Shiv Sena

ಆದಿತ್ಯ ಠಾಕ್ರೆ ವಿರುದ್ಧ ಕ್ರಮವಿಲ್ಲ: ಉದ್ಧವ್ ಪುತ್ರನೆಡೆಗೆ ಶಿಂಧೆ ಕ್ಯಾಂಪ್ ಮೃದು ಧೋರಣೆ
ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ ಬಳಿಕ ಸಿಎಂ ಏಕನಾಥ್ ಶಿಂಧೆ ಅವರ ಶಿವಸೇನೆ ಬಣ, ವಿಪ್ ಉಲ್ಲಂಘನೆ ಮಾಡಿದ್ದಕ್ಕಾಗಿ ಶಿವಸೇನೆಯ ಉದ್ಧವ್ ಠಾಕ್ರೆ ಬಣಕ್ಕೆ ನೊಟೀಸ್ ಜಾರಿಗೊಳಿಸಿದೆ.

'ಮಹಾ' ಸರ್ಕಾರ ರಚನೆಯಲ್ಲಿ ಸ್ಫೋಟಕ ತಿರುವು: ಶಿವಸೇನೆಗೆ ಬಿಜೆಪಿ ಬೆಂಬಲ; ಸಿಎಂ ಆಗಿ ಶಿಂಧೆ ಪ್ರಮಾಣವಚನ!
ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಆಘಾಡಿ ಸರ್ಕಾರ ಪತನದ ಬೆನ್ನಲ್ಲೇ ಶಿವಸೇನೆ ಬಂಡಾಯ ಶಾಸಕರು ಹಾಗೂ ಬಿಜೆಪಿ ಸೇರಿ ಮೈತ್ರಿ ಸರ್ಕಾರ ರಚನೆಗೆ ಮುಂದಾಗಿತ್ತು. ಆದರೆ ಇದೀಗ ಸರ್ಕಾರ ರಚನೆಯಲ್ಲಿ ಸ್ಫೋಟಕ ತಿರುವು ಪಡೆದುಕೊಂಡಿದ್ದು ಏಕನಾಥ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿಯ ದೇವೇಂದ್ರ ಫಡ್ನವಿಸ್ ಘೋಷಿಸಿದ್ದಾರೆ.

'ಮಹಾ ಸಂಘರ್ಷ': 'ವಿಧಾನಸಭೆ ಅಧಿವೇಶನವೇ ಪರಿಹಾರ'; ಶಿವಸೇನೆ ಅರ್ಜಿ ವಿಚಾರಣೆ ಆರಂಭಿಸಿದ ಸುಪ್ರೀಂ ಕೋರ್ಟ್
ವಿಶ್ವಾಸ ಮತ ಯಾಚನೆಗೆ ಸೂಚನೆ ನೀಡಿರುವ ಮಹಾರಾಷ್ಟ್ರ ರಾಜ್ಯಪಾಲರ ನಿರ್ಧಾರದ ವಿರುದ್ಧ ಶಿವಸೇನೆ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ರಾಜಕೀಯ 'ಸಂಘರ್ಷ' ಇತ್ಯರ್ಥಕ್ಕೆ ವಿಧಾನಸಭೆ ಅಧಿವೇಶನವೇ ಪರಿಹಾರ ಎಂದು ಅಭಿಪ್ರಾಯಪಟ್ಟಿದೆ.

ನಾಳೆ ಇಡಿ ಮುಂದೆ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ: ಶಿವಸೇನೆ ಸಂಸದ ಸಂಜಯ್ ರಾವತ್
ಜಾರಿ ನಿರ್ದೇಶನಾಲಯ ತಮಗೆ ಸಮನ್ಸ್ ಜಾರಿ ಮಾಡಿರುವ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿದ ಶಿವಸೇನೆ ಸಂಸದ ಸಂಜಯ್ ರಾವತ್ ಅವರು, ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ಹೋರಾಡುವುದನ್ನು ತಡೆಯುವ "ಪಿತೂರಿ" ಇದು...

