8 ಮಿಲಿಯನ್ ಕಾಶ್ಮೀರಿ ಜನರನ್ನು ಬೆದರಿಸಲು 9 ಲಕ್ಷ ಸೈನಿಕರ ನಿಯೋಜನೆ- ಇಮ್ರಾನ್ ಖಾನ್
ಸೈನಿಕರನ್ನು ಬಳಸಿಕೊಳ್ಳುವ ಮೂಲಕ ಅಮಾಯಕ ಕಾಶ್ಮೀರಿಗಳನ್ನು ಬೆದರಿಸಿ ತನ್ನ ಭೂ ಸ್ವಾಧೀನ ಕಾರ್ಯಸೂಚಿಯನ್ನು ಸಾಧಿಸಿಲು ಪ್ರಧಾನಿ ನರೇಂದ್ರ ಮೋದಿ ಚಿಂತಿಸಿದ್ದಾರೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಟೀಕಿಸಿದ್ದಾರೆ.

ಇಸ್ಲಾಮಾಬಾದ್ : ಸೈನಿಕರನ್ನು ಬಳಸಿಕೊಳ್ಳುವ ಮೂಲಕ ಅಮಾಯಕ ಕಾಶ್ಮೀರಿಗಳನ್ನು ಬೆದರಿಸಿ ತನ್ನ ಭೂ ಸ್ವಾಧೀನ ಕಾರ್ಯಸೂಚಿಯನ್ನು ಸಾಧಿಸಿಲು ಪ್ರಧಾನಿ ನರೇಂದ್ರ ಮೋದಿ ಚಿಂತಿಸಿದ್ದಾರೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಟೀಕಿಸಿದ್ದಾರೆ.
ಜಮ್ಮು- ಕಾಶ್ಮೀರದಲ್ಲಿ 75 ದಿನಗಳಾದರೂ ನಿರ್ಬಂಧ ಮುಂದುವರೆಸಿರುವ ಮೋದಿ ಆಕ್ರಮಿತ ಸರ್ಕಾರ, ಅಮಾಯಕ ಕಾಶ್ಮೀರಿ ಜನರನ್ನು ಬೆದರಿಸಲು 9 ಲಕ್ಷ ಸೈನಿಕರನ್ನು ನಿಯೋಜಿಸುವ ಮೂಲಕ ಸ್ವಾಧೀನ ಕಾರ್ಯವನ್ನು ಸಾಧಿಸಲು ಮೋದಿ ತಂತ್ರ ರೂಪಿಸಿದ್ದಾರೆ. ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ 9 ಲಕ್ಷ ಸೈನಿಕರ ಅಗತ್ಯವಿಲ್ಲ. 8 ಮಿಲಿಯನ್ ಕಾಶ್ಮೀರಿ ಜನರಲ್ಲಿ ಭಯ ಭೀತಿ ಮೂಡಿಸಲಾಗುತ್ತಿದೆ ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಯಭೀತರಾಗಿದ್ದಾರೆ ಎಂದಿದ್ದಾರೆ. ಜಮ್ಮು- ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಇಡೀ ವಿಶ್ವ ಗಮನಿಸುತ್ತಿದೆ. ನಿರ್ಬಂಧವನ್ನು ತೆಗೆದರೆ ರಕ್ತದೋಕುಳಿ ನಡೆಯಲಿದೆ ಎಂಬ ಭಯ ಮೋದಿಗೆ ಇದೆ.
ಇದು ಕಾಶ್ಮೀರಿ ಜನರನ್ನು ನಿಗ್ರಹಿಸುವ ಏಕೈಕ ಮಾರ್ಗವಾಗಿದೆ ಎಂದು ಇಮ್ರಾನ್ ಖಾನ್ ಬರೆದುಕೊಂಡಿದ್ದಾರೆ.
ಭಾರತ ಸರ್ಕಾರ ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಪಡಿಸಿ ನಿರ್ಬಂಧ ಹೇರಿ ಸಂವಹನವನ್ನು ಸ್ಥಗಿತಗೊಳಿಸಿದ ನಂತರ ಆಗಸ್ಟ್ 5 ರಿಂದಲೂ ಆಕ್ರಮಿತ ಕಾಶ್ನೀರದಲ್ಲಿ ಭಯ, ಹತಾಶೆ ಹೆಚ್ಚಾಗಿದೆ. ಮೊಬೈಲ್ ಪೋನ್ ಗಳ ಕರೆ ಹಾಗೂ ಪಠ್ಯ ಸೇವೆಗಳನ್ನು ಆರಂಭಗೊಂಡಿತಾದರೂ, ಮಂಗಳವಾರದಿಂದ ಪಠ್ಯ ಸೇವೆಗಳನ್ನು ಮತ್ತೆ ನಿರ್ಬಂಧಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


