ಐಎಫ್‌ಎಫ್‌ಐ 2019: ರಜನಿಕಾಂತ್ ಗೆ ವಿಶೇಷ 'ಐಕಾನ್’ ಪ್ರಶಸ್ತಿ
ಗೋವಾದಲ್ಲಿ ಈ ತಿಂಗಳ 20ರಿಂದ 28ರವರೆಗೆ ನಡೆಯಲಿರುವ 50ನೇ ಭಾರತ-ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಖ್ಯಾತ ನಟ ರಜನಿಕಾಂತ್ ಅವರಿಗೆ 'ಐಕಾನ್ ಆಫ್ ಗೋಲ್ಡನ್ ಜುಬಿಲಿ ಆಫ್ ಐಎಫ್‌ಎಫ್‌ಐ' ಎಂಬ ವಿಶೇಷ ಪ್ರಶಸ್ತಿಯನ್ನು ಭಾರತ ಸರ್ಕಾರ ಶನಿವಾರ ಪ್ರಕಟಿಸಿದೆ.

ನವದೆಹಲಿ: ಗೋವಾದಲ್ಲಿ ಈ ತಿಂಗಳ 20ರಿಂದ 28ರವರೆಗೆ ನಡೆಯಲಿರುವ 50ನೇ ಭಾರತ-ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಖ್ಯಾತ ನಟ ರಜನಿಕಾಂತ್ ಅವರಿಗೆ 'ಐಕಾನ್ ಆಫ್ ಗೋಲ್ಡನ್ ಜುಬಿಲಿ ಆಫ್ ಐಎಫ್‌ಎಫ್‌ಐ' ಎಂಬ ವಿಶೇಷ ಪ್ರಶಸ್ತಿಯನ್ನು ಭಾರತ ಸರ್ಕಾರ ಶನಿವಾರ ಪ್ರಕಟಿಸಿದೆ.
ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಶನಿವಾರ ಈ ವಿಷಯ ತಿಳಿಸಿ, ಚಲನಚಿತ್ರರಂಗಕ್ಕೆ ನೀಡಿರುವ ವಿಶಿಷ್ಟ ಸೇವೆಯನ್ನು ಪರಿಗಣಿಸಿ ರಜನಿಕಾಂತ್ ಅವರನ್ನು ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಸಿದ್ಧ ಫ್ರೆಂಚ್ ನಟಿ ಇಸಾಬೆಲ್ಲೆ ಹಪ್ಪರ್ಟ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲು ಸರ್ಕಾರ ನಿರ್ಧರಿಸಿದೆ. ಈ ನಟಿ 1971 ರಲ್ಲಿ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಂತರ 120 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