ಮಹಾರಾಷ್ಟ್ರ ಬಿಕ್ಕಟ್ಟು: ದ್ರೋಹಿಗಳು ಗೆಲ್ಲುವುದಿಲ್ಲ; ಶಿಂಧೆ ಬಣಕ್ಕೆ ಆದಿತ್ಯ ಠಾಕ್ರೆ ಟಾಂಗ್
ಮಹಾರಾಷ್ಟ್ರ ಸರ್ಕಾರದಲ್ಲಿ ರಾಜಕೀಯ ಬಿಕ್ಕಟ್ಟು ಜೋರಾಗ್ತಿದ್ದು ಏಟು ಎದಿರೇಟು ಮುಂದುವರೆದಿದೆ. ಸತತ ಮೂರನೇ ದಿನವೂ ಸಿಎಂ ಪುತ್ರ, ಸಚಿವ ಆದಿತ್ಯ ಠಾಕ್ರೆ ರೆಬೆಲ್ ಶಾಸಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು ಅವರು ದೇಶದ್ರೋಹಿಗಳು, ಬಂಡುಕೋರರಲ್ಲ ಎಂದಿದ್ದಾರೆ.

ರಾಜ್ ಠಾಕ್ರೆ ಜೊತೆ ಏಕನಾಥ್ ಶಿಂಧೆ ಎರಡು ಬಾರಿ ಮಾತುಕತೆ: ಹೆಚ್ಚಿದ ಕುತೂಹಲ
ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟು ದಿನಕಳೆಯುತ್ತಿದ್ದಂತೆಯೇ ಕುತೂಹಲ ಹೆಚ್ಚಾಗುವಂತೆ ಮಾಡಿದ್ದು, ಈ ನಡುವಲ್ಲೇ ಶಿವಸೇನೆ ನಾಯಕ ಏಕನಾಥ್ ಶಿಂದೆ ಅವರು, ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರೊಂದಿಗೆ...

ಅಖಾಡಕ್ಕಿಳಿದ ರಾಜ್ಯಪಾಲ: ಶಿವಸೇನೆ ಬಂಡಾಯ ನಾಯಕರ ಕುಟುಂಬಗಳಿಗೆ ಭದ್ರತೆ ಒದಗಿಸುವಂತೆ ಸೂಚನೆ!
ಶಿವಸೇನೆಯ ಬಂಡಾಯ ಶಾಸಕರಿಗೆ ಭದ್ರತೆ ಒದಗಿಸುವಂತೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದಾರೆ.

'ಮಹಾ ಸಂಘರ್ಷ'; ಶಿವಸೇನಾ ಬಂಡಾಯ ಶಾಸಕರಿಗೆ ‘ವೈ ಪ್ಲಸ್’ ಭದ್ರತೆ ಒದಗಿಸಿದ ಕೇಂದ್ರ ಸರ್ಕಾರ
ಕೇಂದ್ರ ಸರ್ಕಾರವು ಶಿವಸೇನಾದ 15 ಮಂದಿ ಬಂಡಾಯ ಶಾಸಕರಿಗೆ ‘Y+’ ಶ್ರೇಣಿಯ ಸಿಆರ್‌ಪಿಎಫ್ ಭದ್ರತೆ ಒದಗಿಸಿದೆ ಎಂದು ಮೂಲಗಳು ತಿಳಿಸಿರುವುದಾಗಿ ಸುದ್ದಿಸಂಸ್ಥೆ ‘ಎನ್‌ಎನ್ಐ’ ಟ್ವೀಟ್ ಮಾಡಿದೆ.

ಸರ್ಕಾರ ರಚಿಸಲು ಶಿವಸೇನೆ ಬಂಡಾಯ ಶಾಸಕರಿಗೆ ಬಿಜೆಪಿ ಬೆಂಬಲ: ಮುರುಗೇಶ್ ನಿರಾಣಿ
ಅವಕಾಶಗಳು ಬಾಗಿಲು ತಟ್ಟಿದಾಗ ಕಣ್ಣು ಮುಚ್ಚುವ ಸನ್ಯಾಸಿಗಳ ಪಕ್ಷ ಬಿಜೆಪಿಯಲ್ಲ’ ಎಂದು ಮಧ್ಯಮ ಮತ್ತು ಬೃಹತ್ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಶನಿವಾರ ಹೇಳಿದ್ದಾರೆ.

