲಲು ಬಿಜೆಪಿ ಮೈಕ್ರೋ ಮ್ಯಾನೇಜಿಂಗ್ ಜಾತಿ ಸಮೀಕರಣ!
ಕಳೆದ ವರ್ಷದ ಕೆ.ಆರ್ ಪೇಟೆ ಉಪ ಚುನಾವಣೆ ತಂತ್ರವನ್ನೇ ಶಿರದಲ್ಲೂ ಪ್ರಯೋಗಿಸುವುದಾಗಿ ಬಿಜೆಪಿ ತಿಳಿಸಿದೆ. ಆದರೆ ಈ ಬಾರಿ ಮೈಕ್ರೋ ಮ್ಯಾನೇಜಿಂಗ್ ಜಾತಿ ಸಮೀಕರಣ ಪ್ರಯೋಗಿಸಲು ಬಿಜೆಪಿ ಮುಂದಾಗಿದೆ.

ಎವೆರಿ ಡೇ ಈಸ್ ನಾಟ್ ಸಂಡೆ; ಕೆ.ಆರ್ ಪೇಟೆಯಂತೆ ಶಿರಾದಲ್ಲಿ ಕಮಲ ಅರಳಿಸಲಾಗದು: ಎಚ್ ಡಿಕೆ ಟಾಂಗ್
ಆರ್.ಆರ್ ನಗರ ಮತ್ತು ಶಿರಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಹಣಬಲದ ಮೂಲಕ ಗೆಲುವು ಸಾಧಿಸಲು ಬಿಜೆಪಿಯವರು ಹೊರಟಿದ್ದಾರೆ. ಆದರೆ ಶಿರಾದಲ್ಲಿ ಹಣಬಲದಿಂದ ಗೆಲ್ಲಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ಶಿರಾ ಉಪಚುನಾವಣೆ: ತಂದೆ ಜವಾಬ್ದಾರಿ ಹೊತ್ತು ಒತ್ತಡ ತಗ್ಗಿಸಿದ ಪುತ್ರರತ್ನರು!
ತೀವ್ರ ಕುತೂಹಲ ಕೆರಳಿಸಿದ್ದ ರಾಜರಾಜೇಶ್ವರಿ ನಗರ ಮತ್ತು ಶಿರಾ ಉಪ ಚುನಾವಣೆ ಆಡಳಿತಾ ರೂಡ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿ ಮಾರ್ಪಟ್ಟಿದ್ದು, ಶಿರಾ ಉಪಚುನಾವಣೆ ಜವಾಬ್ದಾರಿ ಹೊರುವ ಮೂಲಕ ಬಿವೈ ವಿಜಯೇಂದ್ರ ತಮ್ಮ ತಂದೆ ಬಿಎಸ್ ಯಡಿಯೂರಪ್ಪ ಅವರ ಮೇಲಿನ ಒತ್ತಡ ತಗ್ಗಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಮೊದಲು ಪಕ್ಷ, ನಂತರ ಸ್ನೇಹ: ಶಿರಾ ಬಿಜೆಪಿ ಅಭ್ಯರ್ಥಿ ರಾಜೇಶ್ ಬಗ್ಗೆ ಯತೀಂದ್ರ ಹೇಳಿದ್ದೇನು?
ಶಿರಾ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಪರ ಮಾಜಿ ಸಿಎಂ ಪುತ್ರ ಹಾಗೂ ವರುಣಾ ಶಾಸಕ ಯತೀಂದ್ರ ಸಿದ್ದರಾಮಯ್ಯ ಪ್ರಚಾರದಲ್ಲಿ ಪಾಲ್ಗೋಂಡಿದ್ದರು.

ಶಿರಾ ಉಪಚುನಾವಣೆ: ಸ್ವಾಮೀಜಿ ಭೇಟಿ ಮಾಡಿದ ಜಯಚಂದ್ರ; ಬಿಜೆಪಿಯಿಂದ ಸಣ್ಣ ಸಮುದಾಯಗಳ ಮತ ಬೇಟೆ
ಶಿರಾ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಪಟ್ಟನಾಯಕನಹಳ್ಳಿ ಮಠಕ್ಕೆ ಭೇಟಿ ನೀಡಿ ಕುಂಚಟಿಗ ಒಕ್ಕಲಿಗ ಸ್ವಾಮೀಜಿ ನಂಜಾವಧೂತ ಶ್ರೀಗಳ ಆಶೀರ್ವಾದ ಪಡೆದರು.

70 ವರ್ಷದ ನಂತರ ಶಿರಾದಲ್ಲಿ ಬಿಜೆಪಿ ಮೊದಲ ಬಾರಿ ಖಾತೆ ತೆರೆಯಲಿದೆ: ವಿಜಯೇಂದ್ರ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಶುಕ್ರವಾರ ಶಿರಾ ಉಪಚುನಾವಣೆ ಪ್ರಚಾರದ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಶಿರಾ ಉಪಚುನಾವಣೆ: ದಲಿತರ ಓಲೈಕೆಗಾಗಿ ಟಿಬಿ ಜಯಚಂದ್ರ ಎರಡು ಬಾರಿ ನಾಮಪತ್ರ ಸಲ್ಲಿಕೆ
ಕಾಂಗ್ರೆಸ್ ಅಭ್ಯರ್ಥಿ ಟಿ ಬಿ ಜಯಚಂದ್ರ ಗುರುವಾರ ತಮ್ಮ ಅಭಿಮಾನಿಗಳ ಜೊತೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಉಪಸ್ಥಿತರಿದ್ದರು.

ಶಿರಾ ಉಪಚುನಾವಣೆ: ಅಮ್ಮಾಜಮ್ಮ ಪರವಾಗಿ ಎಚ್.ಡಿ. ರೇವಣ್ಣ ನಾಮಪತ್ರ ಸಲ್ಲಿಕೆ
ಶಿರಾ ಉಪಚುನಾವಣೆ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಪರವಾಗಿ ಮಾಜಿ ಸಚಿವ ಎಚ್.ಡಿ ರೇವಣ್ಣ ಬುಧವಾರ ನಾಮಪತ್ರ ಸಲ್ಲಿಸಲಿದ್ದಾರೆ.

