Nipah Virus

ಕೇರಳದ ದುರಂತ ನಾಯಕಿಗೆ ಸರ್ಕಾರ, ಸಾರ್ವಜನಿಕರಿಂದ ನೆರವಿನ ಮಹಾಪೂರ!
ಮಾರಕ ನಿಪಾಹ್ ವೈರಾಣು ಸೋಂಕು ಪೀಡಿತ ರೋಗಿಗೆ ಚಿಕಿತ್ಸೆ ನೀಡುತ್ತಲೇ ಅದೇ ವೈರಾಣು ಸೋಂಕಿಗೆ ತುತ್ತಾಗಿ ಬಲಿಯಾದ ಕೇರಳದ ದುರಂತ ನಾಯಕಿ, ನರ್ಸ್ ಲಿನಿ ಕುಟುಂಬಕ್ಕೆ ಇದೀಗ ನೆರವಿನ ಮಹಾಪೂರವೇ ಹರಿದುಬರುತ್ತಿದೆ.

ಬಾವಲಿ ಹಾಗೂ ಜಾನುವಾರುಗಳಿಂದ ನಿಫಾ ಹರಡಲ್ಲ: ಕೇರಳ ಪಶುಸಂಗೋಪನೆ ಇಲಾಖೆ
ಕೇರಳದ ಪೆರಾಂಬ್ರಾದಲ್ಲಿ ಬಾವಲಿಗಳು ಹಾಗೂ ಇತರೆ ಜಾನುವಾರುಗಳಿಂದ ಸಂಗ್ರಹಿಸಲಾದ 21 ದೈಹಿಕ ದ್ರವ, ರಕ್ತ ಮಾದರಿಗಳಲ್ಲಿ ಪ್ರಾಣಾಂತಿಕ ನಿಫಾ ವೈರಾಣು.......
001.jpg)
ಹೈದರಾಬಾದ್: ಇಬ್ಬರು ಶಂಕಿತ ನಿಫಾ ವೈರಾಣು ಸೋಂಕಿತರು ಆಸ್ಪತ್ರೆಗೆ ದಾಕಲು
ಶಂಕಿತ ನಿಪಾ ವೈರಸ್ ಸೋಂಕು ಜ್ವರದಿಂದ ಬಳಲುತ್ತಿರುವ ಇಬ್ಬರನ್ನು ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳೂರಿನಲ್ಲಿ ನಿಪಾ ವೈರಸ್ ಪತ್ತೆಯಾಗಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ:
ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಶಂಕಿತ ನಿಫಾ ಸೋಂಕಿತರಿಬ್ಬರ ಗಂಟಲು ದ್ರವ ಹಾಗೂ ರಕ್ತದ ಮಾದರಿಗಳಿಗಳಲ್ಲಿ ನಿಫಾ ವೈರಾಣು ಪತ್ತೆಯಾಗಿಲ್ಲ. ರಕ್ತ ಪರೀಕ್ಷೆ ವರದಿಯಲ್ಲಿ....

ನಿಪ್ಹಾ ವೈರಾಣು ಸಾಂಕ್ರಾಮಿಕವಲ್ಲ- ಕೇಂದ್ರ ಸರ್ಕಾರ ಹೇಳಿಕೆ
ಕೇರಳದಲ್ಲಿ 11 ಜನರನ್ನು ಬಲಿಪಡೆದಿರುವ ನಿಪ್ಹಾ ವೈರಾಣು ಸಾಂಕ್ರಾಮಿಕ ರೋಗವಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಹೇಳಿದ್ದಾರೆ.

ಕೇರಳ: ನಿಪ್ಹಾ ವೈರಸ್'ಗೆ ಮತ್ತೊಂದು ಬಲಿ; ಸಾವಿನ ಸಂಖ್ಯೆ 11ಕ್ಕೆ ಏರಿಕೆ
ಕೇರಳ ರಾಜ್ಯದಲ್ಲಿ ನಿಪ್ಹಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಕೋಝಿಕೋಡ್'ನ ಸೋಪ್ಪಿಕ್ಕಡಾ ಹಳ್ಳಿಯಲ್ಲಿ ಮತ್ತೊಬ್ಬರು ನಿಪ್ಹಾ ವೈರಸ್'ಗೆ ಬಲಿಯಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ...

ನಿಫಾಹ್ ವೈರಾಣು : ಕೇರಳದ ನೆರೆಹೊರೆಯ ಜಿಲ್ಲೆಗಳಲ್ಲಿ ಕೇಂದ್ರೀಯ ತಂಡದಿಂದ ಹೈ ಆಲರ್ಟ್ ಘೋಷಣೆ
ಕೇರಳದಲ್ಲಿ ನಿಫಾಹ್ ವೈರಾಣು 11 ಮಂದಿಯನ್ನು ಬಲಿ ಪಡೆದಿರುವ ಬೆನ್ನಲ್ಲೇ ನೆರೆಹೊರೆಯ ಜಿಲ್ಲೆಗಳಾದ ಕೋಝಿಕೊಡು ಹಾಗೂ ಮಲ್ಲಪುರಂನಲ್ಲಿ ಕೇಂದ್ರೀಯ ಆರೋಗ್ಯ ಸಚಿವಾಲಯದ ತಂಡಗಳು ಹೈ ಆಲರ್ಟ್ ಘೋಷಿಸಿವೆ.

ನಿಫಾಹ್ ವೈರಾಣು : ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ - ಜೆ. ಪಿ. ನಡ್ಡಾ
ಕೇರಳದಲ್ಲಿ ನಿಫಾಹ್ ವೈರಾಣು ಸೋಂಕುವಿನಿಂದಾಗಿ 10 ಮಂದಿ ಸಾವನ್ನಪ್ಪಿದ್ದು, ಇದರ ನಿಯಂತ್ರಣಕ್ಕಾಗಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನರು ವದಂತಿಗಳಿಗೆ ಕಿವಿಗೊಡದಂತೆ ಕೇಂದ್ರ ಆರೋಗ್ಯ ಸಚಿವ ಜೆ. ಪಿ. ನಡ್ಡಾ ಮನವಿ ಮಾಡಿಕೊಂಡಿದ್ದಾರೆ.

'ನಿಪಾಹ್' ಮಾರಿಗೆ ನರ್ಸ್ ಬಲಿ, ಕುಟುಂಬಸ್ಥರ ಆಗಮನಕ್ಕೂ ಕಾಯದೇ ವೈದ್ಯರೇ ಅಂತ್ಯಕ್ರಿಯೆ ಮಾಡಿದ್ದೇಕೆ?
ಕೇರಳದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ನಿಫಾಹ್ ವೈರಾಣು ಸೊಂಕಿಗೆ ತುತ್ತಾಗಿ ಬಲಿಯಾಗಿದ್ದ ನರ್ಸ್ ಲಿನಿ ಅವರನ್ನು ಅವರ ಪೋಷಕರ ಆಗಮನಕ್ಕೂ ಕಾಯದೇ ವೈದ್ಯರೇ ಅಂತ್ಯಕ್ರಿಯೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

