ಸಿನಿಮಾ ಸುದ್ದಿ

ಡಬ್ಬಿಂಗ್ ಮಾಡುವಾಗ ಅಸ್ವಸ್ಥ: ತಮಿಳಿನ ಜನಪ್ರಿಯ ಹಾಸ್ಯನಟ ಆರ್. ಮಯಿಲ್‌ ಸಾಮಿ ನಿಧನ

ತಮಿಳು ಹಾಸ್ಯನಟ ಚಿತ್ರವೊಂದಕ್ಕೆ ಡಬ್ಬಿಂಗ್ ಮಾಡುವಾಗ ಅಸ್ವಸ್ಥಗೊಂಡಿದ್ದಾರೆ. ಈ ವೇಳೆ ಅವರ ಕುಟುಂಬ ಸದಸ್ಯರು ಮತ್ತು ಸಹೋದ್ಯೋಗಿಗಳು ಅವರನ್ನು ಚೆನ್ನೈನ ಪೊರೂರು ಶ್ರೀ ರಾಮಚಂದ್ರ ವೈದ್ಯಕೀಯ ಕಾಲೇಜಿಗೆ ಕರೆದೊಯ್ದಿದ್ದಾರೆ. ಆದರೆ, ಅವರು ಭಾನುವಾರ ಬೆಳಿಗ್ಗೆ ನಿಧನರಾಗಿದ್ದಾರೆ.

ಡಬ್ಬಿಂಗ್ ಮಾಡುವಾಗ ಅಸ್ವಸ್ಥ: ತಮಿಳಿನ ಜನಪ್ರಿಯ ಹಾಸ್ಯನಟ ಆರ್. ಮಯಿಲ್‌ ಸಾಮಿ ನಿಧನ
ಆರ್ ಮಯಿಲ್‌ಸಾಮಿ
Published On :

ಚೆನ್ನೈ: ತಮಿಳು ಚಲನಚಿತ್ರಗಳ ಜನಪ್ರಿಯ ಹಾಸ್ಯನಟ 57 ವರ್ಷದ ಆರ್. ಮಯಿಲ್‌ಸಾಮಿ ಅವರು ಭಾನುವಾರ ಮುಂಜಾನೆ ಚೆನ್ನೈನಲ್ಲಿ ನಿಧನರಾದರು.

ತಮಿಳು ಹಾಸ್ಯನಟ ಚಿತ್ರವೊಂದಕ್ಕೆ ಡಬ್ಬಿಂಗ್ ಮಾಡುವಾಗ ಅಸ್ವಸ್ಥಗೊಂಡಿದ್ದಾರೆ. ಈ ವೇಳೆ ಅವರ ಕುಟುಂಬ ಸದಸ್ಯರು ಮತ್ತು ಸಹೋದ್ಯೋಗಿಗಳು ಅವರನ್ನು ಚೆನ್ನೈನ ಪೊರೂರು ಶ್ರೀ ರಾಮಚಂದ್ರ ವೈದ್ಯಕೀಯ ಕಾಲೇಜಿಗೆ ಕರೆದೊಯ್ದಿದ್ದಾರೆ. ಆದರೆ, ಅವರು ಭಾನುವಾರ ಬೆಳಿಗ್ಗೆ ನಿಧನರಾಗಿದ್ದಾರೆ.

ಮಯಿಲ್‌‌ಸಾಮಿ ಅವರು 39 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ 200ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳು ಹಾಸ್ಯನಟ ನಿಧನಕ್ಕೂ ಮುನ್ನ ತಮ್ಮ ಇತ್ತೀಚಿನ ಚಿತ್ರ 'ಗ್ಲಾಸ್‌ಮೇಟ್'ಗಾಗಿ ಡಬ್ಬಿಂಗ್‌ನಲ್ಲಿ ತೊಡಗಿದ್ದರು. 

ನಟರಾದ ಎಂ.ಎಸ್. ಭಾಸ್ಕರ್ ಮತ್ತು ಪಾರ್ತಿಪನ್ ಅವರ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದರು.

ಮಯಿಲ್‌ಸಾಮಿ ಅವರು 1984 ರ ಭಾಗ್ಯರಾಜ್ ನಿರ್ದೇಶನದ ಚಿತ್ರ 'ಧವನಿ ಕನವುಗಳು' ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಬಳಿಕ ಗಿಲ್ಲಿ, ಧೂಲ್, ಉತ್ತಮ ಪುತಿರನ್, ಕಾಂಚನಾ ಮತ್ತು ಇತರ ಹಲವು ಚಿತ್ರಗಳಲ್ಲಿ ಕೆಲವು ಉತ್ತಮ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಅವರು 'ಕಂಗಲಾಲ್ ಕೈದು ಸೇ' ಚಿತ್ರಕ್ಕಾಗಿ ತಮಿಳುನಾಡು ರಾಜ್ಯ ಸರ್ಕಾರದ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿಯನ್ನು ಗೆದ್ದಿದ್ದರು.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಹಲವಾರು ಹಿರಿಯ ರಾಜಕೀಯ ಮುಖಂಡರು ಮಯಿಲ್‌ ಸಾಮಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಹಿರಿಯ ನಟ ಕಮಲ್ ಹಾಸನ್ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.