ಶಿರಾ ಉಪ ಚುನಾವಣೆಯಲ್ಲಿ 'ಧರ್ಮ ಸಂಕಟ': ಮತದಾನ ಮಾಡದ ನಂಜಾವಧೂತ ಸ್ವಾಮೀಜಿ
ಕುಂಚಟಿಗ ಒಕ್ಕಲಿಗ ಸಮುದಾಯದ ಧರ್ಮ ಗುರು ಪಟ್ಟನಾಯಕನಹಳ್ಳಿಯ ಸ್ಪಟಿಕಪುರಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ಮಂಗಳವಾರ ನಡೆದ ಶಿರಾ ಉಪ ಚುನಾವಣೆ ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿದ್ದಾರೆ.

ತುಮಕೂರು: ಕುಂಚಟಿಗ ಒಕ್ಕಲಿಗ ಸಮುದಾಯದ ಧರ್ಮ ಗುರು ಪಟ್ಟನಾಯಕನಹಳ್ಳಿಯ ಸ್ಪಟಿಕಪುರಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ಮಂಗಳವಾರ ನಡೆದ ಶಿರಾ ಉಪ ಚುನಾವಣೆ ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿದ್ದಾರೆ.
ಶಿರಾ ಉಪ ಚುನಾವಣೆಗೆ ಸ್ಪರ್ಧಿಸಿದ್ದ ಮೂರು ಪಕ್ಷದ ಅಭ್ಯರ್ಥಿಗಳು ಕುಂಚಟಿಗ ಸಮುದಾಯದವರೇ ಆಗಿರುವ ಕಾರಣ ಯಾರಿಗೆ ಮತ ನೀಡಬೇಕು ಎಂಬ ಧರ್ಮ ಸಂಕಟದಲ್ಲಿ ಸಿಲುಕಿದ್ದ ಸ್ವಾಮೀಜಿಗಳು ಮತದಾನಕ್ಕೆ ಗೈರಾಗಿದ್ದರು. ಮತದಾನ ಪ್ರಕ್ರಿಯೆ ಮುಗಿದ 1 ಗಂಟೆ ನಂತರ ಅಂದರೆ ಸಂಜೆ 7 ಗಂಟೆಗೆ ಮಠಕ್ಕೆ ವಾಪಾಸಾದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸತ್ಯನಾರಾಯಣ ಅವರಿಗೆ ಶ್ರೀಗಳು ಬೆಂಬಲ ಸೂಚಿಸಿದ್ದರು, ಸತ್ಯನಾರಾಯಣ ಅವರು ಗೆಲುವು ಸಾಧಿಸಿದ್ದರು.
ಒಕ್ಕಲಿಗ ಸಮುದಾಯದ ಧ್ವನಿಯಾಗಿರುವ ಶ್ರೀಗಳು ಹಲವು ಒಕ್ಕಲಿಗ ನಾಯಕರ ಬೆಂಬಲಕ್ಕೆ ನಿಂತಿದ್ದಾರೆ. 2012 ರಲ್ಲಿ ಸದಾನಂದಗೌಡ ಅವರನ್ನು ಸಿಎಂ ಹುದ್ದೆಯಿಂದ ಬಿಜೆಪಿ ತೆಗೆದು ಹಾಕಿದಾಗ ಬೀದಿಗಳಿದು ಶ್ರೀಗಳು ಪ್ರತಿಭಟನೆ ನಡೆಸಿದರು.
ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಮನೆ ಮೇಲೆ ಸಿಬಿಐ ದಾಳಿ ನಡೆದ ಸಂದರ್ಭದಲ್ಲಿ ಅವರಿಗೆ ನೈತಿಕ ಬೆಂಬಲ ನೀಡಿದ್ದರು.ಉಪ ಚುನಾವಣೆಗೆ ಕೆಲವು ದಿನಗಳು ಬಾಕಿಯಿರುವಾಗ ಡಿ.ಕೆ ಶಿವಕುಮಾರ್ ಮತ್ತು ಆರ್ ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಎಚ್.ಕುಸುಮಾ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು.
ಇತ್ತೀಚೆಗೆ ಸಿಎಂ ಪುತ್ರ ಬಿವೈ ರಾಘವೇಂದ್ರ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು, ಈ ಉಪಚುನಾವಣೆಯಲ್ಲಿ ಕೆಲವು ಸಮುದಾಯದ ಮತಗಳನ್ನು ಬಿಜೆಪಿಗೆ ಸ್ಥಳಾಂತರಿಸುವುದನ್ನು ಈ ಭೇಟಿ ನಿಲ್ಲಿಸಿರಬಹುದು ಎಂದು ವಿಶ್ಲೇಷಕ ಪುಟ್ಟಲಿಂಗಯ್ಯ ತಿಳಸಿದ್ದಾರೆ.
ತುಮಕೂರಿನಿಂದ 2018 ರ ವಿಧಾನಸಭೆ ಮತ್ತು 2019 ರ ಲೋಕಸಭಾ ಚುನಾವಣೆಯಲ್ಲಿ ಕೇಸರಿ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ದೊಡ್ಡ ಪಾತ್ರ ವಹಿಸಿದ್ದರಿಂದ ಸಮುದಾಯದ ಮತದಾರರು ಬಿಜೆಪಿಗೆ ಹಿಂಜರಿಯುವುದಿಲ್ಲ. ಶಿರಾ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕುಂಚಟಿಗ ಮತದಾರರು ಇದ್ದು ಹಲವು ವರ್ಷಗಳಿಂದ ಜೆಡಿಎಸ್ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾ ಬಂದಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಾರಿ ಅಹಿಂದ ಮತಗಳು ಕಾಂಗ್ರೆಸ್ ನ ಟಿ,ಬಿ ಜಯಚಂದ್ರ ಅವರಿಗೆ ವರವಾಗಲಿದೆ ಎಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


