Shiv Sena

ಪಕ್ಷ ಬಿಟ್ಟು ಹೋಗಲು ಇಚ್ಛಿಸುವವರು ಹೋಗಲಿ... ನಾನು ಹೊಸ ಶಿವಸೇನೆ ಕಟ್ಟುತ್ತೇನೆ: ಸಿಎಂ ಉದ್ಧವ್ ಠಾಕ್ರೆ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶುಕ್ರವಾರ ರಾತ್ರಿ ಬಂಡಾಯ ನಾಯಕ ಏಕನಾಥ್ ಶಿಂಧೆ ಮತ್ತು ಬಿಜೆಪಿ ವಿರುದ್ಧ ಹರಿಹಾಯ್ದಿದ್ದು ಪಕ್ಷಕ್ಕೆ ಮತ ಹಾಕಿದ ಶಿವಸೇನೆ ನಾಯಕರನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ

ಶಿವಸೇನೆ ಇಬ್ಭಾಗ! ಯಾರೂ ಬಾಳಸಾಹೇಬ್ ಹೆಸರು ಬಳಸಕೂಡದು ಎಂದ ಉದ್ಧವ್ ಠಾಕ್ರೆ
ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗೂ ಸರ್ಕಾರದಲ್ಲಿನ ಬಿಕ್ಕಟ್ಟಿನ ನಡುವೆ ಬಂಡಾಯ ಶಾಸಕ ಏಕನಾಥ್ ಶಿಂಧೆ ತಮ್ಮ ಬಣಕ್ಕೆ ಶಿವಸೇನೆ ಬಾಳಾಸಾಹೇಬ್ ಹೆಸರು ನೀಡಲು ಮುಂದಾಗಿದ್ದು, ಯಾರೂ ಕೂಡಾ ಪಕ್ಷದ ಸಂಸ್ಥಾಪಕರ ಹೆಸರನ್ನು ಬಳಸಕೂಡದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಖಡಕ್ ಸಂದೇಶ ರವಾನಿಸಿದ್ದಾರೆ.

'ಮಹಾ' ಸಂಘರ್ಷ: ಉದ್ಧವ್ ಬಣದ ಅನರ್ಹತೆ ಬಾಣಕ್ಕೆ ರೆಬೆಲ್ ನಾಯಕರ ತಿರುಗೇಟು, ಡೆಪ್ಯುಟಿ ಸ್ಪೀಕರ್ ವಿರುದ್ಧ ನಿರ್ಣಯ!
ಮಹಾರಾಷ್ಟ್ರದಲ್ಲಿ ಭುಗಿಲೆದ್ದಿರುವ ರಾಜಕೀಯ ಸಂಘರ್ಷ ತಾರಕಕ್ಕೇರಿದ್ದು, ರೆಬೆಲ್ ನಾಯಕರನ್ನು ಅನರ್ಹಗೊಳಿಸುವ ಶಿವಸೇನೆ ಉದ್ಧವ್ ಠಾಕ್ರೆ ಕಾರ್ಯತಂತ್ರಕ್ಕೆ ತಿರುಗೇಟು ನೀಡಿರುವ ಏಕನಾಥ್ ಶಿಂಧೆ ನೇತೃತ್ವದ ರೆಬೆಲ್ ಶಾಸಕರಣ ಬಣ ಡೆಪ್ಯುಟಿ ಸ್ಪೀಕರ್ ವಿರುದ್ಧ ನಿರ್ಣಯ ಕೈಗೊಂಡು ಪದಚ್ಯುತಗೊಳಿಸುವ ಕಾರ್ಯತಂತ್ರಕ್ಕೆ ಚಾಲನೆ ನೀಡಿದೆ.

ನಾನು ಮುಖ್ಯಮಂತ್ರಿ ಬಂಗಲೆ ತೊರೆದಿದ್ದೇನೆ, ಆದರೆ ನನ್ನ ಪಟ್ಟನ್ನು ಸಡಿಲಿಸಿಲ್ಲ: ಮಹಾ ಸಿಎಂ ಉದ್ಧವ್ ಠಾಕ್ರೆ
ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಸರ್ಕಾರ ತಮ್ಮದೇ ಪಕ್ಷದ ನಾಯಕರ ಬಂಡಾಯದಿಂದ ಅಲ್ಪಮತಕ್ಕೆ ಕುಸಿದಿದೆ. ಶಿವಸೇನಾ ಬಂಡಾಯ ನಾಯಕ ಏಕನಾಥ್ ಶಿಂಧೆ ಕೊಟ್ಟ ಶಾಕ್ ನಿಂದ ಕಂಗಾಲಾಗಿರೋ ಉದ್ಧವ್ ಠಾಕ್ರೆ...

