Ravi shastri

ವಿರಾಟ್ ಕೊಹ್ಲಿ ದಾಖಲೆಗಳು ಇನ್ನೂ ಮುಗಿದಿಲ್ಲ: ಸೌರವ್ ಗಂಗೂಲಿ, ರವಿಶಾಸ್ತ್ರೀ
ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಏಕದಿನ ಕ್ರಿಕೆಟ್ ನಲ್ಲಿ 50 ನೇ ಶತಕ ದಾಖಲಿಸುವ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್ ಅವರ ದಾಖಲೆಯನ್ನು ಮುರಿದ ವಿರಾಟ್ ಕೊಹ್ಲಿಯ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

ODI World Cup: ಇನ್ನೂ 12 ವರ್ಷ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ: ಭಾರತ ತಂಡಕ್ಕೆ ಮಾಜಿ ಕೋಚ್ ಎಚ್ಚರಿಕೆ!
ಸದ್ಯ ನಡೆಯುತ್ತಿರುವ ಆವೃತ್ತಿಯಲ್ಲಿ ಗೆಲ್ಲಲು ಸಾಧ್ಯವಾಗದಿದ್ದರೆ ಭಾರತ ತಂಡವು ಇನ್ನೂ ಮುಂದಿನ ಮೂರು ವಿಶ್ವಕಪ್ ಆವೃತ್ತಿಗಳಲ್ಲಿ ಪ್ರಶಸ್ತಿಗಾಗಿ ಕಾಯಬೇಕಾಗುತ್ತದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ತಿಳಿಸಿದ್ದಾರೆ.

"ಉತ್ತಮ ಪ್ರದರ್ಶನ ನೀಡಲು ರೋಹಿತ್ ಶರ್ಮಾಗೆ ಹೆಚ್ಚುವರಿ ಪ್ರೇರಣೆ ಅಗತ್ಯವಿಲ್ಲ": ರವಿಶಾಸ್ತ್ರಿ
ಐಪಿಎಲ್ ಟೂರ್ನಿ ನಿರ್ಣಾಯಕ ಹಂತ ತಲುಪಿರುವಂತೆಯೇ ಪ್ಲೇ ಆಫ್ ಹಂತಕ್ಕೇರಲು ಹರಸಾಹಸ ಪಡುತ್ತಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾಗೆ ಉತ್ತಮ ಪ್ರದರ್ಶನ ನೀಡಲು ಹೆಚ್ಚುವರಿ ಪ್ರೇರಣೆ ಅಗತ್ಯವಿಲ್ಲ ಎಂದು ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ಐಪಿಎಲ್ ನಲ್ಲಿ ಸ್ಫೋಟಕ ಬ್ಯಾಟಿಂಗ್: ಯಶಸ್ವಿ ಜೈಸ್ವಾಲ್ ಮೇಲೆ ಆಯ್ಕೆಗಾರರ ಕಣ್ಣು, ಶೀಘ್ರ ಭಾರತ ತಂಡಕ್ಕೆ: ರವಿಶಾಸ್ತ್ರಿ
ಯಶಸ್ವಿ ಜೈಸ್ವಾಲ್ ಅವರ ಐಪಿಎಲ್‌ನಲ್ಲಿನ ಯಶಸ್ಸು ಅವರ ಮೇಲೆ ರಾಷ್ಟ್ರೀಯ ಆಯ್ಕೆಗಾರರ ಕಣ್ಣು ಬೀಳುವಂತೆ ಮಾಡಿದ್ದು, ಶೀಘ್ರದಲ್ಲೇ ಭಾರತ ತಂಡಕ್ಕೆ ಆಡುವ ವಿಶ್ವಾಸವಿದೆ ಎಂದು ಮಾಜಿ ಕ್ರಿಕೆಟಿಗ ಹಾಗೂ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

'ಓವರ್ ಕಾನ್ಫಿಡೆನ್ಸ್' ನಿಂದ ಸೋಲು: ರವಿಶಾಸ್ತ್ರಿ ಹೇಳಿಕೆಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಿರುಗೇಟು!
ಅತಿಯಾದ ಆತ್ಮವಿಶ್ವಾಸದಿಂದ ಆಸ್ಟ್ರೇಲಿಯಾ ವಿರುದ್ಧ ಇಂದೋರ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಸೋತಿದೆ ಎಂಬ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರ ಹೇಳಿಕೆಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.

