ಭಾರತೀಯ ಫುಟ್ಬಾಲ್ ದಂತಕಥೆ ತುಳಸಿದಾಸ್ ಬಲರಾಮ್ ನಿಧನ
ಭಾರತೀಯ ಫುಟ್ಬಾಲ್ ದಂತಕಥೆ ತುಳಸಿದಾಸ್ ಬಲರಾಮ್ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದ ನಂತರ ಗುರುವಾರ ಕೋಲ್ಕತ್ತಾದಲ್ಲಿ ನಿಧನರಾದರು ಎಂದು ಅವರ ಕುಟುಂಬದ ನಿಕಟ ಮೂಲಗಳು ತಿಳಿಸಿವೆ.

ನವದೆಹಲಿ: ಭಾರತೀಯ ಫುಟ್ಬಾಲ್ ದಂತಕಥೆ ತುಳಸಿದಾಸ್ ಬಲರಾಮ್ ನಿಧನರಾಗಿದ್ದಾರೆ. ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಮತ್ತು ಒಲಿಂಪಿಯನ್ ತುಳಸಿದಾಸ್ ಬಲರಾಮ್ ಅವರು 1950 ಮತ್ತು 60 ರ ದಶಕದಲ್ಲಿ ಭಾರತೀಯ ಫುಟ್ಬಾಲ್ ನ 'ಹೋಲಿ ಟ್ರಿನಿಟಿ' ಭಾಗವಾಗಿದ್ದು, ದೀರ್ಘಕಾಲದ ಅನಾರೋಗ್ಯದ ನಂತರ ಗುರುವಾರ ಕೋಲ್ಕತ್ತಾದಲ್ಲಿ ನಿಧನರಾದರು ಎಂದು ಅವರ ಕುಟುಂಬದ ನಿಕಟ ಮೂಲಗಳು ತಿಳಿಸಿವೆ.
85 ವರ್ಷ ವಯಸ್ಸಿನ ಬಲರಾಮ್, ಪಶ್ಚಿಮ ಬಂಗಾಳದ ಹೂಗ್ಲಿ ನದಿ ದಡದಲ್ಲಿರುವ ಫ್ಲಾಟ್ ವೊಂದರಲ್ಲಿ ವಾಸಿಸುತ್ತಿದ್ದರು. ಮೂತ್ರದ ಸೋಂಕು ಮತ್ತು ಕಿಬ್ಬೊಟ್ಟೆಯ ಸಮಸ್ಯೆಯಿಂದಾಗಿ ಕಳೆದ ಡಿಸೆಂಬರ್ 26 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ಪರಿಸ್ಥಿತಿ ಸುಧಾರಿಸಿರಲಿಲ್ಲ. ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು ಎಂದು ಅವರ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.
ಅಕ್ಟೋಬರ್ 4, 1937 ರಂದು ತಮಿಳಿನ ಮುತ್ತಮ್ಮ ಮತ್ತು ತುಳಸಿದಾಸ್ ಕಾಳಿದಾಸ್ ದಂಪತಿಯ ಮಗನಾಗಿ ಜನಿಸಿದ ಬಲರಾಮ್, ಏಳು ಸೀಸನ್ ಗಳಲ್ಲಿ 131 ಗೋಲುಗಳನ್ನು ಗಳಿಸಿದ್ದಾರೆ. ಅವರು ಅರ್ಜುನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಫುಟ್ಬಾಲ್ ದಂತಕಥೆಯ ಗೌರವಾರ್ಥವಾಗಿ ಮೂರು ದಿನಗಳ ಶೋಕಾಚರಣೆಯನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಘೋಷಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


