ಸ್ಲೋ ಡೌನ್ ಎಂಬ ಮಾತೇ ಇಲ್ಲ... ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ 'ಸೆಂಚುರಿ ಸ್ಟಾರ್' ಶಿವಣ್ಣ ಬ್ಯೂಸಿ
ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ ಅವರು ಸೋಮವಾರ ತಮ್ಮ 59ನೇ ವಸಂತಕ್ಕೆ ಕಾಲಿಟ್ಟಿದ್ದು, ಕೊರೋನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ್ದಾರೆ.

ಬೆಂಗಳೂರು: ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ ಅವರು ಸೋಮವಾರ ತಮ್ಮ 59ನೇ ವಸಂತಕ್ಕೆ ಕಾಲಿಟ್ಟಿದ್ದು, ಕೊರೋನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ್ದಾರೆ.
ವಯಸ್ಸು 59 ಆದರೂ ತಮ್ಮ ನಟನೆ, ಡ್ಯಾನ್ಸ್ ಜೊತೆಗೆ ಸದಾ ಆ್ಯಕ್ಟಿವ್ ಆಗಿರುವ ಶಿವರಾಜ್ ಕುಮಾರ್ ಅವರು, ಸಾಲು ಸಾಲು ಸಿನಿಮಾಗಳೊಂದಿಗೆ ಫುಲ್ ಬ್ಯೂಸಿಯಾಗಿದ್ದಾರೆ.
ಈಗಾಗಲೇ ಶಿವರಾಜ್ ಕುಮಾರ್ ಅವರು ನಟಿಸಿರುವ ಭಜರಂಗಿ 2 ಚಿತ್ರ ಬಿಡುಗಡೆಗೆ ಸಿದ್ಧವಾಗಿ ನಿಂತಿದ್ದು, ಈ ನಡುವಲ್ಲೇ ಶಿವಣ್ಣ ಅವರು ತಮ್ಮ 123ನೇ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲು ಸಜ್ಜಾಗಿದ್ದಾರೆ. ಈ ಚಿತ್ರದ ಟೈಟಲ್'ನ್ನು ಇಂದು ಪುನೀತ್ ರಾಜ್ ಕುಮಾರ್ ಅವರು ಇಂದು ಅನಾವರಣಗೊಳಿಸಲಿದ್ದಾರೆ.
ಇನ್ನು ಶಿವಣ್ಣ ಅವರ 124 ಚಿತ್ರವನ್ನು ತೆಲುಗು ನಿರ್ದೇಶಕ ರಾಮ್ ಧುಲಿಪುಡಿಯವರು ನಿರ್ದೇಶಿಸುತ್ತಿದ್ದು, 125ನೇ ಚಿತ್ರವನ್ನು ಹರ್ಷ ನಿರ್ದೇಶಿಸುತ್ತಿದ್ದಾರೆ. ಇದರ ಜೊತೆಗೆ ಮತ್ತಷ್ಟು ಸಿನಿಮಾಗಳಲ್ಲಿ ನಟಿಸಲೂ ಶಿವಣ್ಣ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆಂದು ತಿಳಿದುಬಂದಿದೆ.
ನಂದ ಕಿಶೋಸ್, ಎಸ್. ನಾರಾಯಣ್, ರಿಷಬ್ ಶೆಟ್ಟಿ, ಹೆಚ್. ಲೋಹಿತ್ ಹಾಗೂ ಹೊಸ ನಿರ್ದೇಶಕರ ಸಿನಿಮಾಗಳಲ್ಲೂ ನಟಿಸಲು ಶಿವಣ್ಣ ಒಪ್ಪಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.
