Sira bypoll

ನನಸಾಯಿತು ದಶಕಗಳ ಕನಸು: ಮದಲೂರು ಕೆರೆಗೆ ನೀರು ಹರಿಸಿ ಭರವಸೆ ಈಡೇರಿಸಿದ ಸಿಎಂ ಯಡಿಯೂರಪ್ಪ
ಶಿರಾ ಉಪಚುನಾವಣೆ ವೇಳೆ ರಾಜ್ಯ ಬಿಜೆಪಿ ಸರ್ಕಾರ ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಆರು ತಿಂಗಳಲ್ಲಿ ಹೇಮಾವತಿ ನೀರನ್ನು ಮದಲೂರು ಕೆರೆಗೆ ಬಿಡುತ್ತೇವೆ ಎಂದು ಶಿರಾ ಉಪಚುನಾವಣೆ ವೇಳೆ ಸಿಎಂ ವಾಗ್ದಾನ ಮಾಡಿದ್ದರು.

ವಿಜಯೇಂದ್ರ ವೈಭವೀಕರಣಕ್ಕೆ ನನ್ನ ಅಭ್ಯಂತರವಿಲ್ಲ; ಆದ್ರೆ ಒಬ್ಬರ ಪ್ರಯತ್ನದಿಂದ ಗೆಲುವು ಸಾಧ್ಯವಿಲ್ಲ: ಸಚಿವ ಈಶ್ವರಪ್ಪ
ಬಿಜೆಪಿ ಎಂದಿಗೂ ಒಬ್ಬ ವ್ಯಕ್ತಿಯ ಮೇಲೆ ಚುನಾವಣೆ ಮಾಡುವುದಿಲ್ಲ. ಸಂಘಟಿತ ಪ್ರಯತ್ನದಿಂದ ಚುನಾವಣೆ ಮಾಡಿ ಗೆಲುವು ಸಾಧಿಸುತ್ತಿದ್ದೇವೆ. ಆದರೆ, ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ವೈಭವೀಕರಿಸುವ ಕೆಲಸಗಳನ್ನು ಕೆಲವರು ಮಾಡುತ್ತಿದ್ದಾರೆಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಶಿರಾ ಚುನಾವಣೆಯಿಂದ ಪ್ರೀತಮ್ ಗೌಡಗೆ ಹೊಸ ಜವಾಬ್ದಾರಿ: ಸಿಟಿ ರವಿ ಸ್ಥಾನಕ್ಕೆ ಹಾಸನ ಶಾಸಕ?
ಶಿರಾದಲ್ಲಿ ಬಿಜೆಪಿಯ ಡಾ.ರಾಜೇಶ್ ಗೌಡ ವಿಜಯದ ಮೂಲಕ ಹಾಸನ ಬಿಜೆಪಿ ಶಾಸಕ ಪ್ರೀತಮ್ ಗೌಡ ಅವರ ವೃತ್ತಿಗೆ ಹೊಸ ಹುರುಪು ನೀಡಿದ್ದು. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸಿಟಿ ರವಿ ನೇಮಕಗೊಂಡಿದ್ದು, ಅವರು ನಿರ್ವಹಿಸುತ್ತಿದ್ದ ಪ್ರವಾಸೋದ್ಯಮ ಖಾತೆಯನ್ನು ಪ್ರೀತಂ ಗೌಡ ಅವರಿಗೆ ನೀಡುವ ಸಾಧ್ಯತೆಯಿದೆ.

