ಶಿರಾ ಉಪಚುನಾವಣೆ: ಸ್ವಾಮೀಜಿ ಭೇಟಿ ಮಾಡಿದ ಜಯಚಂದ್ರ; ಬಿಜೆಪಿಯಿಂದ ಸಣ್ಣ ಸಮುದಾಯಗಳ ಮತ ಬೇಟೆ
ಶಿರಾ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಪಟ್ಟನಾಯಕನಹಳ್ಳಿ ಮಠಕ್ಕೆ ಭೇಟಿ ನೀಡಿ ಕುಂಚಟಿಗ ಒಕ್ಕಲಿಗ ಸ್ವಾಮೀಜಿ ನಂಜಾವಧೂತ ಶ್ರೀಗಳ ಆಶೀರ್ವಾದ ಪಡೆದರು.

ತುಮಕೂರು: ಶಿರಾ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಪಟ್ಟನಾಯಕನಹಳ್ಳಿ ಮಠಕ್ಕೆ ಭೇಟಿ ನೀಡಿ ಕುಂಚಟಿಗ ಒಕ್ಕಲಿಗ ಸ್ವಾಮೀಜಿ ನಂಜಾವಧೂತ ಶ್ರೀಗಳ ಆಶೀರ್ವಾದ ಪಡೆದರು.
ಮಾಜಿ ಸಚಿವ ಎಚ್ ಆಂಜನೇಯ ಜಯಚಂದ್ರ ಪರ ಪ್ರಚಾರ ನಡೆಸಿ ದಲಿತ ಸಮುದಾಯದ ಜೊತೆ ಸಭೆ ನಡೆಸಿದರು.
ಇನ್ನು ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸೂಚನೆ ಮೇರೆಗೆ ಬಿಜೆಪಿ ಮಾಜಿ ವಕ್ತಾರ ಹಾಗೂ ಮಡಿವಾಳ ಸುಮದಾಯದ ಪ್ರಮುಖ ಮುಖಂಡ ರಘು ಕೌಟಿಲ್ಯ ಶಿರಾಗೆ ಭೇಟಿ ನೀಡಿ ಸಣ್ಣ ಸಣ್ಣ ಸಮುದಾಯಗಳ ಜೊತೆ ಸಭೆ ನಡೆಸಿದರು.
ಕಾಯಕ ಸಮುದಾಯ ಶಿರಾದ ಮತ ಬ್ಯಾಂಕ್ ಆಗಿದೆ. ಆದರೆ ಚುನಾವಣಾ ಫಲಿತಾಂಶದಲ್ಲಿ ಮಹತ್ವದ ಪಾತ್ರ ವಹಿಸಲಿದೆ, ಭಾನುವಾರ ವಿಜಯೇಂದ್ರ ಸಮ್ಮುಖಧಲ್ಲಿ ಹಲವು ಮಂದಿ ಬಿಜೆಪಿ ಸೇರಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪತ್ನಿ ಮೈತ್ರಾ ದೇವಿ ಅವರ ವರ್ಷದ ತಿಥಿ ಅಂಗವಾಗಿ ವಿಜಯೆಂದ್ರ ಅವರು ಶಿರಾ ಉಪಚುನಾವಣೆ ಪ್ರಚಾರದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಶಿಕಾರಿಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ, ಮಂಗಳವಾರದಿಂದ ಮತ್ತೆ ಪ್ರಚಾರ ಕಾರ್ಯಕ್ಕೆ ಆಗಮಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


