'ಶಿವಪ್ಪ'ನಿಗೆ ಬಹುಭಾಷಾ ಬೆಡಗಿ ಅಂಜಲಿ ಜೋಡಿ!
ವಿಜಯ್ ಮಿಲ್ಟನ್ ನಿರ್ದೇಶನದ ಮುಂದಿನ ಚಿತ್ರ "ಶಿವಪ್ಪ"ಕ್ಕಾಗಿ ದಕ್ಷಿಣ ಭಾರತದ ನಟಿ ಅಂಜಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅವರಿಗೆ ಜೋಡಿಯಾಗಲಿದ್ದಾರೆ.

ವಿಜಯ್ ಮಿಲ್ಟನ್ ನಿರ್ದೇಶನದ ಮುಂದಿನ ಚಿತ್ರ "ಶಿವಪ್ಪ"ಕ್ಕಾಗಿ ದಕ್ಷಿಣ ಭಾರತದ ನಟಿ ಅಂಜಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅವರಿಗೆ ಜೋಡಿಯಾಗಲಿದ್ದಾರೆ. ನಿರ್ಮಾಪಕ ಕೃಷ್ಣ ಸಾರ್ಥಕ್ ಈ ವಿಷಯವನ್ನು ದೃಢಪಡಿಸಿದ್ದು ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಕೆಲಸ ಮಾಡಿದ ಈ ನಟ ಈ ಹಿಂದೆ"ಹೊಂಗನಸು: ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಪವನ್ ಒಡೆಯರ್ ಅವರ "ರಣವಿಕ್ರಮ"ದಲ್ಲಿ ನಟ ಪುನೀತ್ ಗೆ ಜೋಡಿಯಾಗಿದ್ದ ಅಂಜಲಿ ಈಗ ಶಿವಣ್ಣ ಎದುರು ಅಭಿನಯಿಸುತ್ತಿದ್ದಾರೆ.
ಅಂಜಲಿ ಪಾಲಿಗಿದು ಸ್ಯಾಂಡಲ್ ವುಡ್ ನ ಮೂರನೇ ಚಿತ್ರವಾಗಿದೆ. . "ಎಲ್ಲಾ ಯೋಜನೆಯ ಪ್ರಕಾರ ನಡೆದರೆ ನವೆಂಬರ್ 23 ರಿಂದ ಪ್ರಾರಂಭವಾಗುವ ಮೊದಲ ಶೆಡ್ಯೂಲ್ ನಲ್ಲಿ ಅಂಜಲಿ ಟೀಂ ಗೆ ಜತೆಯಾಗಲಿದ್ದಾರೆ." ಎಂದು ಕೃಷ್ಣ ಸಾರ್ಥಕ್ ಹೇಳುತ್ತಾರೆ.

"ಶಿವಪ್ಪ" ಪಾತ್ರವರ್ಗದ ಭಾಗವಾಗಿ ಧನಂಜಯ್, ಪೃಥ್ವಿ ಅಂಬರ್, ಶಶಿಕುಮಾರ್ ಸೇರಿದಂತೆ ಖ್ಯಾತ ನಟ ನಟಿಯರಿದ್ದಾರೆ. ಇವರಲ್ಲದೆ ಹಿರಿಯ ನಟಿ, ರಾಜಕಾರಣಿ ಉಮಾಶ್ರೀ ಸಹ ಅಭಿನಯಿಸುತ್ತಿದ್ದಾರೆ. "ರತ್ನನ್ ಪ್ರಪಂಚ"ದೊಡನೆ ಗೆ ಐದು ವರ್ಷಗಳ ನಂತರ ಮತ್ತೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿರುವ ಉಮಾಶ್ರೀ ಈಗ ತಮ್ಮ ಮುಂದಿನ ಯೋಜನೆಗೆ ಸಹಿ ಹಾಕಿದ್ದಾರೆ.
ಚಿತ್ರ ನಿರ್ಮಾಪಕರ ಪ್ರಕಾರ "ಶಿವಪ್ಪ" ದಲ್ಲಿ ಉಮಾಶ್ರೀ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಆಕ್ಷನ್ ಪ್ಯಾಕ್ಡ್ ಕಮರ್ಷಿಯಲ್ ಎಂಟರ್‌ಟೈನರ್ ಚಿತ್ರದಲ್ಲಿ ಶಿವರಾಜ್‌ಕುಮಾರ್ ಅವರನ್ನು ಮೂರು ಲುಕ್ ಗಳಲ್ಲಿ ತೋರಿಸಲಾಗಿದೆ. ಚಿತ್ರಕ್ಕೆ ಅನೂಪ್ ಸೀಳನ್ ಸಂಗೀತವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


