lockdown

ಕೊರೋನಾ ಲಾಕ್ ಡೌನ್: ಮನೆಯಲ್ಲಿ ಯೋಗ, ಧ್ಯಾನ ಮಾಡಿ, ಫಿಟ್ ಆಗಿ ಇರಿ, ಬಿಜೆಪಿಯಿಂದ ವಿಡಿಯೊ ಬಿಡುಗಡೆ
ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬುವುದನ್ನು ತಡೆಯಲು ಕೇಂದ್ರ ಸರ್ಕಾರ 21 ದಿನಗಳ ಭಾರತ ಲಾಕ್ ಡೌನ್ ನ್ನು ಘೋಷಿಸಿ 6 ದಿನಗಳು ಕಳೆದಿವೆ.

21 ದಿನಗಳ ಭಾರತ ಲಾಕ್ ಡೌನ್ ವಿಸ್ತರಿಸುವ ಯಾವುದೇ ಚಿಂತನೆಗಳಿಲ್ಲ: ಸಂಪುಟ ಕಾರ್ಯದರ್ಶಿ
21 ದಿನಗಳ ಲಾಕ್ ಡೌನ್ ನ್ನು ವಿಸ್ತರಿಸುವ ಯಾವುದೇ ಚಿಂತನೆಗಳಿಲ್ಲ ಎಂದು ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬ ಹೇಳಿದ್ದಾರೆ.

ಕೋವಿಡ್-19: ನೇಪಾಳದಲ್ಲಿ ಹೆಚ್ಚಾದ ಕೊರೋನಾ ಪಾಸಿಟಿವ್, ಏ. 7ರವರೆಗೂ ಲಾಕ್ ಡೌನ್ ವಿಸ್ತರಣೆ
ಕೊರೋನಾವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ನೇಪಾಳ ಸರ್ಕಾರ ಈಗಾಗಲೇ ಜಾರಿಗೊಳಿಸಿರುವ ಲಾಕ್ ಡೌನ್ ನ್ನು ಒಂದು ವಾರಗಳ ಕಾಲ ವಿಸ್ತರಿಸಿದೆ. ಕಳೆದ ವಾರದಿಂದ ಜಾರಿಗೊಳಿಸಿರುವ ಲಾಕ್ ಡೌನ್ ಏಪ್ರಿಲ್ 7ರವರೆಗೂ ಮುಂದುವರೆಯಲಿದೆ ಎಂದು ನೇಪಾಳ ಸರ್ಕಾರ ತಿಳಿಸಿದೆ.

ಪಶ್ಚಿಮ ಬಂಗಾಳದಲ್ಲಿ ಕೊರೋನಾ ಸೋಂಕಿಗೆ ಮತ್ತೊಬ್ಬರು ಬಲಿ, ಭಾರತದಲ್ಲಿ ಮೃತರ ಸಂಖ್ಯೆ 29ಕ್ಕೆ ಏರಿಕೆ
ಪಶ್ಚಿಮ ಬಂಗಾಳದಲ್ಲಿ ಮತ್ತೊಬ್ಬ ವ್ಯಕ್ತಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೋನಾ ಮಾರಿಗೆ ಬಲಿಯಾದವರ ಸಂಖ್ಯೆ ಸೋಮವಾರ 29ಕ್ಕೇರಿದೆ. ಪಶ್ಚಿಮ ಬಂಗಾಳದಲ್ಲಿ ಇದು ಎರಡನೇ ಮೃತ ಪ್ರಕರಣವಾಗಿದೆ.

ಕೋವಿಡ್-19: ಸಚಿವರ ಸಮಿತಿಯಿಂದ ದೇಶದಲ್ಲಿನ ಪರಿಸ್ಥಿತಿ ಪರಾಮರ್ಶೆ, ವಲಸೆ ಕಾರ್ಮಿಕರ ಬಗ್ಗೆ ಚರ್ಚೆ
ಕೊರೋನಾ ಸಾಂಕ್ರಾಮಿಕ ಕಾಯಿಲೆಗೆ ತುತ್ತಾದವರಿಗೆ ಚಿಕಿತ್ಸೆ ಸೇರಿದಂತೆ ದೇಶಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಅತ್ಯಾವಶ್ಯಕ ವಸ್ತುಗಳ ಪೂರೈಕೆ ಸೇರಿದಂತೆ ಮತ್ತಿತರ ಪರಿಸ್ಥಿತಿ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿನ ಸಚಿವರ ಸಮಿತಿಯಿಂದ ಇಂದು ಪರಾಮರ್ಶೆ ನಡೆಸಲಾಗಿದೆ

