RSS

'ಕಾಂಗ್ರೆಸ್ ಪಕ್ಷದ ಸ್ವತಂತ್ರ ಪೂರ್ವ ಹೋರಾಟದ 25 % ಕಲಿತುಕೊಂಡ್ರೆ ಖಾಕಿ ಚಡ್ಡಿ, ಕರಿ ಟೋಪಿ, ಕೈಯಲ್ಲಿ ದೊಣ್ಣೆ ಹಿಡ್ಕೊಂಡೋರು ಊರು ಬಿಟ್ಟು ಓಡಿ ಹೋಗ್ತಾರೆ': ಬಿ ಕೆ ಹರಿಪ್ರಸಾದ್
ಸರ್ವಧರ್ಮ ಸಮಬಾಳು, ಸಮಪಾಲು ಎಂಬ ಮಹಾತ್ಮಾ ಗಾಂಧಿಯವರ ತತ್ವ ಸಿದ್ಧಾಂತವನ್ನು, ತ್ರಿವರ್ಣ ಧ್ವಜವನ್ನು ಮತ್ತು ದೇಶದ ಸಂವಿಧಾನವನ್ನು ಒಪ್ಪಿಕೊಂಡರೆ ನಾವು ಅವರನ್ನು ಟೀಕೆ ಮಾಡುವುದಿಲ್ಲ, ಅವರು ನಮ್ಮ ಶತ್ರುಗಳಲ್ಲ, ನಮ್ಮ ದೇಶದ ಪ್ರಜೆಗಳೇ ಎಂದರು.

RSS ಯಾರ ಬಳಿಯೂ ಕೈಚಾಚುವುದು ಬೇಡ, ನೋಂದಣಿ ಶುಲ್ಕ ಬೇಕಿದ್ದರೆ ನಾನೇ ಕಟ್ಟುತ್ತೇನೆ: ಪ್ರಿಯಾಂಕ್ ಖರ್ಗೆ
ರಾಷ್ಟ್ರೀಯ ಸ್ವಯಂಸೇವಾ ಸಂಘ (RSS) ಯಾರ ಬಳಿಯೂ ಕೈಚಾಚುವುದು ಬೇಡ, ಬೇಕಿದ್ದರೆ ನೋಂದಣಿ ಶುಲ್ಕ ನಾನೇ ಕಟ್ಟುತ್ತೇನೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

RSS ವಿರುದ್ಧದ ಹೇಳಿಕೆ; ಪ್ರಿಯಾಂಕ್ ಖರ್ಗೆ, ಮೊಹಮ್ಮದ್ ನಲಪಾಡ್‌ಗೆ ಸಮನ್ಸ್ ಜಾರಿ..!
ಬೆಂಗಳೂರಿನ 42ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ACMM) ನ್ಯಾಯಾಲಯವು ಇಬ್ಬರು ಕಾಂಗ್ರೆಸ್ ನಾಯಕರ ವಿರುದ್ಧ ದಾಖಲಾದ ಕ್ರಿಮಿನಲ್ ಮಾನಹಾನಿ ದೂರನ್ನು ಪರಿಗಣಿಸಿ, ಜುಲೈ 21ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದೆ.

RSS ಗಲಿಬಿಲಿಗೊಂಡರೆ BJP ಏಕೆ ಬುಸುಗುಡುತ್ತೆ: ಬಾಲ ಯಾರ ಕೈಯ್ಯಲ್ಲಿದೆ; ಪ್ರಿಯಾಂಕ್ ಖರ್ಗೆ ವಾಗ್ದಾಳಿ
RSS ಅನ್ನು ಯಾರೇ ಪ್ರಶ್ನಿಸಿದರೂ, ಬಿಜೆಪಿ ತನ್ನ ಗಾಂಭೀರ್ಯ ಕಳೆದುಕೊಳ್ಳುತ್ತದೆ. ಸ್ವಾತಂತ್ರ್ಯ ಹೋರಾಟಕ್ಕೆ ಯಾವ ಕೊಡುಗೆಯನ್ನೂ ನೀಡದ ಸಂಘಟನೆ ಇಂದು ದೇಶಕ್ಕೆ ದೇಶಭಕ್ತಿಯ ಪಾಠ ಹೇಳುವುದೇಕೆ.

