lockdown

ಅಸಾಧಾರಣ ಸಮಯದಲ್ಲಿ ಅಸಾಧಾರಣ ಪರಿಹಾರಗಳ ಅಗತ್ಯವಿರುತ್ತದೆ:ಪ್ರಧಾನಿ ನರೇಂದ್ರ ಮೋದಿ
ಅಸಾಧಾರಣ ಸಮಯಗಳಲ್ಲಿ ಅಸಾಧಾರಣ ಪರಿಹಾರಗಳು ಬೇಕಾಗುತ್ತವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ 21 ದಿನಗಳ ಭಾರತ ಲಾಕ್ ಡೌನ್ ಉದ್ದೇಶಿಸಿ ಹೇಳಿದ್ದಾರೆ.

ಕೊರೋನಾ ಲಾಕ್ ಡೌನ್: ಮನೆಯ ಕೊಠಡಿಯನ್ನೇ ಕ್ರಿಕೆಟ್ ಸ್ಟೇಡಿಯಂ ಆಗಿ ಪರಿವರ್ತಿಸಿದ ಪಾಂಡ್ಯ ಸಹೋದರರು!
ಕೊರೋನಾ ವೈರಸ್ ನಿಂದಾಗಿ ಜಾಗತಿಕ ಮಟ್ಟದ ಬಹುತೇಕ ಎಲ್ಲಾ ಕ್ರೀಡಾ ಕಾರ್ಯಕ್ರಮಗಳು ಬಹುತೇಕ ರದ್ದಿಗೊಂಡಿದೆ, ಅಥವಾ ಮುಂದೂಡಲ್ಪಟ್ಟಿವೆ. ಇತ್ತ ಭಾರತೀಯ ಕ್ರಿಕೆಟಿಗರೂ ತಮ್ಮ ಕುಟುಂಬದವರ ಜೊತೆಗೆ ಸಮಯ ಕಳೆಯುತ್ತಿದ್ದಾರೆ.

ಸಿಇಟಿ ಪರೀಕ್ಷೆ ಮುಂದೂಡಿಕೆ
ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಏಪ್ರಿಲ್ 22, 23ರಂದು ನಡೆಸಬೇಕಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಜವಾಬ್ದಾರಿ ಹೊತ್ತಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ಸೋಮವಾರ ತಿಳಿಸಿದ್ದಾರೆ.

ಕೋವಿಡ್-19 ಸಮುದಾಯದಲ್ಲಿ ಹರಡಿಲ್ಲ, ಕೇವಲ ಓರ್ವನ ಬೇಜವಾಬ್ದಾರಿಯೂ ವೈರಸ್ ಉಲ್ಬಣಕ್ಕೆ ಕಾರಣವಾದೀತು: ಕೇಂದ್ರ
ಭಾರತದಲ್ಲಿ 24 ಗಂಟೆಗಳಲ್ಲಿ ಕೋವಿಡ್-19 ಸೋಂಕಿತರ ಹೊಸ 92 ಪ್ರಕರಣಗಳು ವರದಿಯಾಗಿದ್ದು ನಾಲ್ವರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇಡೀ ದೇಶ ದೇಶ ಲಾಕ್ ಡೌನ್ ಆಗಿದ್ದರೆ ಇಲ್ಲಿನ ಗೊಲ್ಲರಹಳ್ಳಿಯಲ್ಲಿ ನಡೆಯಿತು ಕಾಳಿಕಾದೇವಿ ಜಾತ್ರೆ!
ರಾಜ್ಯಾದ್ಯಂತ ಕೊರೋನಾ ವೈರಸ್ ಭೀತಿ ವ್ಯಾಪಕವಾಗಿರುವ ಸಂದರ್ಭದಲ್ಲಿ ಸರ್ಕಾರದ ಎಚ್ಚರಿಕೆಯನ್ನು ಉಲ್ಲಂಘಿಸಿ ಇಲ್ಲಿನ ಗೊಲ್ಲರಹಳ್ಳಿಯಲ್ಲಿ ಕಾಳಿಕಾದೇವಿ ರಥೋತ್ಸವ ನಡೆಸಲಾಗಿದೆ.

ರೈತರ ಉತ್ಪನ್ನಗಳನ್ನು ಸರ್ಕಾರವೇ ಖರೀದಿಸಿ ಮಾರಾಟ ಮಾಡಲಿ: ಎಚ್.ಡಿ.ಕುಮಾರಸ್ವಾಮಿ
ಕೊರೊನಾ ವೈರಸ್ ರೋಗ ತಡೆಗೆ ಗ್ರಾಮ ಪಂಚಾಯಿತಿ, ವಾರ್ಡ್ ಮಟ್ಟದಲ್ಲಿ ಸ್ವಯಂಸೇವಕರು, ಸಂಘಸಂಸ್ಥೆಗಳು, ಅಧಿಕಾರಿಗಳ ಸಮಿತಿ ರಚನೆಯಾಗಬೇಕು. ಇದೇ ರೀತಿ ಹಾಪ್ ಕಾಮ್ಸ್, ಕೆಎಂಎಫ್ ಸೇರಿದಂತೆ ಸ್ವಯಂ ಸೇವಕರ ಗುಂಪುಗಳನ್ನು ಬಳಸಿಕೊಂಡು ರೈತರಿಂದ ಉತ್ಪನ್ನಗಳನ್ನು ಸರ್ಕಾರವೇ ಮುಂದೆ ನಿಂತು ಖರೀದಿಸಿ, ನಂತರ ಮಾರಾಟ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಲಹ

ಲಾಕ್ ಡೌನ್ ಮಧ್ಯೆ ಆನ್ ಲೈನ್ ಮೂಲಕ ವೈದ್ಯರ ಸಮಾಲೋಚನೆ
ಕೊರೋನಾ ಭೀತಿಯ ಲಾಕ್ ಡೌನ್ ನಡುವೆ ಆರೋಗ್ಯದ ಬಗ್ಗೆ ಎಲ್ಲರಿಗೂ ಕಾಳಜಿ, ಆತಂಕ ಉಂಟಾಗಿದ್ದು ವೈದ್ಯರನ್ನು ಸಂಪರ್ಕಿಸುವುದು ಹೇಗೆ ಎಂಬ ಪ್ರಶ್ನೆ, ಸಂದೇಹ ಅನೇಕರಲ್ಲಿ ಮೂಡುತ್ತಿದೆ.

ಕೆಲಸವಿಲ್ಲ, ದುಡ್ಡಿಲ್ಲ, ಹಳ್ಳಿಗಳಿಗೆ ತೆರಳಿದವರು ರಸ್ತೆಗಳಲ್ಲೇ ವಾಸ್ತವ್ಯ, ಕರುಣಾಜನಕ ಸ್ಥಿತಿ!
ಕೊರೋನಾ ವೈರಸ್ ಹರಡುವುದನ್ನು ತಪ್ಪಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಲಾಕ್ ಡೌನ್ ತೀರ್ಮಾನ ತೆಗೆದುಕೊಂಡಿದ್ದರ ಪರಿಣಾಮ ಕೂಲಿ ಕಾರ್ಮಿಕರು ಹಳ್ಳಿಗಳಿಗೆ ವಲಸೆ ಹೋಗುತ್ತಿದ್ದಾರೆ.

ಸ್ಲಂಗಳಲ್ಲಿರುವ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಆಹಾರ ಒದಗಿಸಲು ಮುಂದಾದ ಬೆಂಗಳೂರು ನಾಗರಿಕರು
ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ದಿನಗೂಲಿ ನೌಕರರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ

