Pruthvi Ambaar

ಪ್ರಮೋದ್, ಪೃಥ್ವಿ ಅಂಬಾರ್ ನಟನೆಯ 'ಭುವನಂ ಗಗನಂ' ಪ್ರೇಮಿಗಳ ದಿನದಂದು ಬಿಡುಗಡೆ!
ಪೃಥ್ವಿ ಅಂಬಾರ್ ಮತ್ತು ಪ್ರಮೋದ್ ಅಭಿನಯದ 'ಭುವನಂ ಗಗನಂ' ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು, ಪ್ರೇಮಿಗಳ ದಿನವಾದ ಫೆಬ್ರುವರಿ 14 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ.

ನಟನೆಯಿಂದ ನಿರ್ದೇಶನಕ್ಕೆ: ತುಳು ಚಿತ್ರ ನಿರ್ದೇಶನಕ್ಕೆ ನಟ ಪೃಥ್ವಿ ಅಂಬಾರ್ ಮುಂದು
ದಿಯಾ ಚಿತ್ರದಲ್ಲಿನ ತಮ್ಮ ಅದ್ವಿತೀಯ ಅಭಿನಯಕ್ಕೆ ಹೆಸರಾದ ನಟ ಪೃಥ್ವಿ ಅಂಬಾರ್ ಇದೀಗ ನಿರ್ದೇಶನದತ್ತ ಹೊರಳಿದ್ದಾರೆ.

'ಚೌಕಿದಾರ್' ಚಿತ್ರದಲ್ಲಿ ಪೃಥ್ವಿ ಅಂಬಾರ್ ಗೆ ಧನ್ಯಾ ರಾಮ್‌ಕುಮಾರ್ ಜೋಡಿ!
ಪೃಥ್ವಿ ಅಂಬಾರ್ ನಾಯಕನಾಗಿ ಅಭಿನಯಿಸುತ್ತಿರುವ ಚೌಕಿದಾರ್ ಸಿನಿಮಾದಲ್ಲಿ ಧನ್ಯಾ ರಾಮ್ ಕುಮಾರ್ ಹೀರೋಯಿನ್ ಆಗಿ ಬಣ್ಣ ಹಚ್ಚುತ್ತಿದ್ದಾರೆ.

ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ಹೊಸ ಚಿತ್ರದ ಶೀರ್ಷಿಕೆ ಬಿಡುಗಡೆ; 'ಚೌಕಿದಾರ್' ಆಗಿ ಪೃಥ್ವಿ ಅಂಬಾರ್
ನಟ ಶ್ರೀಮುರಳಿ ಅಭಿನಯದ ರಥಾವರ ಚಿತ್ರ ನಿರ್ದೇಶನಕ್ಕೆ ಹೆಸರುವಾಸಿಯಾದ ಚಂದ್ರಶೇಖರ್ ಬಂಡಿಯಪ್ಪ ಅವರು ದಿಯಾ ಖ್ಯಾತಿಯ ನಟ ಪೃಥ್ವಿ ಅಂಬಾರ್ ಅವರೊಂದಿಗೆ ಹೊಸ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಈ ಹಿಂದೆಯೇ ನಾವು ವರದಿ ಮಾಡಿದ್ದೆವು. ಇದೀಗ ಚಿತ್ರಕ್ಕೆ 'ಚೌಕಿದಾರ್' ಎಂದು ಹೆಸರಿಡಲಾಗಿದ್ದು, ಶೀರ್ಷಿಕೆಯನ್ನು ಬಿಡುಗಡೆ ಮಾಡಿದ ನಟ ಶ್ರೀಮುರಳಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ರಥಾವರ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ಹೊಸ ಚಿತ್ರದಲ್ಲಿ ಪೃಥ್ವಿ ಅಂಬಾರ್
ಶ್ರೀಮುರಳಿ ಅಭಿನಯದ ರಥಾವರ ಚಿತ್ರದ ಮೂಲಕ ಖ್ಯಾತಿ ಪಡೆದ ಆನೆ ಪಟಾಕಿ ಮತ್ತು ತಾರಕಾಸುರ ಚಿತ್ರಗಳ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಇದೀಗ ದಿಯಾ ಖ್ಯಾತಿಯ ಪೃಥ್ವಿ ಅಂಬಾರ್ ಅವರ ಹೊಸ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನೂ ಹೆಸರಿಡದ ಈ ಸಿನಿಮಾವನ್ನು ವಿದ್ಯಾ ಶೇಖರ್ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಶಿಕ್ಷಣ ತಜ್ಞ ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಿಸಲಿದ್ದಾರೆ.

