Sira bypoll

ಶಿರಾದಲ್ಲಿ 'ಅನುಕಂಪ'ಕ್ಕೆ ಬೆಲೆಯಿಲ್ಲ, ಅಭಿವೃದ್ಧಿಗೆ ಆದ್ಯತೆ; ನನ್ನ ಸೋಲಿಸಿದ್ದಕ್ಕೆ ಜನ ಪಶ್ಚಾತ್ತಾಪ ಪಡುತ್ತಿದ್ದಾರೆ: ಟಿಬಿ ಜಯಚಂದ್ರ
ಕಾಂಗ್ರೆಸ್ ಹಿರಿಯ ನಾಯಕ ಟಿಬಿ ಜಯಚಂದ್ರ ಶಿರಾ ವಿಧಾನಸಭೆ ಉಪ ಚುನಾವಣೆಗಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ, 10ನೇ ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಅವರು ನಾಲ್ಕೂವರೆ ದಶಕಗಳಲ್ಲಿ ತಾವು ಮಾಡಿರುವ ಅಭಿವೃದ್ಧಿ ಕೆಲಸಗಳು ಈ ಬಾರಿ ಚುನಾವಣೆಯಲ್ಲಿ ತಮ್ಮ ಕೈ ಹಿಡಿಯಲಿದೆ.

ಶಿರಾ ಉಪಚುನಾವಣೆ: ಡಿಕೆಶಿಯಿಂದ ಟಿಬಿ ಜಯಚಂದ್ರ ಹೆಸರು ಪ್ರಸ್ತಾಪ; ಹೌಹಾರಿದ ಸುರ್ಜೇವಾಲಾ!
ಶಿರಾ ಉಪಚುನಾವಣೆಗೆ ಟಿಬಿ ಜಯಚಂದ್ರ ಅವರನ್ನು ಕಣಕ್ಕಿಳಿಸಿಲು ಕಾಂಗ್ರೆಸ್ ಹೈಕಮಾಂಡ್ ಗೆ ಇಷ್ಟವಿರಲಿಲ್ಲ, ಬೇರೋಬ್ಬ ಅಭ್ಯರ್ಥಿಯನ್ನು ಘೋಷಿಸಲು ನಿರ್ಧರಿಸಿತ್ತು ಎನ್ನಲಾಗಿದೆ.

ಬಯಸಿದ್ದು ಪುತ್ರನಿಗೆ, ಟಿಕೆಟ್ ಸಿಕ್ಕಿದ್ದು ತಾಯಿಗೆ; ಒಲ್ಲದ ಮನಸ್ಸಿನಿಂದ ಶಿರಾದಿಂದ ಅಮ್ಮಾಜಮ್ಮ ಕಣಕ್ಕೆ
ಮುಂದಿನ ಮೂರು ವರ್ಷಗಳ ಕಾಲ ಶಿರಾ ದಲ್ಲಿ ಜೆಡಿಎಸ್ ಶಾಸಕರೇ ಇರುತ್ತಾರೆ, ಪಕ್ಷ ಯಾವ ವಿಶ್ವಾಸದ ಮೇಲೆ ನನ್ನನ್ನು ಕಣಕ್ಕಿಳಿಸಿದೆಯೋ ಅದನ್ನು ನಾನು ಪೂರ್ಣಗೊಳಿಸುತ್ತೇನೆ ಎಂದು ಶಿರಾ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಾ ಹೇಳಿದ್ದಾರೆ.

ಶಿರಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗೆ ಕೊರೋನಾ: ಆಸ್ಪತ್ರೆಯಲ್ಲಿ ಚಿಕಿತ್ಸೆ
ನವೆಂಬರ್ 3 ರಂದು ನಡೆಯಲಿರುವ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಮಾಜಿ ಸಚಿವ ದಿವಂಗತ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಶಿರಾ ಉಪಚುನಾವಣೆ ಹಿನ್ನೆಲೆ: ಕಾಡುಗೊಲ್ಲ ಅಭಿವೃದ್ಧಿ ನಿಗಮ ಅಸ್ಥಿತ್ವಕ್ಕೆ
ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಂಡಳಿ ಮತ್ತು ಗೊಲ್ಲ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಯ ವಿಚಾರ ಗೊಂದಲ ತಾರಕಕ್ಕೇರಿ, ಸರ್ಕಾರ ಅಂತಿಮವಾಗಿ "ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಂಡಳಿ" ಸ್ಥಾಪನೆ ಮಾಡಲು ಆದೇಶ ಹೊರಡಿಸಿದೆ. ಈ ಮೂಲಕ ಗೊಂದಲಕ್ಕೆ ತೆರೆ ಎಳೆದಂತಾಗಿದೆ.

ಶಿರಾದಲ್ಲಿ ಬಂಡಾಯದ ಸೂಚನೆ: ಡಿಕೆಶಿ ಭೇಟಿ ಮಾಡಿದ ರಾಜಣ್ಣ
ಶಿರಾ ವಿಧಾನಸಭೆ ಉಪಚುನಾವಣೆಗೆ ಕಾಂಗ್ರೆಸ್ ನಿಂದ ಪ್ರಬಲ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ, ಟಿಕೆಟ್ ಸಿಗದ ಕಾರಣ ಬಂಡಾಯದ ಮುನ್ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ರಾಜಣ್ಣ ಅವರೊಂದಿಗೆ ಸಮಾಲೋಚನೆ ನಡೆಸಿದರು.