ಬೂತ್ ಮಟ್ಟದಲ್ಲಿ ಗೆದ್ದರೆ ಕ್ಷೇತ್ರ ಗೆಲ್ಲಬಹುದು: ಶಿರಾದಲ್ಲಿ ವರ್ಕೌಟ್ ಆಯ್ತು ಅಮಿತ್ ಶಾ ಕಾನ್ಸೆಪ್ಟ್!
ಶಿರಾ ಮತ್ತು ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದು ಬೀಗುತ್ತಿದೆ. ಶಿರಾದಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ರಾಜೇಶ್ ಗೌಡ ಕಾಂಗ್ರೆಸ್ ಹಿರಿಯ ನಾಯಕ ಜಯಚಂದ್ರ ಅವರನ್ನು ಸೋಲಿಸಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಭದ್ರಕೋಟೆ ಛಿದ್ರ: ಶಿರಾದಲ್ಲಿ ಮೊದಲ ಬಾರಿಗೆ ಅರಳಿದ ಕಮಲ
ಶಿರಾ ಉಪ ಚುನಾವಣೆಯಲ್ಲಿ ಡಾ.ರಾಜೇಶ್ ಗೌಡ ಗೆಲ್ಲುವ ಮೂಲಕ ಬಿಜೆಪಿ ಹೊಸ ಇತಿಹಾಸ ಸೃಷ್ಟಿಸಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನ ಸಾಂಪ್ರಾದಾಯಿಕ ಭದ್ರಕೋಟೆಯಾಗಿರುವ ಶಿರಾದಲ್ಲಿ ಮೊಟ್ಟ ಮೊದಲ ಬಾರಿಗೆ ಕಮಲ ಅರಳಿದೆ,

ಉಪಚುನಾವಣೆ ಫಲಿತಾಂಶ: ದೇವೇಗೌಡ, ವಿಜಯೇಂದ್ರ, ಡಿಕೆ ಶಿವಕುಮಾರ್ ಸಾಮರ್ಥ್ಯಕ್ಕೆ ಸತ್ವ ಪರೀಕ್ಷೆ!
ನವೆಂಬರ್ 3 ರಂದು ನಡೆದ ಶಿರಾ ಮತ್ತು ಆರ್ ಆರ್ ನಗರ ಉಪಚುನಾವಣೆ ಫಲಿತಾಂಶ ಇಂದು ಹೊರ ಬೀಳಲಿದೆ. ಮೂರು ಪಕ್ಷಗಳ ಅಭ್ಯರ್ಥಿಗಳ ಹಣೆ ಬರಹ ಇಂದು ನಿರ್ಧಾರವಾಗಲಿದೆ.

ಉಪಚುನಾವಣೆ ಎಫೆಕ್ಟ್: ಶಿರಾದಲ್ಲಿ 50 ಮಂದಿಗೆ ಕೊರೋನಾ ಪಾಸಿಟಿವ್
ಶಿರಾ ಉಪಚುನಾವಣೆ ಸಂದರ್ಭದಲ್ಲಿ ಉಂಟಾದ ಜನ ದಟ್ಟಣೆಯ ಕಾರಣ ಶೇ.20 ರಷ್ಟು ಜನಸಂಖ್ಯೆಗೆ ಸೋಂಕು ತಟ್ಟಿದ್ದು, ಅವರನ್ನೆಲ್ಲಾ ಪರೀಕ್ಷೆಗೆ ಒಳಪಡಿಸಬೇಕೆಂದು ಸರ್ಕಾರ ಸೂಚಿಸಿತ್ತು.

ಶಿರಾ ಉಪ ಚುನಾವಣೆಯಲ್ಲಿ 'ಧರ್ಮ ಸಂಕಟ': ಮತದಾನ ಮಾಡದ ನಂಜಾವಧೂತ ಸ್ವಾಮೀಜಿ
ಕುಂಚಟಿಗ ಒಕ್ಕಲಿಗ ಸಮುದಾಯದ ಧರ್ಮ ಗುರು ಪಟ್ಟನಾಯಕನಹಳ್ಳಿಯ ಸ್ಪಟಿಕಪುರಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ಮಂಗಳವಾರ ನಡೆದ ಶಿರಾ ಉಪ ಚುನಾವಣೆ ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿದ್ದಾರೆ.

ಫಲಿತಾಂಶಕ್ಕೆ ಮುನ್ನವೇ ಟಿ.ಬಿ.ಜಯಚಂದ್ರ ಸೋಲೊಪ್ಪಿಕೊಂಡಿದ್ದಾರೆ: ಎಸ್ ಟಿ ಸೋಮಶೇಖರ್
ಮತಯಂತ್ರದ ಕುರಿತಾಗಿ ಅನುಮಾನ ವ್ಯಕ್ತಪಡಿಸುವ ಮೂಲಕ ಶಿರಾ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಫಲಿತಾಂಶಕ್ಕೆ ಮುನ್ನವೇ ಸೋಲೊಪ್ಪಿಕೊಂಡಿದ್ದಾರೆ ಎಂದು ಸಚಿವ ಎಸ್ಟಿ ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ.