ದಯಮಾಡಿ ನೀವೆಲ್ಲಿದ್ದೀರೋ ಅಲ್ಲೇ ಇರಿ.. ನಾವೇ ಬಾಡಿಗೆ ಕಟ್ಟುತ್ತೇವೆ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್
ಲಾಕ್ ಡೌನ್ ನಡುವೆಯೂ ತಮ್ಮ ತಮ್ಮ ಊರುಗಳಿಗೆ ತೆರಳಲು ಪರದಾಡುತ್ತಿರುವ ಕಾರ್ಮಿಕರನ್ನು ತಡೆಯುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ಹರಸಾಹಸ ಪಡುತ್ತಿದ್ದು, ಕಾರ್ಮಿಕರು ಉಳಿದುಕೊಂಡಿರುವ ಮನೆಗಳ ಬಾಡಿಗೆಯನ್ನು ಸರ್ಕಾರವೇ ಭರಿಸುತ್ತದೆ. ದಯಮಾಡಿ ನೀವು ಎಲ್ಲಿದ್ದೀರೋ ಅಲ್ಲೇ ಇರಿ ಎಂದು ಮನವಿ ಮಾಡಿಕೊಂಡಿದೆ.

ಮಾನವೀಯತೆ: 6 ದಿನದಲ್ಲಿ ನಿರ್ಗತಿಕರಿಗೆ 3 ಸಾವಿರ ಆಹಾರ ಪೊಟ್ಟಣ ವಿತರಿಸಿದ ಬೆಂಗಳೂರಿಗ!
21 ದಿನಗಳ ಲಾಕ್ ಡೌನ್ ನಿಂದಾಗಿ ಭಾರತ ಅಕ್ಷರಶಃ ತತ್ತರಿಸಿದ್ದು ಅನ್ನ ಆಹಾರವಿಲ್ಲದೆ ಲಕ್ಷಾಂತರ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಲಾಕ್ ಡೌನ್ ಉಲ್ಲಂಘಿಸಿ ಹೊರಗೆ ಬಂದವರನ್ನು 14 ದಿನ ಕ್ವಾರಂಟೈನ್ನಲ್ಲಿಡಿ: ರಾಜ್ಯಗಳಿಗೆ ಕೇಂದ್ರ ಖಡಕ್ ಸೂಚನೆ
ಪ್ರಧಾನಿ ನರೇಂದ್ರ ಮೋದಿ ಅವರು ಕೈಮುಗಿದು ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲೇ ಇರುವಂತೆ ಮನವಿ ಮಾಡಿದರೂ ಕೇಳದೆ ಸುಖಾ ಸುಮ್ಮನೆ ಹೊರಗೆ ತಿರುಗುತ್ತಿರುವವರು ಇನ್ನು ಮುಂದೆ 14 ಕ್ವಾರಂಟೈನ್ನಲ್ಲಿರಬೇಕಾಗುತ್ತದೆ.

ಲಾಕ್ ಡೌನ್ ಪರಿಣಾಮ: ಇಂಧನ ಕೊರತೆ ವಿಷಯವಾಗಿ ಬಿಪಿಸಿಎಲ್ ಹೇಳಿದ್ದಿಷ್ಟು!
ಲಾಕ್ ಡೌನ್ ಪರಿಣಾಮ ಎಲ್ಲಾ ದಿನನಿತ್ಯ ಬಳಕೆಯ ಪದಾರ್ಥಗಳಿಗೂ ಬೇಡಿಕೆ ಹೆಚ್ಚುತ್ತಿದ್ದು, ಪೂರೈಕೆ ಸವಾಲಿನ ಸಂಗತಿಯಾಗಿದೆ.

