lockdown

ಕೊರೋನಾ ಮೊದಲು ಕಾಣಿಸಿಕೊಂಡಿದ್ದ ಚೀನಾದ ಹುಬೈ ಪ್ರಾಂತ್ಯ, ವುಹಾನ್ ನಲ್ಲಿ ಲಾಕ್ ಡೌನ್ ತೆರವು
ಮಾರಕ ಸಾಂಕ್ರಾಮಿಕ ರೋಗ ಕೊರೋನಾವೈರಸ್ ಮೊದಲು ಕಾಣಿಸಿಕೊಂಡಿದ್ದ ಹುಬೈ ಪ್ರಾಂತ್ಯದಲ್ಲಿ ಜಾರಿಗೊಳಿಸಲಾಗಿದ್ದ ಪ್ರಯಾಣ ಮೇಲಿನ ನಿರ್ಬಂಧವನ್ನು ಬುಧವಾರ ತೆರವುಗೊಳಿಸಲಾಗುವುದು ಎಂದು ಚೀನಾ ಹೇಳಿದೆ.

ಕರ್ನಾಟಕ ಲಾಕ್ ಡೌನ್: ಜಿಲ್ಲೆಗಳು ಸ್ತಬ್ಧ
ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಾ.31ರವರೆಗೆ ರಾಜ್ಯಾದ್ಯಂತ ಲಾಕ್ ಡೌನ್ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿರುವುದರಿಂದ ಇಂದು ಉಡುಪಿ ಜಿಲ್ಲೆ ಸ್ತಬ್ಧವಾಗಿದೆ.

ಜನತೆ ನಿಯಮ ಪಾಲಿಸುತ್ತಿಲ್ಲ- ಬಸವರಾಜ್ ಬೊಮ್ಮಾಯಿ
ಮಹಾಮಾರಿ ಕೊರೋನಾ ಸೋಂಕಿನಿಂದ ದೇಶಾದ್ಯಂತ 8 ಮಂದಿ ಮೃತಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 27ಕ್ಕೆ ಏರಿಕೆ ಆಗಿದೆ. ಆದಾಗ್ಯೂ, ಜನತೆ ನಿಯಮ ಪಾಲಿಸುತ್ತಿಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲಾಕ್'ಡೌನ್'ನನ್ನು ಜನರು ಗಂಭೀರವಾಗಿ ಪರಿಗಣಿಸುತ್ತಿಲ್ಲ: ಪ್ರಧಾನಿ ಮೋದಿ ಬೇಸರ
ಲಾಕ್'ಡೌನ್'ನನ್ನು ಜನರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಬೇಸರ ವ್ಯಕ್ತಪಡಿಸಿದ್ದಾರೆ.

ಧಾರವಾಡದಲ್ಲಿ ಮೊದಲ ಕೋವಿಡ್ -19 ಪಾಸಿಟಿವ್ ಪ್ರಕರಣ: 3 ಕಿ.ಮೀ ವ್ಯಾಪ್ತಿಯಲ್ಲಿ ಲಾಕ್ ಡೌನ್
ಧಾರವಾಡದಲ್ಲಿ ಮೊದಲ ಕೋವಿಡ್ -19 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ವಿದೇಶದಿಂದ ಆಗಮಿಸಿದ್ದ ಧಾರವಾಡದ 33 ವರ್ಷದ ವ್ಯಕ್ತಿಯಲ್ಲಿ ಈ ಸೋಂಕು ದೃಢಪಟ್ಟಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೋವಿಡ್-19: ದೇಶದಲ್ಲಿ 390 ಪಾಸಿಟಿವ್ , ದೆಹಲಿ, ಪಂಜಾಬ್, ತೆಲಂಗಾಣದಲ್ಲಿ ಸಂಪೂರ್ಣ ಲಾಕ್ ಡೌನ್
ಜಗತ್ತಿನಾದ್ಯಂತ ವ್ಯಾಪಕ ರೀತಿಯಲ್ಲಿ ಹಬ್ಬುತ್ತಿರುವ ಮಾರಕ ಕೋವಿಡ್-19 ಸಾಂಕ್ರಾಮಿಕ ಸೋಂಕಿನ ಪ್ರಕರಣಗಳು ದೇಶದಲ್ಲೂ ಹೆಚ್ಚಾಗುತ್ತಿದ್ದು, ಈವರೆಗೂ 390 ಜನರಲ್ಲಿ ಈ ಸೋಂಕು ದೃಢಪಟ್ಟಿದೆ. ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿಕೆ ಆಗಿದೆ.

ಕೊರೋನಾ: ರಾಜ್ಯದ 9 ಜಿಲ್ಲೆಗಳು ಈ ಮಾಸಾಂತ್ಯದವರೆಗೆ ಬಂದ್, ನಾಳೆಯೂ ಸಾರಿಗೆ ಸೇವೆ ಇಲ್ಲ
ರಾಜ್ಯದಲ್ಲಿ ಕೊರೋನಾ ವೈರಸ್ ನಿಗ್ರಹಿಸುವ ಉದ್ದೇಶದಿಂದ ಮತ್ತೊಂದು ಸುತ್ತಿನ ಕಠಿಣ ಕ್ರಮಗಳನ್ನು ಕೈಗೊಂಡಿರುವ ರಾಜ್ಯ ಸರಕಾರ ಕೋವಿಡ್ 19 ಸೋಂಕು ಕಂಡು ಬಂದಿರುವ 9 ಜಿಲ್ಲೆಗಳನ್ನು ಮಾಸಾಂತ್ಯದವರೆಗೆ ಬಂದ್ ಮಾಡುವ ತೀರ್ಮಾನ ತೆಗೆದುಕೊಂಡಿದೆ

ಕೊರೋನಾದಿಂದ 7 ಸಾವು: ಸೋಂಕು ಪೀಡಿತ 75 ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲು ಕೇಂದ್ರ ಸಲಹೆ
ಜಗತ್ತಿನಾದ್ಯಂತ ಮರಣಮೃದಂಗ ಬಾರಿಸುತ್ತಿರುವ ಕೊರೋನಾವೈರಸ್ ನಿಂದಾಗಿ ದೇಶದಲ್ಲಿ ಏಳು ಜನರು ಮೃತಪಟ್ಟಿರುವುದು ದೃಢಪಟ್ಟಿದೆ

ಕೊರೋನಾಗೆ ಇಡೀ ಇಟಲಿ ರಾಷ್ಟ್ರವೇ ಬಂದ್: ಮನೆಗಳಿಂದ ಹೊರಬರದಂತೆ ಪ್ರಧಾನಿ ಆದೇಶ
ಚೀನಾ ನಂತರ ಅತೀ ಹೆಚ್ಚು ಕೊರೋನಾ ವೈರಸ್ ಬಾಧೆಗೆ ಒಳಗಾಗಿರುವ ಇಟಲಿಯಲ್ಲಿ ವೈರಸ್ ತಡೆಯಲು ಅಲ್ಲಿನ ಸರ್ಕಾರ ಕಠಿಣ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ವೈರಸ್ ತಡೆಯುವ ಸಲುವಾಗಿ ಇಡೀ ರಾಷ್ಟ್ರವನ್ನೇ ಇದೀಗ ಬಂದ್ ಮಾಡಿಸಲಾಗಿದ್ದು, ಈ ರೀತಿಯ ಬೆಳವಣಿಗೆ ವಿಶ್ವದಲ್ಲಿಯೇ ಇದೇ ಮೊದಲು ಎಂದು ಹೇಳಲಾಗುತ್ತಿದೆ.

