ಕ್ರಿಕೆಟ್

ಪಾಕ್ ಕ್ರಿಕೆಟಿಗರಿಗೆ ಬಿರಿಯಾನಿ, ಸಿಹಿ ಪದಾರ್ಥಗಳ ಸೇವನೆ ನಿಷೇಧ!

ಮಿಸ್ಬಾ-ಉಲ್ - ಹಕ್ ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹಾಗೂ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥ ಎರಡು ಹುದ್ದೆ ಸ್ವೀಕರಿಸಿದ ಬೆನ್ನಲ್ಲೆ ತಂಡದ ಫಿಟ್ನೆಸ್ ಗುಣಮಟ್ಟ ಹೆಚ್ಚಿಸಲು ಹೊಸ ಆಹಾರ ಪದ್ಧತಿ ಮೊರೆ ಹೋಗಿದ್ದಾರೆ.

ಪಾಕ್ ಕ್ರಿಕೆಟಿಗರಿಗೆ ಬಿರಿಯಾನಿ, ಸಿಹಿ ಪದಾರ್ಥಗಳ ಸೇವನೆ ನಿಷೇಧ!
ಸಂಗ್ರಹ ಪೋಟೋಗಳು
Published On :

ಲಾಹೋರ್: ಮಿಸ್ಬಾ-ಉಲ್ - ಹಕ್ ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹಾಗೂ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥ ಎರಡು ಹುದ್ದೆ ಸ್ವೀಕರಿಸಿದ ಬೆನ್ನಲ್ಲೆ ತಂಡದ ಫಿಟ್ನೆಸ್ ಗುಣಮಟ್ಟ ಹೆಚ್ಚಿಸಲು ಹೊಸ ಆಹಾರ ಪದ್ಧತಿ  ಮೊರೆ ಹೋಗಿದ್ದಾರೆ.

ತಂಡದಲ್ಲಿ ಹೊಸ ಫಿಟ್ನೆಸ್ ಸಂಸ್ಕೃತಿ ಹುಟ್ಟು ಹಾಕಲು ಮಿಸ್ಬಾ- ಉಲ್- ಹಕ್ ಅವರು ರಾಷ್ಟ್ರೀಯ ಶಿಬಿರ ಮತ್ತು ದೇಶಿಯ ಟೂರ್ನಿಗಳಲ್ಲಿ ಆಟಗಾರರಿಗೆ  ಆಹಾರದಲ್ಲಿ ಬದಲಾವಣೆ ಮಾಡುತ್ತಿದ್ದಾರೆ.ಬಿರಿಯಾನಿ, ಎಣ್ಣೆ ಮಿಶ್ರಿತ ಕೆಂಪು ಬಣ್ಣದ ಮಾಂಸ ಅಥವಾ ಸಿಹಿ ಪದಾರ್ಥಗಳನ್ನು ಸೇವಿಸಬಾರದೆಂದು ಆದೇಶ ಹೊರಡಿಸಿದ್ದಾರೆ ಎಂಬುದು ತಿಳಿದುಬಂದಿದೆ.

ಇತ್ತೀಚಿಗಷ್ಟೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಮಿಸ್ಬಾ- ಉಲ್ - ಹಕ್ ಅವರನ್ನು ಪಾಕಿಸ್ತಾನ ತಂಡದ ಮುಖ್ಯ ಕೋಚ್ ಹಾಗೂ ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ಹಾಗೂ ವಕಾರ್ ಯೂನಿಸ್ ಅವರನ್ನು ಬೌಲಿಂಗ್ ಕೋಚ್ ಆಗಿ ಮುಂದಿನ ಮೂರು ವರ್ಷಗಳ ಅವಧಿಗೆ ನೇಮಕ ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.