'ರಾಷ್ಟ್ರೀಯ ಪಕ್ಷ' ಎಲ್ಲ ರೀತಿಯ ಸಹಾಯದ ಭರವಸೆ ನೀಡಿದೆ: ಏಕನಾಥ್ ಶಿಂಧೆ
ಮಹಾರಾಷ್ಟ್ರ ರಾಜಕೀಯ ಸಂಘರ್ಷ ಮುಂದುವರೆದಿರುವಂತೆಯೇ ಬಂಡಾಯ ಶಾಸಕರ ಬಣಕ್ಕೆ 'ರಾಷ್ಟ್ರೀಯ ಪಕ್ಷ'ವೊಂದು ಎಲ್ಲ ರೀತಿಯ ಸಹಾಯದ ಭರವಸೆ ನೀಡಿದೆ ಎಂದು ಬಂಡಾಯ ಶಾಸಕರ ನಾಯಕ ಏಕನಾಥ್ ಶಿಂಧೆ ಹೇಳಿದ್ದಾರೆ.

'ಮಹಾ' ಸಂಘರ್ಷ; ಏಕನಾಥ್ ಶಿಂಧೆ ಸೇರಿ 12 ರೆಬೆಲ್ ಶಾಸಕರ ಅನರ್ಹತೆಗೆ ಶಿವಸೇನೆ ಅರ್ಜಿ
ಮಹಾರಾಷ್ಟ್ರದಲ್ಲಿ ಭುಗಿಲೆದ್ದಿರುವ ರಾಜಕೀಯ ಸಂಘರ್ಷ ತಾರಕಕ್ಕೇರಿದ್ದು, ಇದೀಗೆ ರೆಬೆಲ್ ಶಾಸಕರನ್ನು ಹಣಿಯಲು ಸಿಎಂ ಉದ್ಧವ್ ಠಾಕ್ರೆ ಬಣ ಶಾಸಕತ್ವ ಅನರ್ಹತೆ ಬಾಣ ಹೂಡಿದ್ದು, ಬಂಡಾಯ ಶಾಸಕರ ನಾಯಕ ಏಕನಾಥ್ ಶಿಂಧೆ ಸೇರಿದಂತೆ 12 ರೆಬೆಲ್ ಶಾಸಕರ ಅನರ್ಹತೆಗೆ ಶಿವಸೇನೆ ಮನವಿ ಮಾಡಿದೆ.

'ಮಹಾ' ಸಂಘರ್ಷ; ರೆಬೆಲ್ ಶಾಸಕರ ಅನರ್ಹತೆಗೆ ಮನವಿ ಸಲ್ಲಿಕೆಗೆ ಠಾಕ್ರೆ ಬಣದ ಸಿದ್ಧತೆ
ಮಹಾರಾಷ್ಟ್ರದಲ್ಲಿ ಭುಗಿಲೆದ್ದಿರುವ ರಾಜಕೀಯ ಸಂಘರ್ಷ ತಾರಕಕ್ಕೇರಿದ್ದು, ಇದೀಗೆ ರೆಬೆಲ್ ಶಾಸಕರನ್ನು ಹಣಿಯಲು ಸಿಎಂ ಉದ್ಧವ್ ಠಾಕ್ರೆ ಬಣ ಶಾಸಕತ್ವ ಅನರ್ಹತೆ ಬಾಣ ಹೂಡಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.

ಎಂವಿಎ ಸರ್ಕಾರ ತೊರೆಯಲು ಸಿದ್ಧ, 24 ಗಂಟೆಯೊಳಗೆ ಮುಂಬೈಗೆ ಬನ್ನಿ: ಶಿವಸೇನಾ ಬಂಡಾಯ ಶಾಸಕರಿಗೆ ರಾವತ್ ಕರೆ
ಏಕನಾಥ್ ಶಿಂಧೆ ನೇತೃತ್ವದಲ್ಲಿನ ಬಂಡಾಯ ಶಾಸಕರು 24 ಗಂಟೆಯೊಳಗೆ ಅಸ್ಸಾಂನಿಂದ ಮುಂಬೈಗೆ ಮರಳಿದರೆ ಮಹಾ ವಿಕಾಸ್ ಆಘಾದಿ ಸರ್ಕಾರದಿಂದ ಹೊರಬರಲು ಶಿವಸೇನೆ ಸಿದ್ಧವಾಗಿದೆ ಮತ್ತು ಸಮಸ್ಯೆಯನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ಚರ್ಚಿಸಲಾಗುವುದು ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಗುರುವಾರ ಹೇಳಿದ್ದಾರೆ.

'ಮಹಾ' ಬಂಡಾಯ: ರಾಜಿನಾಮೆ ವದಂತಿ ಬೆನ್ನಲ್ಲೇ ಅಧಿಕೃತ ನಿವಾಸ ತೊರೆದ ಸಿಎಂ ಉದ್ಧವ್ ಠಾಕ್ರೆ!
ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿರುವಂತೆಯೇ ಇತ್ತ ಸಿಎಂ ಉದ್ಧವ್ ಠಾಕ್ರೆ ಅವರು, ಮುಂಬೈನ ತಮ್ಮ ಅಧಿಕೃತ ನಿವಾಸವನ್ನು ತೊರೆದು ಸ್ವಂತ ನಿವಾಸಕ್ಕೆ ಕುಟುಂಬ ಸಮೇತ ಮರಳಿದ್ದಾರೆ.

