Sachin Tendulkar

ಸಚಿನ್ ತೆಂಡೂಲ್ಕರ್ ಉತ್ತಮ ನಾಯಕನಲ್ಲ ಎಂದು ಭಾವಿಸಬೇಡಿ: ಮದನ್ ಲಾಲ್
ವೃತ್ತಿ ಜೀವನದಲ್ಲಿ ಸಕ್ರಿಯರಾಗಿದ್ದ ಕಾಲಘಟ್ಟದಲ್ಲಿ ಒಟ್ಟು 98 ಪಂದ್ಯಗಳಲ್ಲಿ ಭಾರತ ತಂಡದ ನಾಯಕರಾಗಿದ್ದ ಸಚಿನ್ ತೆಂಡೂಲ್ಕರ್ ಕುರಿತು ವಿಶ್ವ ಕಪ್(1983) ವಿಜೇತ ಭಾರತ ತಂಡದ ಸದಸ್ಯ ಮದನ್ ಲಾಲ್ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

ಟಿ20 ವಿಶ್ವಕಪ್ ಆಯೋಜನೆ ಬಗ್ಗೆ ಆಸ್ಟ್ರೇಲಿಯಾ ನಿರ್ಧರಿಸಬೇಕು: ಸಚಿನ್
ಮುಂಬರುವ ಟಿ20 ವಿಶ್ವಕಪ್ ಆಯೋಜನೆ ಕುರಿತು ಕ್ರಿಕೆಟ್ ಆಸ್ಟ್ರೇಲಿಯಾವೇ ನಿರ್ಧರಿಸಬೇಕು ಎಂದು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಮತ್ತೊಬ್ಬ ಗವಾಸ್ಕರ್-ತೆಂಡೂಲ್ಕರ್ ರೂಪಿಸುವುದು ಅಸಾಧ್ಯ: ಪಾಕ್ ಮಾಜಿ ಕ್ರಿಕೆಟಿಗ ಮಿಯಾಂದಾದ್
ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಸುನೀಲ್ ಗವಾಸ್ಕರ್ ಕೂಡ ಒಬ್ಬರು. ಅವರು 1987ರಲ್ಲಿ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳುತ್ತಿದ್ದಂತೆ ಭಾರತೀಯ ಅಭಿಮಾನಿಗಳು ಒಬ್ಬ ಅದ್ಭುತ ಆಟಗಾರನನ್ನು ಕಳೆದುಕೊಳ್ಳುತ್ತಿದ್ದೇವೆಂದು ಕಣ್ಣೀರು ಹಾಕಿದ್ದರು.

ಪುತ್ರನಿಗೆ ಹೇರ್ ಕಟ್ ಮಾಡಿದ ಸಚಿನ್: ವಿಡಿಯೋ ವೈರಲ್!
ಕೊರೋನಾ ಸಂದರ್ಭದಲ್ಲಿ ಸ್ವತಃ ತಾವೇ ಹೇರ್ ಕಟ್ ಮಾಡಿಕೊಂಡಿದ್ದ ಮಾಸ್ಟರ್ ಬ್ಲಾಸ್ಟರ್, ಈಗ ತಮ್ಮ ಪುತ್ರ ಅರ್ಜುನ್ ತೆಂಡೂಲ್ಕರ್ ಗೆ ಹೇರ್ ಕಟ್ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಚಿನ್ ಅವರ ಶಾರ್ಜಾ ಸಿಡಿಲಬ್ಬರದ ಆಟವನ್ನು ಆಡಬೇಕೆಂಬ ಆಸೆ ವ್ಯಕ್ತಪಡಿಸಿದ ವಿರಾಟ್ ಕೊಹ್ಲಿ!
ಭಾರತೀಯ ಕ್ರಿಕೆಟ್ ಪ್ರೇಮಿಗಳು ಎಂದಿಗೂ ಮರೆಯಲಾರದ, ಶಾರ್ಜಾದಲ್ಲಿ ಸಚಿನ್ ತೆಂಡೂಲ್ಕರ್ ಅವರ ಸಿಡಿಲಬ್ಬರದ ಬ್ಯಾಟಿಂಗನ್ನು ವಿರಾಟ್ ಕೊಹ್ಲಿ ನೆನಪಿಸಿಕೊಂಡಿದ್ದಾರೆ.

