RSS ಯಾರ ಬಳಿಯೂ ಕೈಚಾಚುವುದು ಬೇಡ, ನೋಂದಣಿ ಶುಲ್ಕ ಬೇಕಿದ್ದರೆ ನಾನೇ ಕಟ್ಟುತ್ತೇನೆ: ಪ್ರಿಯಾಂಕ್ ಖರ್ಗೆ
ರಾಷ್ಟ್ರೀಯ ಸ್ವಯಂಸೇವಾ ಸಂಘ (RSS) ಯಾರ ಬಳಿಯೂ ಕೈಚಾಚುವುದು ಬೇಡ, ಬೇಕಿದ್ದರೆ ನೋಂದಣಿ ಶುಲ್ಕ ನಾನೇ ಕಟ್ಟುತ್ತೇನೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಾ ಸಂಘ (RSS) ಯಾರ ಬಳಿಯೂ ಕೈಚಾಚುವುದು ಬೇಡ, ಬೇಕಿದ್ದರೆ ನೋಂದಣಿ ಶುಲ್ಕ ನಾನೇ ಕಟ್ಟುತ್ತೇನೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ವಿಶ್ವದ ಅತಿ ದೊಡ್ಡ ಸಂಸ್ಥೆ RSS ಏಕೆ ನೋಂದಣಿ ಆಗಿಲ್ಲಎಂದು ಕೇಳೋದೇ ತಪ್ಪಾ? ಅತಿ ದೊಡ್ಡ ಸಂಸ್ಥೆ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಮಾಡುತ್ತೆ. ಅಷ್ಟೊಂದು ಜನ ರಸ್ತೆಗೆ ಬರುತ್ತಾರೆ. ಹೀಗಾಗಿ ನೋಂದಣಿ ಮಾಡಿಸಿಕೊಳ್ಳಿ ಎಂದು ಹೇಳಿದ್ದೆ ಎಂದರು.
ನಮ್ಮ ಮಾತನ್ನು ಕೇಳದಿದ್ದರೂ ಪರವಾಗಿಲ್ಲ, ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳೇ RSS ನೋಂದಣಿ ಆಗಲಿ ಅಂದಿದ್ದಾರೆ. ಧರ್ಮಗುರುಗಳ ಮಾತನಾದ್ರೂ ಕೇಳಲಿ ಎಂದು ಹೇಳಿದ್ದಾರೆ. ದಿನನಿತ್ಯ 4500 ಕಡೆ RSS ಚಟುವಟಿಕೆಗಳು ನಡೆಯುತ್ತವೆ ಅಂದ ಮೇಲೆ ಅದರ ಬಗ್ಗೆ ಪ್ರಶ್ನೆ ಮಾಡುವುದಿಲ್ಲವೇ? ಈ ಬಗ್ಗೆ ಮಾಧ್ಯಮಗಳು RSS ನವರನ್ನು ಕೇಳಬೇಕು ಎಂದರು.
ಆರ್ಎಸ್ಎಸ್ ಗೆ ನೂರು ವರ್ಷದ ಇತಿಹಾಸವಿದೆ ಎನ್ನುತ್ತಾರೆ. ನಮಗೆ ನೂರು ವರ್ಷದ ಇತಿಹಾಸ ಬೇಡ. ನೋಂದಣಿ ಆಗಿದ್ದರೆ ಅದರ ಇತಿಹಾಸ ಕೊಡಿ ಇಲ್ಲ ನೋಂದಣಿ ಆಗಿಲ್ಲದಿದ್ದರೆ ಮಾಡಿಸಿಕೊಳ್ಳಿ. ನಾನೇ ನೋಂದಣಿ ಶುಲ್ಕ ಕೊಡುತ್ತೇನೆ ಎಂದು ವ್ಯಂಗ್ಯವಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



