rescue

ತುಮಕೂರು: ಕಡೆಗೂ ಸಿಕ್ಕ 'ರುಸ್ತುಮ್'; ಗಿಳಿ ಹುಡುಕಿಕೊಟ್ಟವರಿಗೆ ಸಿಕ್ಕಿತು 85 ಸಾವಿರ ಉಡುಗೊರೆ!
ಪ್ರೀತಿಯ ಮುದ್ದಿನ 'ರುಸ್ತುಮ್', ಬೂದು ಆಫ್ರಿಕನ್ ಗಂಡು ಗಿಳಿ, ಒಂದು ವಾರದ ನಂತರ ಅದರ ಸ್ತ್ರೀ ಸಂಗಾತಿಯಾದ 'ರಿಯೊ' ನೊಂದಿಗೆ ಮತ್ತೆ ಸೇರಿಕೊಂಡಿದ್ದರಿಂದ ಅರ್ಜುನ್ ಕುಟುಂಬದ ಸಂತೋಷಕ್ಕೆ ಮಿತಿಯೇ ಇರಲಿಲ್ಲ.

ಮಧ್ಯ ಪ್ರದೇಶದಲ್ಲಿ ಭೀಕರ ಅಪಘಾತ: ಸೇತುವೆಯಿಂದ ನದಿಗೆ ಬಿದ್ದ ಬಸ್, 12 ಪ್ರಯಾಣಿಕರು ಸಾವು, ಹಲವರಿಗೆ ಗಾಯ
ಮಧ್ಯ ಪ್ರದೇಶದಲ್ಲಿ ಬೆಳಂಬೆಳಿಗ್ಗೆ ಭೀಕರ ಅಪಘಾತ ಸಂಭವಿಸಿದೆ. ಸೇತುವೆಯಿಂದ ನರ್ಮದಾ ನದಿಗೆ ಮಹಾರಾಷ್ಟ್ರದ ಬಸ್ ವೊಂದು ಉರುಳಿ ಬಿದಿದ್ದು, 12 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ.

ಯಾವ ಜೀವವೂ ಪುಟ್ಟದಲ್ಲ: ಲಿಫ್ಟ್ ಸಂಧಿಯಲ್ಲಿ ಸಿಲುಕಿಕೊಂಡ ಹಕ್ಕಿ ಮರಿ; ಅಗ್ನಿಶಾಮಕ ದಳ ಕಾರ್ಯಾಚರಣೆ
ಕೇವಲ ಒಂದು ಹಕ್ಕಿ ಮರಿಯನ್ನು ರಕ್ಷಿಸಲು ಅಧಿಕಾರಿಗಳು, ಸಿಬ್ಬಂದಿ ವರ್ಗ ಬರುವುದೆಂಬ ಕಲ್ಪನೆ ಅಲ್ಲಿ ಯಾರಿಗೂ ಇರಲಿಲ್ಲ. ಆದರೆ ಅಂಥದ್ದೊಂದು ಘಟನೆ ಅಂದು ಸಂಭವಿಸಿತು.

ಪ್ರವಾಹದಿಂದ ರಕ್ಷಿಸಲ್ಪಟ್ಟ ಹೆಣ್ಣುಮಗುವಿನ ಹುಟ್ಟುಹಬ್ಬ ಅಚರಿಸಿದ ಚೆನ್ನೈ ಪೊಲೀಸರು
ಸೋಮವಾರ ಮತ್ತು ಮಂಗಳವಾರ ಚೆನ್ನೈ ನಗರದ ಕೆ.ಪಿ.ಕೆ ನಗರ ಮತ್ತು ಕಲ್ಲುಕುಟ್ಟೈ ಪ್ರದೇಶಗಳಲ್ಲಿ ಮಳೆಯಿಂದ ನೀರು ನುಗ್ಗಿ ಪ್ರದೇಶವಿಡೀ ಜಲಾವೃತಗೊಂಡಿತ್ತು. ಪ್ರವಾಹದಲ್ಲಿ ಹೆಣ್ಣುಮಗುವಿದ್ದ ಕೂಲಿಕಾರ್ಮಿಕ ಕುಟುಂಬವೊಂದು ಕೊಚ್ಚಿಹೋಗುತ್ತಿತ್ತು. ಅಷ್ಟರಲ್ಲಿ...

