Omicron

ಕೊರೋನಾದ ಓಮಿಕ್ರಾನ್ ಸೋಂಕು ತೀವ್ರತೆಯಿಂದ ರಕ್ಷಣೆ ಪಡೆಯುವುದಕ್ಕೆ ಲಸಿಕೆಯೇ ಮುಖ್ಯ: ಡಬ್ಲ್ಯುಹೆಚ್ಒ
ಕೊರೋನಾ ರೂಪಾಂತರಿ ಓಮಿಕ್ರಾನ್ ಸೋಂಕು ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಕೋವಿಡ್-19 ಲಸಿಕೆ ಅಭಿಯಾನಕ್ಕೆ ಡಬ್ಲ್ಯುಹೆಚ್ಒ ಮುಖ್ಯ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ ಕರೆ ನೀಡಿದ್ದಾರೆ.

ಅಮೆರಿಕದಲ್ಲಿ ಓಮೈಕ್ರಾನ್ ಗೆ ಮೊದಲ ಬಲಿ, ಕೋವಿಡ್ ಲಸಿಕೆ ಪಡೆದುಕೊಳ್ಳದ ವ್ಯಕ್ತಿ ಸಾವು
ಜಗತ್ತಿನಾದ್ಯಂತ ಅತಿ ವೇಗದಲ್ಲಿ ಹರಡುತ್ತಿರುವ ಕೊರೋನಾ ವೈರಸ್ ರೂಪಾಂತರಿ ತಳಿ ಓಮೈಕ್ರಾನ್‍ನಿಂದಾಗಿ ಅಮೆರಿಕದ ಟೆಕ್ಸಾಸ್‍ನ ಕೌಂಟಿಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಓಮೈಕ್ರಾನ್‍ನಿಂದಾಗಿ ಸಂಭವಿಸಿದ ಮೊದಲ ಸಾವು ಇದಾಗಿದೆ.

ಕರ್ನಾಟಕದಲ್ಲಿ ಮತ್ತೆ ಐವರಲ್ಲಿ ಓಮಿಕ್ರಾನ್: ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆ
ಕರ್ನಾಟಕದಲ್ಲಿ ಮತ್ತೆ 5 ಓಮಿಕ್ರಾನ್ ಕೇಸುಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣಗಳು 19ಕ್ಕೇರಿದೆ.

ಷೇರು ವಹಿವಾಟುದಾರರಿಗೆ ಆಘಾತ: ಓಮಿಕ್ರಾನ್ ಆತಂಕಕ್ಕೆ ಸೆನ್ಸೆಕ್ಸ್, ನಿಫ್ಟಿ ಭಾರೀ ಕುಸಿತ
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ವಾರದ ಆರಂಭದ ದಿನ ಸೋಮವಾರ ಆಘಾತವುಂಟಾಗಿದೆ. ಷೇರು ಮಾರುಕಟ್ಟೆಯ ಸೂಚ್ಯಂಕ- ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ- ಸೋಮವಾರದ ಆರಂಭಿಕ ವಹಿವಾಟಿನ ಸಮಯದಲ್ಲಿ ಶೇಕಡಾ 2.3ಕ್ಕಿಂತ ಕೆಳಗೆ ಕುಸಿಯಿತು.

ಓಮಿಕ್ರಾನ್ ಭೀತಿ: ಭಾರತದಲ್ಲಿ ಯಾವುದೇ ಪರಿಸ್ಥಿತಿಗೂ ಸಿದ್ಧರಾಗಿ: ಏಮ್ಸ್ ಗಂಭೀರ ಎಚ್ಚರಿಕೆ
ಜಗತ್ತಿನ 90ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಭೀತಿ ಸೃಷ್ಚಿಸಿರುವ ಕೋವಿಡ್ ವೈರಸ್ ನ ನೂತನ ರೂಪಾಂತರ ಓಮಿಕ್ರಾನ್ ಕುರಿತಂತೆ ಯಾವುದೇ ಪರಿಸ್ಥಿತಿ ಸಿದ್ಧರಾಗಿರುವಂತೆ ದೆಹಲಿ ಏಮ್ಸ್ (All India Institute of Medical Sciences) ಗಂಭೀರ ಎಚ್ಚರಿಕೆ ನೀಡಿದೆ.

