Loksabha Election 2019

ನಮೋ ಟಿವಿಯಲ್ಲಿ ರಾಜಕೀಯ ಅಂಶಗಳ ಪ್ರಸಾರಕ್ಕೂ ನಿರ್ಬಂಧ ಹೇರಿದ ಚುನಾವಣಾ ಆಯೋಗ!
ಪ್ರಧಾನಿ ನರೇಂದ್ರ ಮೋದಿ ಬೆಂಬಲಿತ ನಮೋ ಟಿವಿಗೆ ಚುನಾವಣಾ ಆಯೋಗ ಮತ್ತೊಂದು ಶಾಕ್ ನೀಡಿದ್ದು, ಈ ಹಿಂದೆ ಪಿಎಂ ನರೇಂದ್ರ ಮೋದಿ ಚಿತ್ರ ಪ್ರಸಾರಕ್ಕೆ ತಡೆ ನೀಡಿದ್ದ ಆಯೋಗ ಇದೀಗ ನಮೋ ಟಿವಿಯಲ್ಲಿ ರಾಜಕೀಯ ಕುರಿತ ಅಂಶಗಳ ಪ್ರಸಾರಕ್ಕೂ ನಿರ್ಬಂಧ ಹೇರಿದೆ.

ತೇಜಸ್ವಿ ಸೂರ್ಯ ಸುದ್ದಿ ಪ್ರಕಟಿಸದಂತೆ ನಿರ್ಬಂಧ ಪ್ರಶ್ನಿಸಿ ಪಿಐಎಲ್; ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಯಾವುದೇ ಮಾನಹಾನಿಕಾರ ಸುದ್ದಿಗಳನ್ನು ಪ್ರಕಟಿಸದಂತೆ ಸಿವಿಲ್ ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ.

ಗಡಿಯಿಂದಲೇ ಹಕ್ಕು ಚಲಾಯಿಸುವ ಮೂಲಕ ಇಡೀ ದೇಶಕ್ಕೆ ಮಾದರಿಯಾದ ಯೋಧರು!
ಹಾಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಈ ಬಾರಿ ಭಾರತೀಯ ಸೇನೆ ಸೈನಿಕರು ಗಡಿಯಿಂದಲೇ ತಮ್ಮ ತಮ್ಮ ಹಕ್ಕು ಚಲಾಯಿಸುವ ಮೂಲಕ ಗಮನ ಸೆಳೆದರು.

'ಎಲ್ಲಿದ್ದೀಯಪ್ಪಾ ಬಾಲಕೃಷ್ಣನ್?' ಐಟಿ ಡಿಜಿ ವಿರುದ್ಧ ಎಚ್ ಡಿ ಕುಮಾರಸ್ವಾಮಿ ತೀವ್ರ ವಾಗ್ದಾಳಿ
ಐಟಿ ಇಲಾಖೆ ಮುಂದೆ ಕಾಂಗ್ರೆಸ್-ಜೆಡಿಎಸ್ ನಾಯಕರು ನಡೆಸಿದ್ದ ಪ್ರತಿಭಟನೆ ಕುರಿತಂತೆ ಚಾರ್ಜ್ ಶೀಟ್ ದಾಖಲಿಸಿರುವ ಐಟಿ ಇಲಾಖೆ ನಡೆಯನ್ನು ಸಿಎಂ ಎಚ್ ಡಿಕುಮಾರಸ್ವಾಮಿ ತೀವ್ರ ಕಿಡಿಕಾರಿದ್ದಾರೆ.

ತಾರಕಕ್ಕೇರಿದ ಮಂಡ್ಯ 'ಕೈ' ಭಿನ್ನಮತ, ಸುಮಲತಾ ಪರ ಪ್ರಚಾರ ಆರೋಪ 7 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಉಚ್ಛಾಟನೆ
ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡಿದ ಆರೋಪದ ಮೇರೆಗೆ ಜಿಲ್ಲೆಯ 7 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.

ಅನುಚಿತ ವರ್ತನೆ: ಯುವಕನಿಗೆ ಕಪಾಳ ಮೋಕ್ಷ ಮಾಡಿದ ಖುಷ್ಬೂ!
ಕಾಂಗ್ರೆಸ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ವೇಳೆ ಅನುಚಿತ ವರ್ತನೆ ತೋರಿದ ಯುವಕನಿಗೆ ಖ್ಯಾತ ನಟಿ ಹಾಗೂ ಎಐಸಿಸಿ ವಕ್ತಾರೆ ಖುಷ್ಬೂ ಅವರು ಕಪಾಳ ಮೋಕ್ಷ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

'ಮಾತನಾಡಿದ್ರೆ ಸಿನಿಮಾದವರು ಅಂತಾರೆ.. ಅವರೇನು ಸತ್ಯ ಹರಿಶ್ಚಂದ್ರನ ತುಂಡುಗಳಾ?'
ಸಕ್ಕರೆ ನಾಡು ಮಂಡ್ಯದಲ್ಲಿ ಲೋಕಸಭಾ ಚುನಾವಣೆ ಸಮರ ತಾರಕ್ಕೇರಿದ್ದು, ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡುತ್ತಿರುವ ದರ್ಶನ್ ಮತ್ತು ಯಶ್ ವಿರುದ್ದ ಜೆಡಿಎಸ್ ನಾಯಕರ ವಾಗ್ದಾಳಿ ಮುಂದುವರೆದಿರುವಂತೆಯೇ ಇತ್ತ ಯಶ್ ಕೂಡ ತಿರುಗೇಟು ನೀಡಿದ್ದಾರೆ.

ಸೋಷಿಯಲ್ ಮೀಡಿಯಾ ಟ್ರೋಲ್ ಬಳಿಕ, ವೈರಲ್ ಆಗ್ತಿದೆ 'ನಿಖಿಲ್ ಎಲ್ಲಿದ್ದೀಯಪ್ಪ' 'ಡ್ಯಾನ್ಸಿಂಗ್ ಟ್ರೋಲ್'
ನಿಖಿಲ್ ಎಲ್ಲಿದ್ದೀಯಪ್ಪ ಎಂಬ ಡ್ಯಾನ್ಸಿಂಗ್ ಟ್ರೋಲ್ ಕೂಡ ಶುರುವಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ವರ್ಗಾವಣೆ, ನೂತನ ಡಿಸಿಯಾಗಿ ಪಿಸಿ ಜಾಫರ್ ನೇಮಕ
ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ಅವರನ್ನು ವರ್ಗಾವಣೆ ಮಾಡಿ ಚುನಾವಣಾ ಆಯೋಗ ಆದೇಶ ಹೊರಡಿಸಿದ್ದು, ಇವರ ಸ್ಥಾನದಲ್ಲಿ ಪಿ.ಸಿ. ಜಾಫರ್ ಅವರನ್ನು ನೇಮಿಸಲಾಗಿದೆ ಎಂದು ತಿಳಿದುಬಂದಿದೆ.

