Ram temple

'ರಾಮ ಮಂದಿರ ನಿರ್ಮಾಣವನ್ನೇ ವಿರೋಧಿಸಿದ್ದವರು ಈಗ ದೇಣಿಗೆ ಬಗ್ಗೆ ಪ್ರಶ್ನಿಸುತ್ತಿದ್ದಾರೆ'; ವಿಪಕ್ಷಗಳ ವಿರುದ್ಧ ಯೋಗಿ ಆದಿತ್ಯನಾಥ್ ವಾಗ್ದಾಳಿ
ಅಯೋಧ್ಯೆ ವಿಚಾರವನ್ನು ಎತ್ತುತ್ತಿರುವವರು ಈ ಹಿಂದೆ ರಾಮಭಕ್ತರ ಮೇಲೆ ಗುಂಡು ಹಾರಿಸಿದ್ದವರು. 'ಜೈ ಶ್ರೀರಾಮ್' ಘೋಷಣೆ ಕೂಗಿದವರ ಮೇಲೆ ಲಾಠಿ ಚಾರ್ಜ್ ಮತ್ತು ಗುಂಡಿನ ದಾಳಿ ನಡೆಸಿದವರೇ ಈಗ ರಾಮ ಮಂದಿರದ ಬಗ್ಗೆ ಮಾತನಾಡುತ್ತಿದ್ದಾರೆ.

ಕಾಲಿನ ಕೆಳಗೆ ಶ್ರೀರಾಮನ ಫೋಟೋ? ಸಂಸತ್ ಆವರಣದಲ್ಲಿ 'ಚಂದ ಚೋರಿ' ಸ್ಕಿಟ್ ಮಾಡಿದ ರಾಹುಲ್, ಇತರ ಇಬ್ಬರು ಸಂಸದರ ವಿರುದ್ಧ ಕೇಸ್
ರಾಹುಲ್ ಗಾಂಧಿ, ಪಪ್ಪು ಯಾದವ್ ಮತ್ತು ಅವಧೇಶ್ ಪ್ರಸಾದ್ ಅವರು ಸಂಸತ್ ಆವರಣದಲ್ಲಿ ಸನಾತನ ಧರ್ಮವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಕೆಲವು ಮಠಾಧೀಶರು ಕೊತ್ವಾಲಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.

ರಾಮ ಮಂದಿರ ದೇಣಿಗೆ ಅಕ್ರಮ ಆರೋಪ: SIT ತನಿಖೆಯಿಂದಲೇ ಸತ್ಯ ಹೊರಬರಲಿದೆ- RSS
ಇಂತಹ ಘಟನೆಗಳು ಮರುಕಳಿಸದಂತೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ಇದರಿಂದ ಕೋಟ್ಯಂತರ ರಾಮಭಕ್ತರ ದೇವಸ್ಥಾನದ ಮೇಲಿರುವ ಭಕ್ತಿ ಮತ್ತು ವಿಶ್ವಾಸ ಅಚಲವಾಗಿ ಉಳಿಯಲಿದೆ.

ರಾಮ ಮಂದಿರ ದೇಣಿಗೆ ಕಳ್ಳತನ ಆರೋಪ: ಮೌನ ಮುರಿದ VHP ನಾಯಕ ಚಂಪತ್ ರಾಯ್; ಹೇಳಿದ್ದೇನು?
ಪ್ರಾಥಮಿಕ ವರದಿಯಲ್ಲಿ ಏನು ಬರುತ್ತದೆ ಎಂಬುದನ್ನು ತಿಳಿಯಲು ಟ್ರಸ್ಟ್ ಬಯಸಿದ್ದರಿಂದ ಇಲ್ಲಿಯವರೆಗೂ ಏನನ್ನೂ ಪ್ರತಿಕ್ರಿಯಿಸದೆ ಮೌನವಾಗಿದ್ದೆ ಎಂದಿದ್ದಾರೆ.

'ರಾಮ ಮಂದಿರದ ಹಣ ಲೂಟಿ ಮಾಡಿದ್ದು ಬಡವರು, ದಲಿತರು ಅಲ್ಲ; RSS-BJP ಬೆಂಬಲಿಗರು': ಮಲ್ಲಿಕಾರ್ಜುನ ಖರ್ಗೆ ಆರೋಪ
ರಾಮ ಮಂದಿರದ ಹೆಸರಿನಲ್ಲಿ ನಡೆದ ಲೂಟಿಯನ್ನು ಯಾರು ಮಾಡಿದ್ದಾರೆ? ಬಡವರು ಹೋಗಿ ಕಳ್ಳತನ ಮಾಡಿದರಾ? ದಲಿತರು ಮಾಡಿದರಾ? ರೈತರು ಮಾಡಿದರಾ? ಇಲ್ಲ. ಸಮಾಜದಲ್ಲಿ ಪ್ರಭಾವ ಹೊಂದಿರುವ ಆರ್‌ಎಸ್‌ಎಸ್, ಬಿಜೆಪಿ ಮತ್ತು ಅವರ ಬೆಂಬಲಿಗರೇ ಈ ಲೂಟಿ ಮಾಡಿದ್ದಾರೆ.