ನಿರ್ದೇಶಕರು ಹಾಗೂ ನಿರ್ಮಾಪಕರು ನನ್ನ ಮೇಲೆ ತೋರಿಸುತ್ತಿರುವ ಪ್ರೀತಿಯನ್ನು ಹೇಳಲು ಸಾಧ್ಯವಿಲ್ಲ. ಸ್ಟಾರ್ ನಿರ್ದೇಶಕರನ್ನು ಮಾತ್ರ ಭೇಟಿಯಾಗಲು ಬಯಸುವ ನಟ ನಾನಲ್ಲ. ಈ ಪ್ರೀತಿಗೆ ಇದೂ ಒಂದು ಕಾರಣವಿರಬಹುದು. ಹೊಸಬರಾಗಲೀ, ಪ್ರಸಿದ್ಧ ನಿರ್ದೇಶಕರಾಗಲಿ ಒಳ್ಳೆಯ ಕಥೆಗಳನ್ನು ಹೊಂದಿರುವ ಯಾವುದೇ ನಿರ್ಮಾಪಕರನ್ನು ನಾನು ಸ್ವಾಗತಿಸುತ್ತೇನೆ ಶಿವಣ್ಣ ಅವರು ಹೇಳಿದ್ದಾರೆ.
ಸೃಜಶೀಲ ವ್ಯಕ್ತಿಗಳಿಗೆ ನನ್ನ ಮನೆ ಬಾಗಿಲು ಸದಾ ತೆರೆದಿರುತ್ತದೆ. ನಾನು ಅವರೊಂದಿಗೆ ಸಿನಿಮಾ ಮಾಡಿದ್ದರೂ, ಮಾಡದಿದ್ದರೂ ಪ್ರತೀಯೊಬ್ಬ ನಿರ್ದೇಶಕನನ್ನೂ ನಾನು ಗೌರವಿಸುತ್ತೇನೆ. ಪ್ರತೀಯೊಂದು ಚಿತ್ರಕಥೆ ಆಯ್ಕೆ ಮಾಡುವುದಕ್ಕೂ ಕಾಲಾವಕಾಶ ತೆಗೆದುಕೊಳ್ಳುತ್ತೇನೆ. ಯಾರೊಬ್ಬರೂ ಬೇಸರಗೊಳ್ಳುವಂತೆ ಮಾಡುವುದಿಲ್ಲ. ಕೊರೋನಾ 2ನೇ ಲಾಕ್ಡೌನ್ ನಲ್ಲಿ 15-20 ಸ್ಕ್ರಿಪ್ಟ್ ಗಳನ್ನು ಓದಿದ್ದೇನೆಂದು ತಿಳಿಸಿದ್ದಾರೆ.
ಇದೇ ವೇಳೆ ಭಜರಂಗಿ 2 ಚಿತ್ರ ಕುರಿತು ಮಾತನಾಡಿದ ಅವರು, ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಚಿತ್ರ ನೋಡಲು ಬಹಳ ಉತ್ಸುಕನಾಗಿದ್ದೆ. ಚಿತ್ರ ನೋಡಿದ ಬಳಿಕ ಹರ್ಷ ಅವರೊಂದಿಗೆ ಮಾತನಾಡದೆ ಇರಲು, ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸದೆ ಇರಲು ಸಾಧ್ಯವಾಗಲಿಲ್ಲ. ನಾನು ಮಾಡಿದ ಸಿನಿಮಾ ಎಂದು ನಾನು ಹೇಳುತ್ತಿಲ್ಲ. ಪ್ರತೀಯೊಬ್ಬ ನಟ ಉತ್ತಮವಾಗಿ ಪಾಲ್ಗೊಳ್ಳುವಂತೆ ಹರ್ಷ ಮಾಡಿದ್ದಾರೆ. ಹೊಸ ಕಲಾವಿದರು ಪ್ರತಿಭೆ ತೋರಿಸಲು ಅವಕಾಶ ಮಾಡಿಕೊಡಲಾಗಿದೆ. ಸಿನಿಮಾ ಮೂಡಿ ಬಂದಿರುವ ರೀತಿ ಬಹಳ ಸಂತಸ ತಂದಿದೆ. ಕೊರೋನಾ ಕಾರಣದಿಂದ ಚಿತ್ರ ಬಿಡುಗಡೆಗೆ ಕಾಲಾವಕಾಶ ತೆಗೆದುಕೊಳ್ಳಲಿದೆ. ಚಿತ್ರಮಂದಿರಕ್ಕೆ ಸಿನಿಮಾ ಬಂದ ಕೂಡಲೇ ಪ್ರೇಕ್ಷಕರನ್ನಂತೂ ಚಿತ್ರ ಬೇಸರಗೊಳ್ಳುವಂತೆ ಮಾಡುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


