Pakistana

ಕರ್ತಾರ್‌ಪುರ್ ಗುರುದ್ವಾರ ಪ್ರವೇಶಕ್ಕೆ ಶುಲ್ಕ: ಧಾರ್ಮಿಕ ನಂಬಿಕೆಗಳ ಮೇಲೆ ಪಾಕ್ ವ್ಯಾಪಾರ- ಹರ್‌ಸಿಮ್ರತ್
ಧಾರ್ಮಿಕ ನಂಬಿಕೆಗಳ ಮೇಲೆ ಪಾಕಿಸ್ತಾನ ವ್ಯಾಪಾರ ನಡೆಸಲು ಮುಂದಾಗಿರುವುದು ನಾಚಿಕೆ ಗೇಡು ಎಂದು ಶಿರೋಮಣಿ ಅಕಾಲಿದಳದ ಹಿರಿಯ ನಾಯಕಿ ಹಾಗೂ ಕೇಂದ್ರ ಆಹಾರ ಸಂಸ್ಕರಣೆ ಖಾತೆ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್ ಓಸಿಯಲ್ಲಿ 9 ಭಾರತೀಯ ಸೈನಿಕರ ಹತ್ಯೆ- ಪಾಕ್ ಸೇನೆ
ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ನಡೆದ ಗುಂಡಿನ ಚಕಮಕಿಯಲ್ಲಿ ಭಾರತದ ಎರಡು ಬಂಕರ್ ಗಳನ್ನು ಉಡಾಯಿಸಲಾಗಿದ್ದು, 9 ಮಂದಿ ಭಾರತೀಯ ಸೈನಿಕರನ್ನು ಹತ್ಯೆ ಮಾಡಲಾಗಿದೆ. ಅನೇಕ ಮಂದಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಸೇನೆ ಇಂದು ಹೇಳಿಕೊಂಡಿದೆ.

8 ಮಿಲಿಯನ್ ಕಾಶ್ಮೀರಿ ಜನರನ್ನು ಬೆದರಿಸಲು 9 ಲಕ್ಷ ಸೈನಿಕರ ನಿಯೋಜನೆ- ಇಮ್ರಾನ್ ಖಾನ್
ಸೈನಿಕರನ್ನು ಬಳಸಿಕೊಳ್ಳುವ ಮೂಲಕ ಅಮಾಯಕ ಕಾಶ್ಮೀರಿಗಳನ್ನು ಬೆದರಿಸಿ ತನ್ನ ಭೂ ಸ್ವಾಧೀನ ಕಾರ್ಯಸೂಚಿಯನ್ನು ಸಾಧಿಸಿಲು ಪ್ರಧಾನಿ ನರೇಂದ್ರ ಮೋದಿ ಚಿಂತಿಸಿದ್ದಾರೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಟೀಕಿಸಿದ್ದಾರೆ.

ಎಲ್ ಒಸಿ ಬಳಿ 20 ಉಗ್ರರ ಶಿಬಿರಗಳು: ಕಾಶ್ಮೀರದಲ್ಲಿ 200 ಉಗ್ರರು ಕಾರ್ಯ ಚಟುವಟಿಕೆ- ಅಧಿಕಾರಿಗಳು
ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಕನಿಷ್ಠ 20 ಭಯೋತ್ಪಾದಕ ಶಿಬಿರಗಳು ಹಾಗೂ ಮತ್ತೊಂದು 20 ಉಡಾವಣಾ ಪ್ಯಾಡ್ ಗಳನ್ನು ಸಕ್ರಿಯಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ಷಿಪ್ರಗತಿಯಲ್ಲಿ ಜಮ್ಮು-ಕಾಶ್ಮೀರದಲ್ಲಿನ ನಿರ್ಬಂಧ ತೆರವುಗೊಳಿಸಲು ಭಾರತಕ್ಕೆ ಅಮೆರಿಕಾ ಒತ್ತಾಯ
ಜಮ್ಮು- ಕಾಶ್ಮೀರದಲ್ಲಿ ವಿಧಿಸಲಾಗಿರುವ ನಿರ್ಬಂಧವನ್ನು ಕ್ಷಿಪ್ರಗತಿಯಲ್ಲಿ ತೆರವುಗೊಳಿಸುವಂತೆ ಭಾರತವನ್ನು ಅಮೆರಿಕಾ ಒತ್ತಾಯಿಸಿದೆ.

