ಹಮಾಸ್ ಉಗ್ರರ ಪರ ಧ್ವನಿಯೆತ್ತುವ ಕಾಂಗ್ರೆಸ್‌ಗೆ ಸ್ಮಿತ್ ಮಚ್ಚಾರ್ ಶೌರ್ಯ ಕಣ್ಣಿಗೆ ಕಾಣಿಸಲಿಲ್ಲವೇ..?
33,000 ಅಡಿ ಎತ್ತರದಲ್ಲಿ ಮತಾಂಧನ ವಿರುದ್ಧ ಹೋರಾಡಿ 174 ಪ್ರಯಾಣಿಕರನ್ನು ರಕ್ಷಿಸಿದ ಹೆಮ್ಮೆಯ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಸಾಹಸಕ್ಕೆ ಜಗತ್ತೇ ಹೆಮ್ಮೆಪಡುತ್ತಿದೆ. ಆದರೆ, ಕಾಂಗ್ರೆಸ್ ನಾಯಕರಿಗೆ ಈ ವೀರನ ಕುರಿತು ಮಾತನಾಡದೆ ಇರುವುದಕ್ಕೆ ಗಂಟಲು ಕೆಟ್ಟಿದೆಯೇ?

ಬೆಂಗಳೂರು: 33,000 ಅಡಿ ಎತ್ತರದಲ್ಲಿ ಮತಾಂಧನ ವಿರುದ್ಧ ಹೋರಾಡಿ 174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಸಾಹಸವನ್ನು ಇಡೀ ಜಗತ್ತೇ ಮೆಚ್ಚುತ್ತಿದೆ. ಆದರೆ, ಕಾಂಗ್ರೆಸ್‌ನ ಹಿರಿಯ ನಾಯಕರು ಈ ವೀರನ ಶೌರ್ಯದ ಕುರಿತು ಮಾತನಾಡದಿರುವುದು ಏಕೆ ಎಂದು ಬಿಜೆಪಿ ಕರ್ನಾಟಕ ಪ್ರಶ್ನಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯ ಘಟಕ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಸೋನಿಯಾ ಗಾಂಧಿ ಅವರನ್ನು ಟೀಕಿಸಿದೆ.
ಸ್ಮಿತ್ ಮಚ್ಚಾರ್ ಅವರ ಸಾಹಸವನ್ನು ಶ್ಲಾಘಿಸಲು ಕಾಂಗ್ರೆಸ್ ನಾಯಕರಿಗೆ ಮತಬ್ಯಾಂಕ್ ರಾಜಕಾರಣ ಅಡ್ಡಿಯಾಗಿದೆಯೇ ಎಂದು ಪ್ರಶ್ನಿಸಿದೆ.
33,000 ಅಡಿ ಎತ್ತರದಲ್ಲಿ ಮತಾಂಧನ ವಿರುದ್ಧ ಹೋರಾಡಿ 174 ಪ್ರಯಾಣಿಕರನ್ನು ರಕ್ಷಿಸಿದ ಹೆಮ್ಮೆಯ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಸಾಹಸಕ್ಕೆ ಜಗತ್ತೇ ಹೆಮ್ಮೆಪಡುತ್ತಿದೆ. ಆದರೆ, ಓಲೈಕೆಯ ಪರಾಕಾಷ್ಠೆಯಲ್ಲಿ ಮುಳುಗಿರುವ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಸೋನಿಯಾ ಗಾಂಧಿ ಅವರಿಗೆ ಈ ವೀರನ ಕುರಿತು ಮಾತನಾಡದೆ ಇರುವುದಕ್ಕೆ ಗಂಟಲು ಕೆಟ್ಟಿದೆಯೇ? ಎಂದು ಪ್ರಶ್ನಿಸಿದೆ.
ಓಲೈಕೆ ರಾಜಕಾರಣಕ್ಕಾಗಿ ಆತ್ಮಾಭಿಮಾನವನ್ನೇ ಮಾರಿಕೊಂಡ ಕಾಂಗ್ರೆಸ್ಸಿಗರಿಗೆ ಹೆಮ್ಮೆಯ ಭಾರತೀಯನ ಸಾಹಸದ ಕುರಿತು ಮೆಚ್ಚುಗೆ ವ್ಯಕ್ತಪಡಿಸಲು ವೋಟ್ ಬ್ಯಾಂಕ್ ರಾಜಕಾರಣ ಅಡ್ಡಿಯಾಯಿತೇ? ಹಮಾಸ್ ಉಗ್ರರ ಪರ ಧ್ವನಿಯೆತ್ತುವ ಕಾಂಗ್ರೆಸ್‌ಗೆ ಸ್ಮಿತ್ ಮಚ್ಚಾರ್ ಶೌರ್ಯ ಕಣ್ಣಿಗೆ ಕಾಣಿಸಲಿಲ್ಲವೇ?
ಇದು ಕಾಂಗ್ರೆಸ್‌ನ ಕಡೆಗಣನೆ ಅಲ್ಲ, ಒಂದು ಸಮುದಾಯದ ಓಲೈಕೆಗಾಗಿ ದೇಶದ ಹೆಮ್ಮೆಯ ಮಗನನ್ನು ನಿರ್ಲಕ್ಷಿಸಿರುವ ಕಾಂಗ್ರೆಸ್ ನಾಯಕರ ಬೌದ್ಧಿಕ ದಿವಾಳಿತನ ಅಷ್ಟೇ ಎಂದು ಕಿಡಿಕಾರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