ನ್ಯೂಜಿಲೆಂಡ್ ಪ್ರವಾಸ: ದ್ರಾವಿಡ್ ಗೆ ವಿಶ್ರಾಂತಿ ಪ್ರಶ್ನಿಸಿದ ರವಿಶಾಸ್ತ್ರಿಗೆ ಖಡಕ್ ಉತ್ತರ ಕೊಟ್ಟ ಆರ್ ಅಶ್ವಿನ್
ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ನ್ಯೂಜಿಲೆಂಡ್ ಪ್ರವಾಸಕ್ಕೆ ಗೈರುಹಾಜರಾಗಿರುವುದನ್ನು ಟೀಂ ಇಂಡಿಯಾದ ಹಿರಿಯ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಸಮರ್ಥಿಸಿಕೊಂಡಿದ್ದು, ಟಿ20 ವಿಶ್ವಕಪ್‌ಗೆ ತಯಾರಿ ನಡೆಸುತ್ತಿರುವ ಸಹಾಯಕ ಸಿಬ್ಬಂದಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ಹೇಳಿದ್ದಾರೆ.

ರೋಹಿತ್ ಕ್ಯಾಪ್ಟನ್ ಆಗಿದ್ದು ಟೀಮ್ ಇಂಡಿಯಾಗೆ ಒಳ್ಳೆಯದು; ಇನ್ಮುಂದೆ ಕೊಹ್ಲಿ ಬ್ಯಾಟಿಂಗ್‌ನತ್ತ ಗಮನಹರಿಸಬಹುದು: ರವಿಶಾಸ್ತ್ರಿ
ಟೆಸ್ಟ್ ಮತ್ತು ಸೀಮಿತ ಓವರ್‌ಗಳ ಸ್ವರೂಪದಲ್ಲಿ ವಿಭಿನ್ನ ನಾಯಕರನ್ನು ಹೊಂದಿರುವುದು ಸರಿಯಾದ ನಿರ್ಧಾರ. ಸದ್ಯದ ಕ್ರಿಕೆಟ್ ಪ್ರಪಂಚದಲ್ಲಿ ಒಬ್ಬನೇ ಆಟಗಾರ ಮೂರು ಮಾದರಿಯ ತಂಡದ ನಾಯಕತ್ವವನ್ನು ವಹಿಸುವುದು ಕಷ್ಟ.

ಕೊಹ್ಲಿಯಂತೆ ತಂಡ ಮುನ್ನಡೆಸಿದ ಯಾವ ನಾಯಕರೂ ಇಲ್ಲ; ನಾಯಕತ್ವ ವಿಚಾರವನ್ನು ಇನ್ನೂ ಉತ್ತಮವಾಗಿ ನಿಭಾಯಿಸಬಹುದಿತ್ತು: ರವಿಶಾಸ್ತ್ರಿ
ಭಾರತ ಕ್ರಿಕೆಟ್ ತಂಡವನ್ನು ವಿರಾಟ್ ಕೊಹ್ಲಿಯಂತೆ ಯಶಸ್ವಿಯಾಗಿ ಮುನ್ನಡೆಸಿದ ಯಾವ ನಾಯಕರೂ ಇಲ್ಲ.. ಇಂತಹ ಪರಿಸ್ಥಿತಿಯಲ್ಲಿ ನಾಯಕತ್ವ ವಿಚಾರವನ್ನು ಬಿಸಿಸಿಐ ಇನ್ನೂ ಉತ್ತಮವಾಗಿ ಬಗೆಹರಿಸಬಹುದಿತ್ತು ಎಂದು ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ಬ್ಯಾಟಿಂಗ್ ನತ್ತ ಗಮನ ಹರಿಸಲು ಏಕದಿನ ನಾಯಕ ಸ್ಥಾನಕ್ಕೂ ಕೊಹ್ಲಿ ಗುಡ್ ಬೈ: ರವಿಶಾಸ್ತ್ರಿ ಹೇಳಿದ್ದೇನು?
ಟಿ20 ವಿಶ್ವಕಪ್ ಟೂರ್ನಿಯಿಂದ ಟೀಂ ಇಂಡಿಯಾ ಹೊರಬಿದ್ದ ಬೆನ್ನಲ್ಲೇ ಟಿ20 ತಂಡದ ನಾಯಕ ಸ್ಥಾನ ತೊರೆದಿದ್ದ ವಿರಾಚ್ ಕೊಹ್ಲಿ ಶೀಘ್ರದಲ್ಲೇ ಏಕದಿನ ತಂಡದ ನಾಯಕ ಸ್ಥಾನವನ್ನೂ ತ್ಯಜಿಸುವ ಕುರಿತು ಮಾಜಿ ಕೋಚ್ ರವಿಶಾಸ್ತ್ರಿ ಮಾತನಾಡಿದ್ದಾರೆ.

