Rajanikanth

ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪಕ್ಷ ಆರಂಭ: ಡಿ.31ರಂದು ಘೋಷಣೆ
ರಾಜಕೀಯ ಪಕ್ಷ ಆರಂಭದ ಕುರಿತ ಘೋಷಣೆಯನ್ನು ಡಿಸೆಂಬರ್ 31ರಂದು ಮಾಡುವುದಾಗಿ ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.

ಗುರುಮೂರ್ತಿ-ರಜನಿಕಾಂತ್ ಭೇಟಿ: ಗರಿಗೆದರಿದ ಕುತೂಹಲ
ಪ್ರಸಿದ್ದ ರಾಜಕೀಯ ಮತ್ತು ಆರ್ಥಿಕ ತಜ್ಞ ಹಾಗೂ ವಿಮರ್ಶಕ ಎಸ್ ಗುರುಮೂರ್ತಿ ಭಾನುವಾರ ರಜನಿಕಾಂತ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ರಜನಿಕಾಂತ್ ರಾಜಕೀಯ ತೊರೆಯುತ್ತಿದ್ದಾರೆಯೇ: ತಮಿಳು ನಾಡಲ್ಲಿ ಹೀಗೊಂದು ದಟ್ಟ ವದಂತಿ
ಸುಮಾರು ಎರಡು ದಶಕಗಳಿಂದ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಬರುತ್ತಾರೆ ಎಂಬ ಊಹಾಪೋಹ ನಡೆಯುತ್ತಲೇ ಇತ್ತು. ಕೊನೆಗೊಂದು ದಿನ ಅದು ನಿಜವಾಯಿತು. ಇದೀಗ ಅವರು ರಾಜಕೀಯ ಕ್ಷೇತ್ರ ತೊರೆಯುತ್ತಿದ್ದಾರಾ ಎಂಬ ಅನುಮಾನ, ಸಂದೇಹ ಕಾಡಲಾರಂಭಿಸಿದೆ.

ಮತ್ತೆ ಅಧಿಕಾರಕ್ಕೆ ಬರುವುದನ್ನು ಮರೆತುಬಿಡಿ: ಮದ್ಯದಂಗಡಿ ತೆರೆದಿದ್ದಕ್ಕೆ ತಮಿಳು ನಾಡು ಸರ್ಕಾರ ವಿರುದ್ಧ ರಜನಿಕಾಂತ್ ಕಿಡಿ
ತಮಿಳು ನಾಡಿನಲ್ಲಿ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಿರುವುದಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಕಿಡಿಕಾರಿದ್ದಾರೆ.

ಸಾಹಸ ಪ್ರದರ್ಶನ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು ಮರೆಯಲಾಗದ ಅನುಭವ: ಸೂಪರ್ ಸ್ಟಾರ್ ರಜನಿಕಾಂತ್
ಸೂಪರ್ ಸ್ಟಾರ್ ರಜನಿಕಾಂತ್ ಭಾರತೀಯ ಚಿತ್ರರಂಗದಲ್ಲಿ ಅಳಿಸಲಾಗದ ಹೆಸರು. ನಾಲ್ಕು ದಶಕಗಳ ಹಿಂದೆ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿ ಯಶಸ್ಸು ಕಂಡವರು. ಇದೀಗ ಸಾಹಸ ಪ್ರದರ್ಶನ ಮೂಲಕ ಕಿರುತೆರೆಗೆ ಸಹ ಕಾಲಿಡುತ್ತಿದ್ದಾರೆ. ಈ ಬಗ್ಗೆ ಸ್ವತಃ ರಜನಿಕಾಂತ್ ಅವರೇ ಮಾತನಾಡಿದ್ದಾರೆ.

