Lucknow

ಅಭಿವೃದ್ಧಿಗಾಗಿ ಜನಸಂಖ್ಯಾ ನಿಯಂತ್ರಣದ ಅಗತ್ಯವಿದೆ- ಯೋಗಿ ಆದಿತ್ಯನಾಥ್
ಜನಸಂಖ್ಯೆ ಹೆಚ್ಚಳ ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ಹೇಳಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅದರ ನಿಯಂತ್ರಣಕ್ಕೆ ಹೆಚ್ಚಿನ ಪ್ರಯತ್ನದ ಅಗತ್ಯವಿದೆ ಎಂದಿದ್ದಾರೆ.

ಲಖನೌ: ಇಬ್ಬರು ಶಂಕಿತ ಉಗ್ರರ ಬಂಧನ
ಉತ್ತರ ಪ್ರದೇಶ ರಾಜಧಾನಿ ಲಖನೌನ ಕಾಕೊರಿ ಪ್ರದೇಶದಲ್ಲಿ ಇಬ್ಬರು ಶಂಕಿತ ಉಗ್ರರನ್ನು ಭಯೋತ್ಪಾದಕ ನಿಗ್ರಹ ಪೊಲೀಸರು ಭಾನುವಾರ ಬಂಧಿಸಿರುವುದಾಗಿ ಪೊಲೀಸರು ಮೂಲಗಳು ತಿಳಿಸಿವೆ. ಬಂಧಿತ ಆರೋಪಿಗಳಿಂದ ಅಪಾರ ಪ್ರಮಾಣದ ಸ್ಫೋಟಕ ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ.

ಯೋಗಿಯನ್ನು ಅಭಿನಂದಿಸಿದ ಸೈನಾ ನೆಹ್ವಾಲ್; 'ಸರ್ಕಾರಿ ಶಟ್ಲರ್' ಎಂದ ಆರ್ ಜೆಡಿ ಮುಖ್ಯಸ್ಥ ಟೀಕೆ
ಜಿಲ್ಲಾ ಪಂಚಾಯತ್ ಮುಖ್ಯಸ್ಥ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಅಭಿನಂದಿಸಿದ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರನ್ನು ಸರ್ಕಾರಿ ಶಟ್ಲರ್ ಎಂದು ಆರ್ ಜೆಡಿ ಅಧ್ಯಕ್ಷ ಜಯಂತ್ ಚೌದರಿ ಕರೆದಿದ್ದಾರೆ.

ಉತ್ತರ ಪ್ರದೇಶ ಜಿಲ್ಲಾ ಪಂಚಾಯತ್ ಚುನಾವಣೆ: 75 ಜೆಲ್ಲೆಗಳ ಪೈಕಿ 67ರಲ್ಲಿ ಬಿಜೆಪಿಗೆ ಜಯ, ಕೇವಲ 6ರಲ್ಲಿ ಎಸ್ಪಿ ಜಯ, ತೀವ್ರ ಮುಖಭಂಗ
ಉತ್ತರ ಪ್ರದೇಶ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಭಾರಿ ಜಯ ಸಾಧಿಸಿದ್ದು, ಸಮಾಜವಾದಿ ಪಕ್ಷ ತೀವ್ರ ಮುಖಭಂಗಕ್ಕೀಡಾಗಿದೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಮಣಿಸಲು ಹೊಸ ಸೂತ್ರ; 5 ವರ್ಷದಲ್ಲಿ 5 ಸಿಎಂ 20 ಉಪ ಮುಖ್ಯಮಂತ್ರಿ!
ಉತ್ತರ ಪ್ರದೇಶದ ಆಡಳಿತಾರೂಢ ಬಿಜೆಪಿಯನ್ನು ಶತಾಯಗತಾಯ ಮಣಿಸಲೇಬೇಕು ಎಂದು ಸಜ್ಜಾಗಿರುವ ಪ್ರತಿಪಕ್ಷಗಳು ಇದೀಗ ಹೊಸ ಮೈತ್ರಿಕೂಟವನ್ನೇ ರಚನೆ ಮಾಡಿಕೊಂಡಿದ್ದು, 5 ವರ್ಷಗಳಲ್ಲಿ 5 ಸಿಎಂ 20 ಉಪ ಮುಖ್ಯಮಂತ್ರಿಗಳ ಸೂತ್ರವನ್ನು ಸಿದ್ಧಪಡಿಸಿವೆ.

ಯುಪಿ: ಮಾಸ್ಕ್ ಧರಿಸದಿದ್ದಕ್ಕೆ ಮಾತಿನ ಚಕಮಕಿ, ಬ್ಯಾಂಕಿನ ಒಳಗಡೆ ಗುಂಡು ಹಾರಿಸಿದ ಭದ್ರತಾ ಸಿಬ್ಬಂದಿ!
ಮಾಸ್ಕ್ ಧರಿಸದಿದ್ದಕ್ಕೆ ಮಾತಿನ ಚಕಮಕಿ ನಡೆದ ನಂತರ ಖಾಸಗಿ ಭದ್ರತಾ ಸಿಬ್ಬಂದಿಯೊಬ್ಬರು, ಗ್ರಾಹಕರೊಬ್ಬರ ಮೇಲೆ ಬ್ಯಾಂಕಿನ ಒಳಗಡೆಯೇ ಗುಂಡು ಹಾರಿಸಿ ಗಾಯಗೊಳಿಸಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

ಉತ್ತರ ಪ್ರದೇಶದಲ್ಲಿ ವಾರಾಂತ್ಯ ಕರ್ಫ್ಯೂ ಇನ್ನೂ ಎರಡು ದಿನ ವಿಸ್ತರಣೆ
ಉತ್ತರ ಪ್ರದೇಶದಲ್ಲಿ ವಾರಾಂತ್ಯ ಕರ್ಫ್ಯೂ ಇನ್ನೂ ಎರಡು ದಿನ ವಿಸ್ತರಣೆಯಾಗಿದೆ. ಸದ್ಯ ಇದು ಗುರುವಾರ ಬೆಳಗ್ಗೆ 7 ಗಂಟೆಗೆ ಕೊನೆಗೊಳ್ಳಲಿದೆ.

ಕೋವಿಡ್-19: ಅಯೋಧ್ಯೆ, ವಾರಣಾಸಿಗೆ ಭೇಟಿ ನೀಡುವ ಭಕ್ತರಿಗೆ ಆರ್ ಟಿ- ಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ
ರಾಮ ನವಮಿಯಂದು ರಾಮ ಜನ್ಮಭೂಮಿಗೆ ಭೇಟಿ ನೀಡಲು ಬಯಸುವ ಭಕ್ತಾಧಿಗಳಿಗೆ ಆರ್ ಟಿ- ಪಿಸಿಆರ್ ನೆಗೆಟಿವ್ ವರದಿಯನ್ನು ಅಯೋಧ್ಯೆ ಜಿಲ್ಲಾಡಳಿತ ಕಡ್ಡಾಯಗೊಳಿಸಿದೆ.

ಕೋವಿಡ್-19 ಸಾಂಕ್ರಾಮಿಕ ನಿರ್ವಹಣೆ: ಯೋಗಿ ಸರ್ಕಾರದ ವಿರುದ್ಧ ಸಚಿವರಿಂದಲೇ ಅಸಮಾಧಾನ, ಪತ್ರ ವೈರಲ್
ಉತ್ತರ ಪ್ರದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ನಿರ್ವಹಣೆ ಕುರಿತಂತೆ ಆ ರಾಜ್ಯದ ಸಚಿವರೇ ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ಬೆಳಕಿಗೆ ಬಂದಿದೆ.