ಪಾಕ್ ಕ್ರಿಕೆಟಿಗರಿಗೆ ಬಿರಿಯಾನಿ, ಸಿಹಿ ಪದಾರ್ಥಗಳ ಸೇವನೆ ನಿಷೇಧ!
ಮಿಸ್ಬಾ-ಉಲ್ - ಹಕ್ ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹಾಗೂ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥ ಎರಡು ಹುದ್ದೆ ಸ್ವೀಕರಿಸಿದ ಬೆನ್ನಲ್ಲೆ ತಂಡದ ಫಿಟ್ನೆಸ್ ಗುಣಮಟ್ಟ ಹೆಚ್ಚಿಸಲು ಹೊಸ ಆಹಾರ ಪದ್ಧತಿ ಮೊರೆ ಹೋಗಿದ್ದಾರೆ.

ಅಫ್ರಿದಿ ಮುಂದಿನ ಪಾಕ್ ಪ್ರಧಾನಿ? ಮಾಜಿ ಕ್ರಿಕೆಟಿಗ, ಸೇನಾ ವಕ್ತಾರ ನಡುವಿನ ಅಪ್ಪುಗೆಗೆ ಟ್ವಿಟಿಗರ ಅಚ್ಚರಿ!
ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಶಾಹಿದ್ ಅಫ್ರಿದಿ ಮುಂದಿನ ಪಾಕ್ ಪ್ರಧಾನಿ ಎಂದು ಪ್ರಸ್ತಾಪಿಸಿದ ಸೇನಾ ವಕ್ತಾರ ಅಸಿಫ್ ಗಾಪೂರ್ ಹಾಗೂ ಆಫ್ರಿದಿನ ನಡುವಿನ ಅಪ್ಪುಗೆಗೆ ಟ್ವಿಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರಿ ಮಕ್ಕಳು ಸುರಕ್ಷಿತವಾಗಿ ಮರಳಿ ಶಾಲೆಗೆ ಹೋಗಲು ವಿಶ್ವಸಂಸ್ಥೆ ನೆರವಾಗಬೇಕು-ಮಲಾಲ
ಕಣಿವೆ ರಾಜ್ಯ ಜಮ್ಮು- ಕಾಶ್ಮೀರದಲ್ಲಿನ ಮಕ್ಕಳು ಸುರಕ್ಷಿತವಾಗಿ ಮರಳಿ ಶಾಲೆಗೆ ಹೋಗಲು ವಿಶ್ವಸಂಸ್ಥೆ ನೆರವಾಗಬೇಕು ಎಂದು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಹಾಗೂ ಪಾಕಿಸ್ತಾನಿ ಶಿಕ್ಷಣ ಹಕ್ಕುಗಳ ಹೋರಾಟಗಾರ್ತಿ ಮಲಾಲ ಯೂಸಫ್ ಝಾಯಿ ಒತ್ತಾಯಿಸಿದ್ದಾರೆ.

ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದಿಂದ ಸುಳ್ಳಿನ ಆರೋಪ-ವಿಶ್ವಸಂಸ್ಥೆಯಲ್ಲಿ ಭಾರತ ತಿರುಗೇಟು
ಜಮ್ಮು- ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ಪದೇ ಪದೇ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹೇಳಿಕೆ ನೀಡುತ್ತಿರುವ ಪಾಕಿಸ್ತಾನ ಕಪೋಲ ಕಲ್ಪಿತ ಸುಳ್ಳಿನ ಆರೋಪ ಮಾಡುತ್ತಿದೆ ಎಂದು ಭಾರತ ತಿರುಗೇಟು ನೀಡಿದೆ.