ಪ್ರಮೋದ್- ಪೃಥ್ವಿ ಅಂಬಾರ್ ನಟನೆಯ 'ಭುವನಂ ಗಗನಂ' ಚಿತ್ರ ಬಿಡುಗಡೆಗೆ ಸಜ್ಜು
ಭುವನಂ ಗಗನಂ ಚಿತ್ರವು ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗಷ್ಟೇ ಚಿತ್ರದ ಟೀಸರ್ ಅನ್ನು ನಟ ಧ್ರುವ ಸರ್ಜಾ ಬಿಡುಗಡೆ ಮಾಡಿದರು. 'ಭುವನಂ ಗಗನಂ' ನನಗೆ ಪುನೀತ್ ರಾಜ್‌ಕುಮಾರ್ ಅಭಿನಯದ ವಂಶಿ ಚಿತ್ರದ ಹಾಡನ್ನು ನೆನಪಿಸಿತು ಎಂದರು ಧ್ರುವ.

'ಫಾರ್ ರಿಜಿಸ್ಟ್ರೇಷನ್' ಚಿತ್ರ ವಿಮರ್ಶೆ: ಕೊಂಚ ಸಸ್ಪೆನ್ಸ್, ಫುಲ್ ರೋಮ್ಯಾನ್ಸ್; ಪೃಥ್ವಿ-ಮಿಲನಾ ಕೆಮಿಸ್ಟ್ರಿ ಸೂಪರ್!
ಚಿತ್ರದ ಟೈಟಲ್ ಮೂಲಕವೇ ಸಾಕಷ್ಟು ಗಮನ ಸೆಳೆದಿದ್ದ ‘ಫಾರ್ ರಿಜಿಸ್ಟ್ರೇಷನ್' ಸಿನಿಮಾ ಥಿಯೇಟರ್ ಗಳಲ್ಲಿ ರಿಲೀಸ್ ಆಗಿದೆ. ನಟ ಪೃಥ್ವಿ ಅಂಬರ್ ಮತ್ತು ಮಿಲನಾ ನಾಗರಾಜ್ ಪ್ರೆಶ್ ಕಾಂಬಿನೇಶನ್ ಸಖತ್ ಮೋಡಿ ಮಾಡಿದೆ.

ಮತ್ಸ್ಯಗಂಧ ನನ್ನನ್ನು ಪೊಲೀಸ್ ಆಗಿ ಹೊಸ ಅವತಾರದಲ್ಲಿ ತೋರಿಸಿದೆ: ನಟ ಪೃಥ್ವಿ ಅಂಬರ್
ಉದಯೋನ್ಮುಖ ನಿರ್ದೇಶಕರೊಂದಿಗೆ ಪ್ರಯೋಗ ಮಾಡುವುದರಲ್ಲಿ ಹೆಸರುವಾಸಿಯಾಗಿರುವ ಪೃಥ್ವಿ ಅಂಬರ್, "ಹೊಸ ನಿರ್ದೇಶಕರೊಂದಿಗೆ ಕೆಲಸ ಮಾಡುವುದರಿಂದ ಬಾಂಧವ್ಯ ವೃದ್ಧಿಯ ಮಹತ್ವವನ್ನು ಕಲಿಸುತ್ತದೆ. ಒಟ್ಟಾರೆ ಅನುಭವವನ್ನು ಹೆಚ್ಚಿಸಿದೆ ಎನ್ನುತ್ತಾರೆ.

ಮತ್ಸ್ಯಗಂಧ ಚಿತ್ರದ ಟ್ರೈಲರ್
ನಟ ಪೃಥ್ವಿ ಅಂಬಾರ್ ನಟಿಸಿರುವ ಮತ್ಸ್ಯಗಂಧ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ದೇವರಾಜ್ ಪೂಜಾರಿ ನಿರ್ದೇಶಿಸಿದ್ದಾರೆ.

