ನಿಫಾಹ್ ವೈರಾಣು : ಕೇರಳದ ನೆರೆಹೊರೆಯ ಜಿಲ್ಲೆಗಳಲ್ಲಿ ಕೇಂದ್ರೀಯ ತಂಡದಿಂದ ಹೈ ಆಲರ್ಟ್ ಘೋಷಣೆ
ಕೇರಳದಲ್ಲಿ ನಿಫಾಹ್ ವೈರಾಣು 11 ಮಂದಿಯನ್ನು ಬಲಿ ಪಡೆದಿರುವ ಬೆನ್ನಲ್ಲೇ ನೆರೆಹೊರೆಯ ಜಿಲ್ಲೆಗಳಾದ ಕೋಝಿಕೊಡು ಹಾಗೂ ಮಲ್ಲಪುರಂನಲ್ಲಿ ಕೇಂದ್ರೀಯ ಆರೋಗ್ಯ ಸಚಿವಾಲಯದ ತಂಡಗಳು ಹೈ ಆಲರ್ಟ್ ಘೋಷಿಸಿವೆ.

ಕೋಝಿಕೊಡು : ಕೇರಳದಲ್ಲಿ ನಿಫಾಹ್ ವೈರಾಣು 11 ಮಂದಿಯನ್ನು ಬಲಿ ಪಡೆದಿರುವ ಬೆನ್ನಲ್ಲೇ ನೆರೆಹೊರೆಯ ಜಿಲ್ಲೆಗಳಾದ ಕೋಝಿಕೊಡು ಹಾಗೂ ಮಲ್ಲಪುರಂನಲ್ಲಿ ಕೇಂದ್ರೀಯ ಆರೋಗ್ಯ ಸಚಿವಾಲಯದ ತಂಡಗಳು ಹೈ ಆಲರ್ಟ್ ಘೋಷಿಸಿವೆ.
ಶಂಕಿತ ರೋಗಿಗಳು ಇಂತಹ ಜಿಲ್ಲೆಗಳಲ್ಲಿ ಪ್ರವೇಶಿಸುವ ಸಂದರ್ಭದಲ್ಲಿ ಸ್ಕ್ರೀನಿಂಗ್ ಸೌಲಭ್ಯ ಒದಗಿಸುವಂತೆ ಕೇಂದ್ರೀಯ ತಂಡಗಳು ಸಲಹೆ ನೀಡಿವೆ.
ಆರೋಗ್ಯ ಸಚಿವಾಲಯ ಪ್ರಕಾರ ನಿಫಾಹ್ ವೈರಾಣುಯಿಂದಾಗಿ ಕೋಝಿಕೊಡುವಿನಲ್ಲಿ 8 ಹಾಗೂ ಮಲ್ಲಪುರಂ ಜಿಲ್ಲೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇದಲ್ಲದೇ, 9 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಕೋಝಿಕೊಡುವಿನ ಅನೇಕ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ.
ಸೂಕ್ತ ತುರ್ತು ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳುವಂತೆಯೂ ಸಲಹೆ ನೀಡಲಾಗಿದೆ. ಜಿಲ್ಲಾಡಳಿತ ಕೇಂದ್ರೀಯ ತಂಡದ ನೆರವು ಪಡೆದು ವಿಶೇಷ ಕಾರ್ಯ ಪಡೆ ಸ್ಥಾಪನೆ ಮಾಡಬೇಕು, ಸೂಕ್ತ ನಿರ್ವಹಣಾ ಕಾರ್ಯ ಕೈಗೊಳ್ಳುವಂತೆಯೂ ಸೂಚಿಸಲಾಗಿದೆ.
ಬಾವಲಿಗಳಿಂದ ನಿಫಾಹ್ ವೈರಾಣು ಹರಡಲಿದ್ದು, ಪ್ರಾಣಿ ಹಾಗೂ ಮನುಷ್ಯರ ಸಾವಿಗೆ ಕಾರಣವಾಗುತ್ತಿದೆ. ಕೇಂದ್ರಿಯ ತಂಡಗಳು ಮೊಲ ಹಾಗೂ ಗಿಳಿಯ ರಕ್ತದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