ಸಚಿನ್ ತೆಂಡೂಲ್ಕರ್ 190 ರನ್ ಗೆ ಔಟ್ ಆಗಿದ್ದರು.. ಆದರೆ ಅಂಪೈರ್ ಪ್ರೇಕ್ಷಕರರಿಗೆ ಹೆದರಿ ಔಟ್ ಕೊಡಲಿಲ್ಲ; ಡೇಲ್ ಸ್ಟೇಯ್ನ್
ಭಾರತದ ಸಚಿನ್ ತೆಂಡೂಲ್ಕರ್ ಮೊಟ್ಟ ಮೊದಲ ದ್ವಿಶತಕ ಸಿಡಿಸಿದ್ದ ಪಂದ್ಯದಲ್ಲಿ ಅವರು 190 ರನ್ ಗಳಿಗೆ ಔಟ್ ಆಗಿದ್ದರು. ಆದರೆ ಅಂಪೈರ್ ಪ್ರೇಕ್ಷಕರ ಕೂಗಾಟಕ್ಕೆ ಹೆದರಿ ಔಟ್ ಕೊಡಲಿಲ್ಲ ಎಂದು ದಕ್ಷಿಣ ಆಫ್ರಿಕಾ ತಂಡದ ವೇಗಿ ಡೇಲ್ ಸ್ಟೇಯ್ನ್ ಹೇಳಿದ್ದಾರೆ.

ಸಚಿನ್ ಮತ್ತು ವಿರಾಟ್ ನಡುವಣ ವ್ಯತ್ಯಾಸವನ್ನು ವಿವರಿಸಿದ ಸುರೇಶ್ ರೈನಾ
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಬಹುತೇಕ ದಾಖಲೆಗಳನ್ನು ಮುರಿದಿರುವ ಭಾರತ ತಂಡದ ಹಾಲಿ ನಾಯಕ ವಿರಾಟ್ ಕೊಹ್ಲಿ, ತೆಂಡೂಲ್ಕರ್ ಹೆಸರಲ್ಲಿರುವ 100 ಅಂತಾರಾಷ್ಟ್ರೀಯ ಶತಕಗಳ ದಾಖಲೆಯನ್ನು ಮುರಿಯಬಲ್ಲ ಸಾಮರ್ಥ್ಯ ಹೊಂದಿದ್ದಾರೆ

ರಿಷಿ ಕಪೂರ್ ನಿಧನಕ್ಕೆ ಕ್ರೀಡಾ ಪಟುಗಳ ಕಂಬನಿ
ಹಿರಿಯ ನಟ ರಿಷಿ ಕಪೂರ್ ನಿಧನಕ್ಕೆ ಚಿತ್ರರಂಗ ಹಾಗೂ ಗಣ್ಯಾತಿ ಗಣ್ಯರು ಕಂಬನಿ ಮಿಡಿದಿದ್ದಾರೆ. ಭಾರತದ ಖ್ಯಾತನಾಮ ಕ್ರೀಡಾ ಪಟುಗಳು ಸಹ ರಿಷಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಕೊಹ್ಲಿ, ಸೆಹ್ವಾಗ್, ಸಚಿನ್ಗೆ ಅತ್ಯುತ್ತಮ ವಿರೋಧಿಗಳ ಪಟ್ಟ
ಆಸ್ಟ್ರೇಲಿಯಾ ತಂಡದ ಮಾಜಿ ಬ್ಯಾಟ್ಸ್ ಮನ್ ಮೈಕಲ್ ಹಸ್ಸಿ ಆಯ್ಕೆ ಮಾಡಿರುವ ಟೆಸ್ಟ್ ಕ್ರಿಕೆಟ್ ನ ಅತ್ಯುತ್ತಮ ವಿರೋಧಿಗಳ ಇಲೆವೆನ್ ತಂಡದಲ್ಲಿ ಭಾರತದ ಬ್ಯಾಟಿಂಗ್ ಮಾಸ್ಟರ್ ಗಳಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ.