ರಾಮಮಂದಿರದಲ್ಲಿದ್ದ 5 ಕೋಟಿ ರೂ. ಮೌಲ್ಯದ ಚಿನ್ನಲೇಪಿತ 'ರಾಮಚರಿತ ಮಾನಸ' ನಾಪತ್ತೆ: ಮಾಜಿ ಐಎಎಸ್ ಅಧಿಕಾರಿ ಹೇಳಿಕೆ ಕೋಲಾಹಲ
ಅಯೋಧ್ಯೆಯ ರಾಮ ಮಂದಿರವು ದೇಣಿಗೆ ವಿವಾದ ಮತ್ತೊಮ್ಮೆ ಸುದ್ದಿಯಲ್ಲಿದೆ. ಸುಮಾರು 5 ಕೋಟಿ ರೂ. ಮೌಲ್ಯದ ಚಿನ್ನ-ಲೇಪಿತ ರಾಮಚರಿತ ಮಾನಸವನ್ನು ಮಾಜಿ ಐಎಎಸ್ ಅಧಿಕಾರಿ ಎಸ್. ಲಕ್ಷ್ಮಿನಾರಾಯಣನ್ ಕುಟುಂಬವು ದೇವಾಲಯಕ್ಕೆ ದಾನ ಮಾಡಿತ್ತು.

ರಾಮ ಮಂದಿರ ದೇಣಿಗೆ ದುರ್ಬಳಕೆ ಆರೋಪ: 'ಕೋಟ್ಯಾಂತರ ಭಕ್ತರ ನಂಬಿಕೆಗೆ ಮಾಡಿದ ಅಪಮಾನ': ಪ್ರಧಾನಿ ಮೋದಿ ಮೌನದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!
ಶ್ರೀರಾಮ ಮಂದಿರದಲ್ಲಿ ನಡೆದಿರುವ ಎನ್ನಲಾದ ದೇಣಿಗೆ ದುರ್ಬಳಕೆ ಕುರಿತು ಪ್ರಧಾನಿ ಮೋದಿ ಮೌನವಾಗಿರುವುದು ಕೋಟ್ಯಂತರ ಭಕ್ತರ ನಂಬಿಕೆಗೆ ಮಾಡಿದ ಅಪಮಾನ.

ಅಯೋಧ್ಯೆ: ರಾಮ ಮಂದಿರ ದೇಣಿಗೆ ಹಗರಣ, ಬಂಧಿತ 8 ಆರೋಪಿಗಳ ಮನೆ ಮೇಲೆ ಪೊಲೀಸರ ದಾಳಿ!
ಸ್ಥಳೀಯ ನ್ಯಾಯಾಧೀಶರ ಜೊತೆಗೂಡಿದ ಪೊಲೀಸ್ ತಂಡಗಳು, ಆರೋಪಿಗಳಾದ ಲವ ಕುಶ್ ಮಿಶ್ರಾ, ಅವಿನಾಶ್ ಶುಕ್ಲಾ ಮತ್ತು ರಾಮಶಂಕರ್ ಯಾದವ್ ಸೇರಿದಂತೆ 8 ಆರೋಪಿಗಳ ಮನೆಗಳ ಮೇಲೆ ಶೋಧ ನಡೆಸಿವೆ ಎಂದು ಮೂಲಗಳು ತಿಳಿಸಿವೆ.

ನಮಗೆ 'ಬಿಜೆಪಿ ಮುಕ್ತ ರಾಮ' ಬೇಕು: ರಾಮ ಮಂದಿರ ದೇಣಿಗೆ ವಿವಾದದ ಬಗ್ಗೆ ಉದ್ಧವ್ ಠಾಕ್ರೆ ವಾಗ್ದಾಳಿ!
ಪಕ್ಷವು ಹಿಂದೂಗಳ ಭಾವನೆಗಳೊಂದಿಗೆ ಆಟವಾಡುವ ಮೂಲಕ ಅವರಿಗೆ ದ್ರೋಹ ಬಗೆದಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಮುಕ್ತ ರಾಮ' ನಿಗಾಗಿ ಪ್ರತಿಭಟನೆ ಮುನ್ನಡೆಸುವುದಾಗಿಯೂ ಅವರು ಪ್ರತಿಜ್ಞೆ ಮಾಡಿದ್ದಾರೆ.

