ದೇಶ

ಪ್ರಕ್ಷುಬ್ದ ಕಡಲಲ್ಲಿ ಅಪಾಯಕ್ಕೆ ಸಿಲುಕಿದ್ದ 9 ನಾವಿಕರ ರಕ್ಷಣೆಗೆ ನೆರವಾದ ಇಸ್ರೊ ತಂತ್ರಜ್ಞಾನ

ತೂತುಕುಡಿಯಿಂದ ಮಾಲ್ಡೀವ್ಸ್ ಗೆ ಪ್ರಯಾಣ ಬೆಳೆಸಿದ್ದ ಹಡಗು ಸಮುದ್ರಮಧ್ಯದಲ್ಲಿ ಅಪಾಯಕ್ಕೆ ಸಿಲುಕಿಕೊಂಡಿತ್ತು. ಈ ಸಂದರ್ಭದಲ್ಲಿ ಹಡಗಿನಲ್ಲಿದ್ದವರು ಡಿಸ್ಟ್ರೆಸ್ ಅಲರ್ಟ್ ಟ್ರಾನ್ಸ್ ಮೀಟರ್ ಬಳಸಿ ಅಪಾಯದ ಸಂದೇಶವನ್ನು ರವಾನಿಸಿದ್ದರು.

ಪ್ರಕ್ಷುಬ್ದ ಕಡಲಲ್ಲಿ ಅಪಾಯಕ್ಕೆ ಸಿಲುಕಿದ್ದ 9 ನಾವಿಕರ ರಕ್ಷಣೆಗೆ ನೆರವಾದ ಇಸ್ರೊ ತಂತ್ರಜ್ಞಾನ
ಸಾಂದರ್ಭಿಕ ಚಿತ್ರ
Published On :

ಚೆನ್ನೈ: ಅಪಾಯಕ್ಕೆ ಸಿಲುಕಿದಾಗ ತುರ್ತು ಸಂದೇಶ ರವಾನಿಸುವ ಡಿಸ್ಟ್ರೆಸ್ ಅಲರ್ಟ್ ಟ್ರಾನ್ಸ್ ಮೀಟರ್ ತಂತ್ರಜ್ಞಾನ ಸಹಾಯದಿಂದ ಚೆನ್ನೈನ ಪ್ರಕ್ಷುಬ್ದ ಕಡಲಲ್ಲಿ ಸಿಲುಕಿಕೊಂಡಿದ್ದ 9 ಮಂದಿ ನಾವಿಕರನ್ನು ಕರಾವಳಿ ಪಡೆ ರಕ್ಷಣೆ ಮಾಡಿದೆ. 

ತೂತುಕುಡಿಯಿಂದ ಮಾಲ್ಡೀವ್ಸ್ ಗೆ ಪ್ರಯಾಣ ಬೆಳೆಸಿದ್ದ ಹಡಗು ಸಮುದ್ರಮಧ್ಯದಲ್ಲಿ ಅಪಾಯಕ್ಕೆ ಸಿಲುಕಿಕೊಂಡಿತ್ತು. ಈ ಸಂದರ್ಭದಲ್ಲಿ ಹಡಗಿನಲ್ಲಿದ್ದವರು ಡಿಸ್ಟ್ರೆಸ್ ಅಲರ್ಟ್ ಟ್ರಾನ್ಸ್ ಮೀಟರ್ ಬಳಸಿ ಅಪಾಯದ ಸಂದೇಶವನ್ನು ರವಾನಿಸಿದ್ದರು. 

ಅಪಾಯದ ಸಂದೇಶ ಸ್ವೀಕರಿಸುತ್ತಲೇ ಕರಾವಳಿ ರಕ್ಷಣಾ ಪಡೆ ನಾವಿಕರ ರಕ್ಷಣೆಗೆ ಧಾವಿಸಿತ್ತು. ಡಿಸ್ಟ್ರೆಸ್ ಅಲರ್ಟ್ ಟ್ರಾನ್ಸ್ ಮೀಟರ್ ತಂತ್ರಜ್ಞಾನ ಸ್ವದೇಶಿ ನಿರ್ಮಿತ ಎನ್ನುವುದು ಗಮನಾರ್ಹ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೊ ಇದನ್ನು ಅಭಿವೃದ್ಧಿಪಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.