ಅಕ್ರಮ ನಡೆದಿದ್ದರೆ ನಾನೇಕೆ ಜೈಲಿನಲ್ಲಿಲ್ಲ? ನನ್ನ ಲೆಕ್ಕ ಕೇಳುವ ನೀವು RSS ಲೆಕ್ಕ ಯಾವಾಗ ತೋರಿಸುತ್ತೀರಿ?: BJPಗೆ ಪ್ರಿಯಾಂಕ್ ಖರ್ಗೆ ಟಾಂಗ್
ಬಿಜೆಪಿ ಆರ್‌ಎಸ್‌ಎಸ್ ಅನ್ನು ಮೆಚ್ಚಿಸಲು ಹರಸಾಹಸ ಪಡುತ್ತಿದೆ. ಅಯೋಧ್ಯೆಯ ರಾಮಮಂದಿರದ ಲೆಕ್ಕಪತ್ರಗಳ ಬಗ್ಗೆ ಜನರು ಪ್ರಶ್ನಿಸುತ್ತಿರುವಾಗ, ಬಿಜೆಪಿ ಮಾತ್ರ ಕಲಬುರಗಿಯ ಬುದ್ಧ ವಿಹಾರ ಮತ್ತು ಅದರ ಟ್ರಸ್ಟ್‌ಗಳ ಬಗ್ಗೆ ಆರೋಪಗಳನ್ನು ಮುಂದಿಟ್ಟುಕೊಂಡಿದೆ.

ತಮ್ಮನ್ನು ಯಾರೂ ಮುಟ್ಟಲಾಗದು ಎಂಬ ಭಾವನೆ; RSS ಟೀಕಿಸುವುದು ಬಿಟ್ಟು ನೀವೇನು ಮಾಡಿದ್ದೀರಿ?: ಶೋಭಾ ಕರಂದ್ಲಾಜೆ; Video
ರಾಜ್ಯದಲ್ಲಿ ಹದಗೆಟ್ಟ ಕಾನೂನು-ಸುವ್ಯವಸ್ಥೆ ಕಡೆಗೆ ಗೃಹ ಸಚಿವರಾಗಿ ಗಮನ ಕೊಡದ ಪ್ರಿಯಾಂಕ್ ಖರ್ಗೆ ಅವರು, ಕೇವಲ ಆರೆಸ್ಸೆಸ್ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ಕೂತಿದ್ದಾರೆ.

RSS ದಾಖಲೆಗಳನ್ನು ಸಲ್ಲಿಸದಿದ್ದರೆ ಕಾನೂನು ಕ್ರಮ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸುಳಿವು
ನಾನು ಬರೆದ ಪತ್ರಕ್ಕೆ ಆರ್ ಎಸ್ಎಸ್ ನಿಂದ ಯಾವುದೇ ತೃಪ್ತಿದಾಯಕ ಉತ್ತರ ಸಿಗದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವರು ಎಚ್ಚರಿಕೆ ನೀಡಿದ್ದಾರೆ.

RSSಗೆ ಭದ್ರತೆ ನೀಡುವ ನಮಗೆ, ಅದರ ವಿವರ ತಿಳಿಯುವ ಹಕ್ಕಿದೆ: ಸಚಿವ ಪ್ರಿಯಾಂಕ್ ಖರ್ಗೆ
ಆರ್‌ಎಸ್‌ಎಸ್ ಸದಸ್ಯರು ಮೆರವಣಿಗೆ ನಡೆಸಿದಾಗ ಅವರಿಗೆ ಭದ್ರತೆ ಯಾರು ನೀಡುತ್ತಾರೆ? ವಾಣಿಜ್ಯ ಇಲಾಖೆ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡುವುದಿಲ್ಲ. ಗೃಹ ಇಲಾಖೆಯೇ ಭದ್ರತೆ ಒದಗಿಸುತ್ತದೆ. ರಾಜ್ಯದ ಗೃಹ ಸಚಿವನಾಗಿ ಭದ್ರತೆ ನೀಡಲಾಗುತ್ತಿರುವ ಸಂಘಟನೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಹಕ್ಕಿದೆ.

ಪ್ರಿಯಾಂಕ್ ಖರ್ಗೆ 'ಹಳೇ ರೇಡಿಯೋ' ಇದ್ದಂತೆ; ಅವರ ಮಾತಿಗೆ ಕಿಮ್ಮತ್ತಿಲ್ಲ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಪ್ರಿಯಾಂಕ್ ಖರ್ಗೆ ಅವರು ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ. ಹಾಗಾಗಿ ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಿಕೊಳ್ಳಲು ಏನೇನೋ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

