rescue

ಮುಂಬೈ: ಕಟ್ಟಡದ ಮೇಲ್ಚಾವಣಿ ಕುಸಿತ, 35 ಮಂದಿ ರಕ್ಷಣೆ
ವಾಣಿಜ್ಯ ನಗರಿ ಮುಂಬೈನಲ್ಲಿ ಐದು ಅಂತಸ್ತಿನ ಕಟ್ಟಡದ ಮೇಲ್ಚಾವಣಿ ಕುಸಿದುಬಿದ್ದಿದ್ದು, ಘಟನೆಯಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದ 35 ಮಂದಿಯನ್ನು ರಕ್ಷಣೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.

ಸಮುದ್ರದಲ್ಲಿ ಕೆಟ್ಟುನಿಂತ ಬೋಟ್: ಕೇರಳ, ತಮಿಳುನಾಡು ಮೀನುಗಾರರ ರಕ್ಷಣೆ
ಮಂಗಳೂರು ಬಂದರಿಂದ 20 ನಾಟಿಕಲ್ ಮೈಲ್ ದೂರ ಅರಬ್ಬೀ ಸಮುದ್ರದಲ್ಲಿ ಎಂಜಿನ್ ಕೆಟ್ಟು ಅಪಾಯಕ್ಕೆ ಸಿಲುಕಿದ್ದ ತಮಿಳುನಾಡು ಹಾಗೂ ಕೇರಳ ರಾಜ್ಯ ಮೂಲದ 10 ಮಂದಿ ಮೀನುಗಾರರನ್ನು ಕೋಸ್ಟ್ ಗಾರ್ಡ್ ನೌಕಾಪಡೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಟೌಕ್ಟೆ ಚಂಡಮಾರುತ: ಬಾರ್ಜ್ ಗಳಲ್ಲಿನ 89 ಸಿಬ್ಬಂದಿಗಳು ಇನ್ನೂ ಪತ್ತೆಯಾಗಿಲ್ಲ- ನೌಕಾಪಡೆ
ಟೌಕ್ಟೆ ಚಂಡಮಾರುತದಿಂದ ಮಹಾರಾಷ್ಟ್ರದಲ್ಲಿ ತೀವ್ರತರವಾದ ವಾತಾವರಣ ನಿರ್ಮಾಣವಾಗಿದ್ದು, ಪ್ರತಿಕೂಲ ಪರಿಸ್ಥಿತಿಯಲ್ಲಿ ನೌಕಾಪಡೆ ರಕ್ಷಣಾ, ಶೋಧ ಕಾರ್ಯಾಚರಣೆಯಲ್ಲಿ ತೊಡಗಿದೆ.

ಟೌಕ್ಟೇ ಚಂಡಮಾರುತ: ಮಂಗಳೂರು ಕಡಲ ತೀರದಲ್ಲಿ ಸಿಲುಕಿದ್ದ 9 ಮಂದಿ ರಕ್ಷಣೆ; ನೌಕಾಪಡೆ ಸಿಬ್ಬಂದಿಗೆ ಮುಖ್ಯಮಂತ್ರಿ ಧನ್ಯವಾದ
ಟೌಕ್ಟೇ ಚಂಡಮಾರುತದ ಅಬ್ಬರದ ಅಲೆಗೆ ಸಿಲುಕಿ ಮಂಗಳೂರು ತೀರದ ಮೂಲ್ಕಿ ಬಳಿ ಕಲ್ಲುಬಂಡೆಯ ಪಕ್ಕ ದೋಣಿಯಲ್ಲಿ ಸಿಲುಕಿ ಹಾಕಿಕೊಂಡಿದ್ದ 9 ಮಂದಿಯನ್ನು ಭಾರತೀಯ ನೌಕಾಪಡೆ ಸಿಬ್ಬಂದಿ ಸೋಮವಾರ ಬೆಳಗ್ಗೆ ರಕ್ಷಿಸಿದ್ದಾರೆ.

ಥಾಣೆ ಕಟ್ಟಡ ಕುಸಿತ ಪ್ರಕರಣ: ಮಹಿಳೆಯ ಮೃತದೇಹ ಪತ್ತೆ, ಒಟ್ಟು ಸಾವಿನ ಸಂಖ್ಯೆ 5ಕ್ಕೆ ಏರಿಕೆ
ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಪತ್ತೆಯಾಗುವುದರೊಂದಿಗೆ ಜಿಲ್ಲೆಯ ಉಲ್ಲಾಸ್‌ನಗರ ಪಟ್ಟಣದಲ್ಲಿ ಶನಿವಾರ ಕಟ್ಟಡವೊಂದರ ಚಪ್ಪಡಿ ಕುಸಿದು ಬಿದ್ದು ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರು: ಸಮುದ್ರದಲ್ಲಿ ಸಿಲುಕಿದ್ದ ಮೂವರು ಮೀನುಗಾರರ ರಕ್ಷಣೆ
ಎಂಜಿನ್ ಸಮಸ್ಯೆಯಿಂದಾಗಿ ಸಮುದ್ರದಲ್ಲಿ ಬೋಟ್ ವೊಂದು ಸಿಲುಕಿದ ಪರಿಣಾಮ ಸಂಕಷ್ಟಕ್ಕೆ ಸಿಲುಕಿಗೊಂಡಿದ್ದ ಮೂವರು ಮೀನುಗಾರರನ್ನು ಕರಾವಳಿ ಕಾವಲು ಪಡೆ ರಕ್ಷಣೆ ಮಾಡಿದೆ.

ಬೆಂಗಳೂರು: ರೈಲು ಹಳಿ ಮೇಲೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ರಕ್ಷಿಸಿದ ಆರ್‌ಪಿಎಫ್ ಪೇದೆ
ಬೆಂಗಳೂರು ರೈಲ್ವೆ ವಿಭಾಗದ ಗೊಲ್ಲಹಳ್ಳಿ ನಿಲ್ದಾಣದಲ್ಲಿ ರೈಲ್ವೆ ಹಳಿ ಮೇಲೆ ಸಾಯಲು ಯತ್ನಿಸಿದ ಮಹಿಳೆಯನ್ನು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಪೇದೆ ರಕ್ಷಿಸಿದ್ದಾರೆ.

ಬೆಂಗಳೂರು ರೈಲ್ವೆ ಪೊಲೀಸರಿಂದ ಭೂಪಾಲ್ ನಿಂದ ನಾಪತ್ತೆಯಾಗಿದ್ದ ಅಪ್ರಾಪ್ತೆಯ ರಕ್ಷಣೆ
ಭೂಪಾಲ್ ನ ಕಮಲಾ ನಗರದಿಂದ ನಾಪತ್ತೆಯಾಗಿದ್ದ 16 ವರ್ಷದ ಬಾಲಕಿಯನ್ನು ಬೆಂಗಳೂರು ಪೊಲೀಸರು ರಕ್ಷಿಸಿದ್ದಾರೆ.

ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ: 7 ಮಹಿಳೆಯರ ರಕ್ಷಣೆ, 6 ಮಂದಿ ಬಂಧನ
ಯುವತಿಯರನ್ನು ವಶದಲ್ಲಿಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ಕೇಂದ್ರ ಅಪರಾಧ ದಳದ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿ ವೇಳೆ 7 ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.