ಗುಜರಾತ್: ಬ್ರಿಟನ್ ನಿಂದ ವಾಪಸ್ಸಾದ ಇಬ್ಬರಿಗೆ ಓಮಿಕ್ರಾನ್, ಸೋಂಕಿತರ 9ಕ್ಕೆ ಏರಿಕೆ
ಬ್ರಿಟನ್ ನಿಂದ ಇತ್ತೀಚೆಗೆ ಗುಜರಾತ್‌ಗೆ ಆಗಮಿಸಿದ 45 ವರ್ಷದ ಎನ್‌ಆರ್‌ಐ ಮತ್ತು ಹದಿಹರೆಯದ ಹುಡುಗನಿಗೆ ಕೋವಿಡ್-19 ರೂಪಾಂತರಿ ಓಮಿಕ್ರಾನ್ ಪಾಸಿಟಿವ್ ದೃಢಪಟ್ಟಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಓಮಿಕ್ರಾನ್ ಪರಿಣಾಮದ ಮೂರನೇ ಅಲೆ ಫೆಬ್ರವರಿಯಲ್ಲಿ ತೀವ್ರ; ಕೇಂದ್ರ ಸಮಿತಿ
ಓಮಿಕ್ರಾನ್ ಪರಿಣಾಮದಿಂದ 2022 ರ ಫೆಬ್ರವರಿ ತಿಂಗಳಲ್ಲಿ ಕೊರೋನಾದ ಮೂರನೇ ಅಲೆ ಉತ್ತುಂಗದಲ್ಲಿರಲಿದೆ ಆದರೆ 2 ನೇ ಅಲೆಗಿಂತಲೂ ತೀವ್ರತೆ ಕಡಿಮೆ ಇರಲಿದೆ ಎಂದು ಕೋವಿಡ್-19 ಸಂಬಂಧಿತ ರಾಷ್ಟ್ರೀಯ ಸೂಪರ್ ಮಾಡಲ್ ಸಮಿತಿ ಎಚ್ಚರಿಸಿದೆ.

ರಾಜ್ಯದಲ್ಲಿ ಓಮಿಕ್ರಾನ್ ಹೆಚ್ಚಳ: ಒಂದೇ ದಿನ ದಕ್ಷಿಣ ಕನ್ನಡದಲ್ಲಿ ಐವರಿಗೆ ಕೋವಿಡ್ ರೂಪಾಂತರಿ, ಬೆಂಗಳೂರಿನಲ್ಲಿ 1 ಕೇಸ್ ಪತ್ತೆ!
ದಿನ ಕಳೆದಂತೆ ರಾಜ್ಯದಲ್ಲಿ ಓಮಿಕ್ರಾನ್ ರೂಪಾಂತರಿ ತನ್ನ ಕದಂಬಬಾಹು ಚಾಚುತ್ತಿದ್ದು ಮಂಗಳೂರಿನ ಶಿಕ್ಷಣ ಸಂಸ್ಧೆಯೊಂದರಲ್ಲಿ ಇಂದು ಒಂದೇ ದಿನ ಐವರಿಗೆ ಓಮಿಕ್ರಾನ್ ವಕ್ಕರಿಸಿದೆ.

ಈ ಬಾರಿ ಕೂಡ ಬೆಂಗಳೂರಲ್ಲಿ ಕ್ರಿಸ್ ಮಸ್, ನ್ಯೂ ಇಯರ್ ಪಾರ್ಟಿಗೆ ಕೊಕ್?: ಓಮಿಕ್ರಾನ್ ತಡೆಗೆ ಬಿಬಿಎಂಪಿ ಗಂಭೀರ ಚಿಂತನೆ
ರಾಜ್ಯ ಸೇರಿದಂತೆ ದೇಶದಲ್ಲಿ ಕೋವಿಡ್ -19 ಮತ್ತು ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿವೆ. ಈ ಹೊತ್ತಿನಲ್ಲಿ ವರ್ಷಾಂತ್ಯ ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆಗೆ ದಿನ ಹತ್ತಿರ ಬರುತ್ತಿದ್ದು ಈ ಬಾರಿ ಕೂಡ ನಿರ್ಬಂಧ ಹೇರಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ.

