passes away

ಮಲಯಾಳಂನ ಜನಪ್ರಿಯ ನಟ ಇನ್ನೋಸೆಂಟ್ ನಿಧನ
ಮಲಯಾಳಂನ ಜನಪ್ರಿಯ ನಟ ಹಾಗೂ ಮಾಜಿ ಲೋಕಸಭಾ ಸದಸ್ಯ ಇನ್ನೋಸೆಂಟ್ ಭಾನುವಾರ ತಡರಾತ್ರಿ ಕೊಚ್ಚಿಯ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಇನ್ನೋಸೆಂಟ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಹಾಸನ: ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನ
ಜೈನರ ಪವಿತ್ರ ಕ್ಷೇತ್ರಗಳಲ್ಲೊಂದಾದ ಶ್ರವಣಬೆಳಗೊಳದ ದಿಗಂಬರ ಜೈನಮಠದ ಮುಖ್ಯಸ್ಥ ಹಾಗೂ ಧರ್ಮಾಧ್ಯಕ್ಷ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಇಂದು ಇಹಲೋಕ ತ್ಯಜಿಸಿದರು.

ಇಂದೋರ್: ಕಾಲೇಜು ಪ್ರಾಂಶುಪಾಲರಿಗೆ ಬೆಂಕಿ ಹಚ್ಚಿದ ಮಾಜಿ ವಿದ್ಯಾರ್ಥಿ; ಚಿಕಿತ್ಸೆಗೆ ಸ್ಪಂದಿಸದೆ ಸಾವು
ಫೆಬ್ರುವರಿ 20 ರಂದು ಮಾಜಿ ವಿದ್ಯಾರ್ಥಿಯಿಂದ ಬೆಂಕಿ ಹಚ್ಚಿಸಿಕೊಂಡು ಶೇ 80 ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಇಂದೋರ್‌ನ ಖಾಸಗಿ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರು ಶನಿವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪತಿ ಡಾ ದೇವಿಸಿಂಗ್ ಆರ್.ಶೇಖಾವತ್ ನಿಧನ, ಅಂತ್ಯಕ್ರಿಯೆ ಇಂದು
ಶಿಕ್ಷಣ ತಜ್ಞ ಮತ್ತು ರಾಜಕಾರಣಿ, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಪತಿ ಡಾ. ದೇವಿಸಿಂಗ್ ರಾಂಸಿಂಗ್ ಶೇಖಾವತ್ ಶುಕ್ರವಾರ ಬೆಳಿಗ್ಗೆ ಇಲ್ಲಿ ನಿಧನರಾದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಡಬ್ಬಿಂಗ್ ಮಾಡುವಾಗ ಅಸ್ವಸ್ಥ: ತಮಿಳಿನ ಜನಪ್ರಿಯ ಹಾಸ್ಯನಟ ಆರ್. ಮಯಿಲ್ ಸಾಮಿ ನಿಧನ
ತಮಿಳು ಹಾಸ್ಯನಟ ಚಿತ್ರವೊಂದಕ್ಕೆ ಡಬ್ಬಿಂಗ್ ಮಾಡುವಾಗ ಅಸ್ವಸ್ಥಗೊಂಡಿದ್ದಾರೆ. ಈ ವೇಳೆ ಅವರ ಕುಟುಂಬ ಸದಸ್ಯರು ಮತ್ತು ಸಹೋದ್ಯೋಗಿಗಳು ಅವರನ್ನು ಚೆನ್ನೈನ ಪೊರೂರು ಶ್ರೀ ರಾಮಚಂದ್ರ ವೈದ್ಯಕೀಯ ಕಾಲೇಜಿಗೆ ಕರೆದೊಯ್ದಿದ್ದಾರೆ. ಆದರೆ, ಅವರು ಭಾನುವಾರ ಬೆಳಿಗ್ಗೆ ನಿಧನರಾಗಿದ್ದಾರೆ.

ಭಾರತೀಯ ಫುಟ್ಬಾಲ್ ದಂತಕಥೆ ತುಳಸಿದಾಸ್ ಬಲರಾಮ್ ನಿಧನ
ಭಾರತೀಯ ಫುಟ್ಬಾಲ್ ದಂತಕಥೆ ತುಳಸಿದಾಸ್ ಬಲರಾಮ್ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದ ನಂತರ ಗುರುವಾರ ಕೋಲ್ಕತ್ತಾದಲ್ಲಿ ನಿಧನರಾದರು ಎಂದು ಅವರ ಕುಟುಂಬದ ನಿಕಟ ಮೂಲಗಳು ತಿಳಿಸಿವೆ.

ರಾಷ್ಟ್ರ ಪ್ರಶಸ್ತಿ, ಪದ್ಮಭೂಷಣ ವಿಜೇತೆ, ಹಿರಿಯ ಗಾಯಕಿ ವಾಣಿ ಜೈರಾಮ್ ನಿಧನ
ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿ ಪದ್ಮಭೂಷಣ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತೆ ಗಾಯಕಿ ವಾಣಿ ಜೈರಾಮ್ ಅವರು ಇಂದು ನಿಧನರಾಗಿದ್ದಾರೆ.

ಶಂಕರಾಭರಣಮ್, ಸಾಗರ ಸಂಗಮಮ್ ಸಿನಿಮಾಗಳ ಖ್ಯಾತ ನಿರ್ದೇಶಕ ಕೆ.ವಿಶ್ವನಾಥ್ ನಿಧನ
ಸ್ವಾತಿ ಮುತ್ಯಮ್, ಶಂಕರಾಭರಣಂ, ಸಾಗರ ಸಂಗಮಮ್ ಸೇರಿದಂತೆ ಹಲವು ಅದ್ಭುತ ಸಿನಿಮಾಗಳನ್ನು ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕ ಕಾಶಿನಾಥುನಿ ವಿಶ್ವನಾಥ್ (ಕೆ.ವಿಶ್ವನಾಥ್) ಗುರುವಾರ (ಫೆ.2) ರಂದು ಇಹಲೋಕ ತ್ಯಜಿಸಿದ್ದಾರೆ.

ಕನ್ನಡದ ಖ್ಯಾತ ಕವಿ, ಕತೆಗಾರ ಕೆ.ವಿ ತಿರುಮಲೇಶ್ ವಿಧಿವಶ
ಕನ್ನಡದ ಖ್ಯಾತ ಕವಿ, ಕತೆಗಾರ, ವಿಮರ್ಶಕ ಕೆ.ವಿ. ತಿರುಮಲೇಶ್ (82) ಇನ್ನಿಲ್ಲ. ಇಂದು ಮುಂಜಾನೆ ಹೈದರಾಬಾದಿನ ತಮ್ಮ ಮಗಳ ನಿವಾಸದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ.

