lockdown

ಲಾಕ್ ಡೌನ್ ವೇಳೆ ಕಾರ್ಮಿಕರಿಗೆ ಮುಂಗಡ ನೀಡಲಿರುವ ಇಪಿಎಫ್ಓ
ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾಗಿರುವ ಕಾರ್ಮಿಕರಿಗೆ ನೆರವಾಗುವ ಉದ್ದೇಶದಿಂದ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ ಒ) ಇಂತಹವರಿಗೆ ವಿಶೇಷ ಮುಂಗಡ ಹಣ ನೀಡುವ ಸೌಲಭ್ಯವನ್ನು ಆರಂಭಿಸಿದೆ.

ಏ.20ರ ಬಳಿಕ ಈ ನಾಲ್ಕು ವಲಯಗಳಿಗೆ ವಿನಾಯ್ತಿ: ಗೃಹ ಸಚಿವಾಲಯ ಆದೇಶದಲ್ಲಿ ಹೀಗಿದೆ
ಏಪ್ರಿಲ್ 20ರಿಂದ ಲಾಕ್ ಡೌನ್ ನಿಂದ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ, ಸಹಕಾರಿ ಕ್ರೆಡಿಟ್ ಸೊಸೈಟಿಗಳಿಗೆ ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ಕನಿಷ್ಠ ಸಿಬ್ಬಂದಿಯೊಂದಿಗೆ ಕೆಲಸ ಮಾಡಲು ವಿನಾಯ್ತಿ ನೀಡುವುದಾಗಿ ಗೃಹ ವ್ಯವಹಾರಗಳ ಸಚಿವಾಲಯ ಆದೇಶ ಹೊರಡಿಸಿದೆ.

ಕೊರೋನಾ ಮಹಾಮಾರಿಗೆ ನಲುಗಿದ ಜನತೆ, ಮನಕಲಕುವ ಫೋಟೋ ಟ್ವೀಟ್ ಮಾಡಿದ ನಟ ಜಗ್ಗೇಶ್
ಕೊರೋನಾ ವೈರಸ್ ಮಹಾಮಾರಿಗೆ ದೇಶದ ಜನತೆ ಕಂಗೆಟ್ಟಿದ್ದಾರೆ. ಈ ನಡುವೆ ಅನ್ನ ಆಹಾರವಿಲ್ಲದೆ ಬಡವರು ಸಂಕಷ್ಟ ಎದುರಿಸುತ್ತಿದ್ದು ಪ್ರಾಣಕ್ಕೆ ಒಡೆಯ ಪ್ರಾಣದೇವ ನಾನಿರುವೆ ನಿನ್ನ ಜೊತೆ ಮಿಡಿಯಲಿ ರಾಮನಾಮ ಎಂದು ನಟ ಜಗ್ಗೇಶ್ ಮನಕಲುಕುವ ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ.

ಹೂವು-ದ್ರಾಕ್ಷಿ ಬೆಳೆಗಾರರು ಸೇರಿದಂತೆ ಎಲ್ಲಾ ರೈತರ ನೆರವಿಗೆ ಧಾವಿಸಿದ ರಾಜ್ಯ ಸರ್ಕಾರ
ಲಾಕ್ ಡೌನ್ ಹಿನ್ನೆಲೆಯಲ್ಲಿ ರೈತರಿಗೆ ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ, ದ್ರಾಕ್ಷಿ ಬೆಳೆಗಾರರು ಸಹ ಈ ಸಮಸ್ಯೆಯಿಂದ ಹೊರತಾಗಿಲ್ಲ, ಹೀಗಾಗಿ ದ್ರಾಕ್ಷಿಯನ್ನು ವೈನರಿಗೆ ಹಾಗೂ ಡಿಸ್ಟಿಲರಿಗೆ ಕಳುಹಿಸಲಾಗುತ್ತಿದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಲಾಕ್ ಡೌನ್: ಬಿಬಿಎಂಪಿ ಆಯುಕ್ತರಿಂದ ಮಾಂಸ ಮಾರಾಟಕ್ಕೆ ದರ ನಿಗದಿ
ಲಾಕ್ ಡೌನ್ ಅವಧಿಯಲ್ಲಿ ಜನರು ಕುರಿ, ಮೇಕೆ, ಕೋಳಿ ಮಾಂಸಗಳಿಗೆ ಹೆಚ್ಚಿನ ದರ ವಿಧಿಸಿ ಮಾರಾಟ ಮಾಡುತ್ತಿರುವ ಆರೋಪ ಕಂಡುಬಂದಿರುವ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈಗ ಮಾಂಸಕ್ಕೆ ದರ ನಿಗದಿಪಡಿಸಿದೆ

ಲಾಕ್ ಡೌನ್ ಅವಧಿಯಲ್ಲಿ ಕಾಯ್ದಿರಿಸಲಾದ ವಿಮಾನ ಟಿಕೆಟ್ ಗಳ ಹಣ ಪೂರ್ತಿ ಮರುಪಾವತಿ!
ಲಾಕ್ ಡೌನ್ ಅವಧಿಯಲ್ಲಿ ಕಾಯ್ದಿರಿಸಲಾದ ವಿಮಾನ ಟಿಕೆಟ್ ಗಳ ಹಣವನ್ನು ಪೂರ್ತಿಯಾಗಿ ಮರುಪಾವತಿ ಮಾಡಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ.

ಕಲಬುರಗಿ: ಕೊರೋನಾ ಬಂದ ತಾಲೂಕಿನಲ್ಲೇ ರಥೋತ್ಸವ ಆಚರಣೆ, 40 ಮಂದಿ ವಿರುದ್ಧ ಕೇಸ್
ಕೊರೋನಾ ಕಾಣಿಸಿಕೊಂಡ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದಲ್ಲಿ ಲಾಕ್ ಡೌನ್ ಉಲ್ಲಂಘಿಸಿ ಗ್ರಾಮಸ್ಥರು ರಥೋತ್ಸವ ಮಾಡಿದ್ದಾರೆ.

ನಿಖಿಲ್ ವಿವಾಹ: ಲಾಕ್ ಡೌನ್ ನಿಯಮ ಉಲ್ಲಂಘನೆಯಾದರೆ ಕ್ರಮ- ಡಾ.ಅಶ್ವತ್ ನಾರಾಯಣ
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ವಿವಾಹ ಮಹೋತ್ಸವದಲ್ಲಿ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘನೆಯಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ. ಎನ್. ಅಶ್ವತ್ ನಾರಾಯಣ ಎಚ್ಚರಿಕೆ ನೀಡಿದ್ದಾರೆ.

ಲಾಕ್ ಡೌನ್ ಪರಿಹಾರವಲ್ಲ ಎಂದಾದರೆ, ಕಾಂಗ್ರೆಸ್ ಆಡಳಿತ ರಾಜ್ಯಗಳು ಏಕೆ ಪಾಲಿಸುತ್ತಿವೆ: ರಾಹುಲ್‌ಗೆ ಬಿಎಲ್ ಸಂತೋಷ್ ಪ್ರಶ್ನೆ
ಕೊರೋನಾ ವೈರಸ್ ಸೋಂಕು ವ್ಯಾಪಿಸುವುದನ್ನು ತಡೆಯಲು ಲಾಕ್ ಡೌನ್ ಒಂದೇ ಪರಿಹಾರವಲ್ಲ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.

