ಹೈದರಾಬಾದ್: ಇಬ್ಬರು ಶಂಕಿತ ನಿಫಾ ವೈರಾಣು ಸೋಂಕಿತರು ಆಸ್ಪತ್ರೆಗೆ ದಾಕಲು
ಶಂಕಿತ ನಿಪಾ ವೈರಸ್ ಸೋಂಕು ಜ್ವರದಿಂದ ಬಳಲುತ್ತಿರುವ ಇಬ್ಬರನ್ನು ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ.
001.jpg?w=1200&q=68&auto=format,compress)
Published On :
ಹೈದರಾಬಾದ್: ಶಂಕಿತ ನಿಪಾ ವೈರಸ್ ಸೋಂಕು ಜ್ವರದಿಂದ ಬಳಲುತ್ತಿರುವ ಇಬ್ಬರನ್ನು ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಶಂಕಿತ ರೋಗಿಗಳೂ ಸಹ ಸುಮಾರು 25 ವರ್ಷ ವಯೋಮಾನದವರಾಗಿದ್ದು ಅವರಲ್ಲಿ ಒಬ್ಬರು ಇತ್ತೀಚೆಗೆ ಕೇರಳ ಪ್ರವಾಸ ಕೈಗೊಂಡಿದ್ದರು.
ಇಬ್ಬರೂ ರೋಗಿಗಳನ್ನು ಪ್ರತ್ಯೇಕವಾಗಿರಿಸಲಾಗಿದೆ.ರೋಗಿಗಳ ಗಂಟಲ ದ್ರವ ಹಾಗೂ ರಕ್ತದ ಮಾದರಿಗಳನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) -ಪುಣೆಗೆ ರವಾನಿಸಲಾಗಿದೆ.
ಸಾರ್ವಜನಿಕರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದಿರುವ ತೆಲಂಗಾಣ ವೈದ್ಯಕೀಯ ಶಿಕ್ಷಣ ನಿರ್ದೇಶಕ ಡಾ. ಕೆ. ರಮೇಶ್ ರೆಡ್ಡಿ ಯಾವುದಕ್ಕೂ ಮುನ್ನೆಚ್ಚರಿಕೆ ಕ್ರಮವಾಗಿ ರೋಗಿಗಳ ರಕ್ತದ ಮಾದರಿ ಪಡೆದುಕೊಂಡಿದ್ದು ನಿಪಾ ವೈರಾಣು ಜ್ವರ ಹಾಗೂ ಹಂದಿ ಜ್ವರ ಪರೀಕ್ಷೆ ಗಳನ್ನು ನಡೆಸಲಾಗುತ್ತದೆ ಎಂದರು.
ಶೀತ, ಕೆಮು, ಕಫ ಸೇರಿ ತೀವ್ರ ಉಸಿರಾಟ ತೊಂದರೆ, ಜ್ವರ ಕಾನೀಸಿಕೊಳ್ಳುವದು ನಿಪಾ ವೈರಾಣು ರೋಗದ ಲಕ್ಷಣವಾಗಿದೆ. ಈ ನಿಪಾ ವೈರಾಣು ಸೋಂಕು ಭಾನುವಾರದಂದು ಕೇರಳದಲ್ಲಿ ಪತ್ತೆಯಾಗಿತ್ತು.
"ಇಬ್ಬರು ಶಂಕಿತ ರೋಗಿಗಳಲ್ಲಿ ಓರ್ವ ವ್ಯಕ್ತಿ ಕೇರಳ ಪ್ರವಾಸ ಕೈಗೊಂಡಿದ್ದ. ಆದರೆ ಕೇರಳದಲ್ಲಿರುವ ರಾಷ್ಟ್ರೀಯ ನಿಯಂತ್ರಣ ಕೇಂದ್ರ ಅಧಿಕಾರಿಗಳ ಪ್ರಕಾರ ನಿಪಾ ಸೋಂಕು ಪತ್ತೆಯಾದ ಸ್ಥಳದಿಂದ ನೂರಾರು ಕಿಲೋಮೀಟರ್ ದೂರದಲ್ಲಿರುವ ಊರಿಗೆ ಆತ ಭೇಟಿ ನೀಡಿದ್ದ. ಆದ ಕಾರಣ ಅವನಿಗೆ ರೋಗ ತಗುಲಿರುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ. ಎಲ್ಲಕ್ಕೂ ಮುಖ್ಯವಾಗಿ ನಾವು ರೋಗಿಗಳ ದೇಹದಲ್ಲಿನ ದ್ರವ, ರಕ್ತವನ್ನು ಪುಣೆ ಎನ್ಐವಿಗೆ ರವಾನಿಸಿದ್ದೇವೆ.ಅಲ್ಲಿನ ವರದಿ ಬಂದ ಬಳಿಕ ಯಾವುದೂ ಸ್ಪಷ್ಟವಾಗಲಿದೆ" ರಮೇಶ್ ರೆಡ್ಡಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


001.jpg?w=64&q=30&auto=format,compress)