Shivarajkumar

ಶಿವರಾಜ್ ಕುಮಾರ್ 124ನೇ ಸಿನಿಮಾ ಮೂಲಕ ಕನ್ನಡಕ್ಕೆ ಮೆಹ್ರಿನ್ ಪಿರ್ಜಾಡಾ ಪಾದಾರ್ಪಣೆ!
ರಾಮ್ ಧೂಳಿಪುಡಿ ನಿರ್ದೇಶನದ ಶಿವರಾಜ್ ಕುಮಾರ್ ನಟನೆಯ 124ನೇ ಸಿನಿಮಾ ಮೂಲಕ ನಟಿ ಮೆಹ್ರೀನ್ ಪಿರ್ಜಾಡಾ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ನಟನೆಯನ್ನು ನಾನು ಎಂಜಾಯ್ ಮಾಡುತ್ತೇನೆ: ಶಿವರಾಜ್ ಕುಮಾರ್
ಜಯಣ್ಣ-ಭೋಗೇಂದ್ರ ನಿರ್ಮಾಪಕರು ಶಿವರಾಜ್ ಕುಮಾರ್ ಅವರ ಐದನೇ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಶಿವಣ್ಣ ಕೂಡ ರಿಷಬ್ ಶೆಟ್ಟಿ ಜೊತೆ ಕೆಲಸ ಮಾಡುತ್ತಿರುವುದನ್ನು ಖಚಿತಪಡಿಸಿದ್ದಾರೆ.

ಸ್ಲೋ ಡೌನ್ ಎಂಬ ಮಾತೇ ಇಲ್ಲ... ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ 'ಸೆಂಚುರಿ ಸ್ಟಾರ್' ಶಿವಣ್ಣ ಬ್ಯೂಸಿ
ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ ಅವರು ಸೋಮವಾರ ತಮ್ಮ 59ನೇ ವಸಂತಕ್ಕೆ ಕಾಲಿಟ್ಟಿದ್ದು, ಕೊರೋನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ್ದಾರೆ.

ಇದೀಗ ನಿರ್ಮಾಪಕರ ಜೀವನದ ಪ್ರಶ್ನೆಯಾಗಿದೆ: ಸಿನಿಮಾಗಳ ಒಟಿಟಿ ರಿಲೀಸ್ ಬಗ್ಗೆ ಶಿವಣ್ಣನ ಮಾತು
ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಇತರರಂತೆ, ಈ ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲೇ ಉಳಿಯದೆ ಅಗತ್ಯವಿದ್ದವರಿಗೆ ಕೋವಿಡ್ ಪರಿಹಾರವನ್ನು ನೀಡುತ್ತಿದ್ದಾರೆ. ಆಹಾರ ಕಿಟ್‌ಗಳನ್ನು ಒದಗಿಸುತ್ತಿದ್ದಾರೆ. ಪ್ರತಿದಿನ 500 ಕ್ಕೂ ಹೆಚ್ಚು ಜನರಿಗೆ "ಆಸರೆ" ಮೂಲಕ ಆಹಾರವನ್ನು ನೀಡುತ್ತಿದ್ದಾರೆ.

ಕನ್ನಡಿಗರೆಂದು ಯಾರೂ ಸಹಾಯ ಮಾಡುತ್ತಿಲ್ಲ: ಸಹಾಯಕ್ಕಾಗಿ ಶಿವಣ್ಣನಿಗೆ ಅಂಗಲಾಚಿದ ನಟಿ ವಿಜಯಲಕ್ಷ್ಮಿ
ತಮಿಳುನಾಡಿನಲ್ಲಿ ನೆಲೆಸಿರುವ ನಟಿ ವಿಜಯಲಕ್ಷ್ಮಿ ಇದೀಗ ತಾವು ಸಂಕಷ್ಟಕ್ಕೆ ಸಿಲುಕಿದ್ದು ಯಾರು ಸಹಾಯಕ್ಕೆ ಮುಂದೆ ಬರುತ್ತಿಲ್ಲ. ಅಲ್ಲದೆ ನಾನು ಕನ್ನಡಿಗಳೆಂದು ನಮಗೆ ಯಾರು ಸಹಾಯ ಮಾಡುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ವಿಜಯ್ ಧುಳಿಪುಡಿ ನಿರ್ದೇಶನದ ರೋಮ್ಯಾಂಟಿಕ್ ಪ್ರೇಮಕಥೆಯಲ್ಲಿ ಶಿವರಾಜ್ ಕುಮಾರ್
ವಿಜಯ್ ಮಿಲ್ಟನ್ ನಿರ್ದೇಶನದ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟನೆಯ ಸಿನಿಮಾ ಶೂಟಿಂಗ್ ಕೊನೆಯ ಹಂತದಲ್ಲಿದೆ.

ನಿರ್ದೇಶಕ ಹರ್ಷ ಜೊತೆ ಶಿವಣ್ಣ ಹೊಸ ಸಿನಿಮಾ: ಜನವರಿಯಲ್ಲಿ ಚಿತ್ರೀಕರಣಕ್ಕೆ ಭರ್ಜರಿ ತಯಾರಿ
ಲಾಕ್ ಡೌನ್ ಮುಕ್ತಾಯಗೊಂಡ ಬಳಿಕ ನಟ ಶಿವರಾಜ್ ಕುಮಾರ್ ಬಿಡುವಿಲ್ಲದಂತೆ ಶೂಟಿಂಗ್ ನಲ್ಲಿ ತೊಡಗಿದ್ದಾರೆ. 122 ಸಿನಿಮಾಗಳಲ್ಲಿ ಅಭಿನಯಿಸಿರುವ ಶಿವಣ್ಣ, ಭಜರಂಗಿ-2 ಸಿನಿಮಾದ ಬಾಕಿ ಉಳಿದಿದ್ದ ಭಾಗಗಳನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ವಿಜಯ್ ಮಿಲ್ಟನ್ ನ ಶಿವಪ್ಪ ಸಿನಿಮಾದಲ್ಲಿ ತೊಡಗಿದ್ದಾರೆ.

ಸೆಂಚುರಿ ಸ್ಟಾರ್ ಶಿವಣ್ಣ ರಿಲೀಸ್ ಮಾಡಿದ ಪ್ರಜ್ವಲ್ ದೇವರಾಜ್ 'ಅಬ್ಬರ'ದ ಮೋಷನ್ ಪೋಸ್ಟರ್
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮುಂದಿನ ಚಿತ್ರ "ಅಬ್ಬರ" ದ ಟೈಟಲ್ ಹಾಗೂ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಅನ್ನು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಬಿಡುಗಡೆ ಮಾಡಿದ್ದಾರೆ. "ಅಬ್ಬರ"ಕ್ಕೆ ಕೆ. ರಾಮ್ ನಾರಾಯಣ್ ನಿರ್ದೇಶನವಿದೆ.

'ಶಿವಪ್ಪ'ನಿಗೆ ಬಹುಭಾಷಾ ಬೆಡಗಿ ಅಂಜಲಿ ಜೋಡಿ!
ವಿಜಯ್ ಮಿಲ್ಟನ್ ನಿರ್ದೇಶನದ ಮುಂದಿನ ಚಿತ್ರ "ಶಿವಪ್ಪ"ಕ್ಕಾಗಿ ದಕ್ಷಿಣ ಭಾರತದ ನಟಿ ಅಂಜಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅವರಿಗೆ ಜೋಡಿಯಾಗಲಿದ್ದಾರೆ.