ಬಂಡೀಪುರ ಅರಣ್ಯದಲ್ಲಿ ರಜನಿಕಾಂತ್: ಬೇರ್ ಗ್ರಿಲ್ಸ್ ಜೊತೆ 'ಮ್ಯಾನ್ ವರ್ಸಸ್ ವೈಲ್ಡ್ ’ಸಾಕ್ಷ್ಯಚಿತ್ರದಲ್ಲಿ ಭಾಗಿ
ಸೂಪರ್ ಸ್ಟಾರ್ ರಜನಿಕಾಂತ್ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿದ್ದಾರೆ. ಅಂತಾರಾಷ್ಟ್ರೀಯ ಖ್ಯಾತಿಯ ಮ್ಯಾನ್ ವರ್ಸಸ್ ವೈಲ್ಡ್ ಸರಣಿ ಸಾಕ್ಷ್ಯಚಿತ್ರ ತಯಾರಕ, ಇಂಗ್ಲೆಂಡ್ ಮೂಲದ ಸಾಹಸಿಗ ಬೇರ್ ಗ್ರಿಲ್ಸ್ ಮತ್ತು ಅವರ ತಂಡದ ಜೊತೆ ರಜನಿಕಾಂತ್ ಅವರು ಸಾಕ್ಷ್ಯಚಿತ್ರ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ.

ಸೂಪರ್ ಸ್ಟಾರ್ ಮೈತ್ರಿ? ಅಗತ್ಯಬಿದ್ದರೆ ಒಂದಾಗುತ್ತೇವೆ- ರಜನಿ, ಕಮಲ್
ತಮಿಳುನಾಡಿನ ಒಳಿತಿಗಾಗಿ ಅಗತ್ಯಬಿದ್ದರೆ ಒಂದಾಗುವುದಾಗಿ ಸೂಪರ್ ಸ್ಟಾರ್ ಹಾಗೂ ರಾಜಕಾರಣಿಗಳಾದ ರಜನಿ ಕಾಂತ್ ಹಾಗೂ ಕಮಲ್ ಹಾಸನ್ ಸ್ಪಷ್ಟಪಡಿಸಿದ್ದಾರೆ.

ತಿರುವಳ್ಳುವರ್ ಜೊತೆಗೆ ತಮ್ಮಗೂ ಕೇಸರಿ ಬಣ್ಣ ಕಟ್ಟುವ ಪ್ರಯತ್ನ- ರಜನಿಕಾಂತ್
ಬಿಜೆಪಿ ಪಕ್ಷ ಸೇರ್ಪಡೆಗೆ ಸಂಬಂಧಿಸಿದಂತೆ ಯಾವುದೇ ಆಹ್ವಾನ ಬಂದಿಲ್ಲ. ಆದರೆ, ಆ ಪಕ್ಷದ ಸೈದ್ದಾಂತಿಕ ಬಣ್ಣದೊಂದಿಗೆ ತಮ್ಮಗೂ ಕೇಸರಿ ಬಣ್ಣ ಕಟ್ಟುವ ಪ್ರಯತ್ನ ನಡೆದಿದೆ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.

ಐಎಫ್‌ಎಫ್‌ಐ 2019: ರಜನಿಕಾಂತ್ ಗೆ ವಿಶೇಷ 'ಐಕಾನ್’ ಪ್ರಶಸ್ತಿ
ಗೋವಾದಲ್ಲಿ ಈ ತಿಂಗಳ 20ರಿಂದ 28ರವರೆಗೆ ನಡೆಯಲಿರುವ 50ನೇ ಭಾರತ-ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಖ್ಯಾತ ನಟ ರಜನಿಕಾಂತ್ ಅವರಿಗೆ 'ಐಕಾನ್ ಆಫ್ ಗೋಲ್ಡನ್ ಜುಬಿಲಿ ಆಫ್ ಐಎಫ್‌ಎಫ್‌ಐ' ಎಂಬ ವಿಶೇಷ ಪ್ರಶಸ್ತಿಯನ್ನು ಭಾರತ ಸರ್ಕಾರ ಶನಿವಾರ ಪ್ರಕಟಿಸಿದೆ.