ಸುಸೈಡ್ ಮಾಡಿಕೊಳ್ಳುತ್ತಿರುವುದಾಗಿ ವಿಡಿಯೊ ಮಾಡಿದ್ದ ಹುಡುಗನನ್ನು ರಕ್ಷಿಸಿದ ರೈಲ್ವೇ ಪೊಲೀಸ್ ಪಡೆ
ಹುಡುಗ ದೆಹಲಿ ರೈಲಿನಲ್ಲಿ ಕುಳಿತುಕೊಂಡು ಅಳುತ್ತಿದ್ದ. ರೈಲು ಇನ್ನೇನು ಹೊರಡುವುದರಲ್ಲಿತ್ತು. ಪೊಲೀಸರು ಸ್ವಲ್ಪ ತಡ ಮಾಡಿದರೂ ಹುಡುಗ ಮತ್ತೆ ಸಿಗುತ್ತಿರಲಿಲ್ಲ.

ಪ್ರಕ್ಷುಬ್ದ ಕಡಲಲ್ಲಿ ಅಪಾಯಕ್ಕೆ ಸಿಲುಕಿದ್ದ 9 ನಾವಿಕರ ರಕ್ಷಣೆಗೆ ನೆರವಾದ ಇಸ್ರೊ ತಂತ್ರಜ್ಞಾನ
ತೂತುಕುಡಿಯಿಂದ ಮಾಲ್ಡೀವ್ಸ್ ಗೆ ಪ್ರಯಾಣ ಬೆಳೆಸಿದ್ದ ಹಡಗು ಸಮುದ್ರಮಧ್ಯದಲ್ಲಿ ಅಪಾಯಕ್ಕೆ ಸಿಲುಕಿಕೊಂಡಿತ್ತು. ಈ ಸಂದರ್ಭದಲ್ಲಿ ಹಡಗಿನಲ್ಲಿದ್ದವರು ಡಿಸ್ಟ್ರೆಸ್ ಅಲರ್ಟ್ ಟ್ರಾನ್ಸ್ ಮೀಟರ್ ಬಳಸಿ ಅಪಾಯದ ಸಂದೇಶವನ್ನು ರವಾನಿಸಿದ್ದರು.

ಮಾನವ ಕಳ್ಳಸಾಗಣೆ: ಯಲಹಂಕ ರೈಲ್ವೇ ನಿಲ್ದಾಣದಲ್ಲಿ 3 ಮಹಿಳೆಯರ ರಕ್ಷಣೆ
ಉದ್ಯೋಗ ಕೊಡಿಸುವ ಆಸೆ ತೋರಿಸಿ ದೆಹಲಿಯಿಂದ ಬೆಂಗಳೂರು ನಗರಕ್ಕೆ ಮಾನವ ಕಳ್ಳಸಾಗಣೆ ಮಾಡಲಾಗಿದ್ದ ಮೂವರು ಮಹಿಳೆಯರನ್ನು ರಕ್ಷಣೆ ಮಾಡಿರುವ ಯಲಹಂಕ ರೈಲ್ವೇ ನಿಲ್ದಾಣದಲ್ಲಿ ಘಟನೆ ನಡೆದಿದೆ.

ಆತ್ಮಹತ್ಯೆಗೆ ಮುಂದಾಗಿದ್ದ ಕುಡುಕ ಬಚಾವ್... ಆತನ ರಕ್ಷಣೆಗೆ ಹೋದವರೇ ಜವರಾಯನ ಪಾಲು!
ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿದ್ದ ವೇಳೆ ಆತನನ್ನು ರಕ್ಷಿಸಲು ಮುಂದಾಗಿದ್ದ ಇಬ್ಬರು ವ್ಯಕ್ತಿಗಳೇ ಸಾವನ್ನಪ್ಪಿರುವ ದಾರುಣ ಘಟನೆ ನೆರೆಯ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ಹುಬ್ಬಳ್ಳಿ ಬಾಲಕಿಯ ಕಿಡ್ನ್ಯಾಪ್ ಕೇಸ್: ದೂರು ಸ್ವೀಕರಿಸಿದ 3 ಗಂಟೆಗಳಲ್ಲೇ ಬೆಂಗಳೂರಿನಲ್ಲಿ ಆರೋಪಿ ಬಂಧನ
ದೂರು ಸ್ವೀಕರಿಸಿದ 3 ಗಂಟೆಗಳಲ್ಲಿಯೇ 6 ವರ್ಷದ ಬಾಲಕಿಯ ಅಪಹರಣ ಪ್ರಕಣವನ್ನು ಹುಬ್ಬಳ್ಳಿ ಪೊಲೀಸರು ಬೇಧಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಬಾಲಕಿಯ ಅಪಹರಣವಾಗಿದ್ದು ಪೊಲೀಸರು ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ.

