LAC

ಗಡಿ ನಿಯಂತ್ರಣ ರೇಖೆ ಬಳಿ ಪರಿಸ್ಥಿತಿ ಗಂಭೀರವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಭದ್ರತೆ ನಿಯೋಜನೆ: ಸೇನಾ ಮುಖ್ಯಸ್ಥ
ಗಡಿ ನಿಯಂತ್ರಣ ರೇಖೆ ಬಳಿ ಪರಿಸ್ಥಿತಿ ಗಂಭೀರವಾಗಿದ್ದು, ಈ ಹಿನ್ನೆಲೆಯಲ್ಲಿ ಹಲವು ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಭದ್ರತಾಪಡೆಗಳನ್ನು ನಿಯೋಜಿಸಲಾಗಿದೆ ಎಂದು ಭಾರತೀಯ ಸೇನಾಪಡೆಯ ಮುಖ್ಯಸ್ಥ ಎಂಎಂ ನರವಾಣೆಯವರು ಶುಕ್ರವಾರ ಹೇಳಿದ್ದಾರೆ.

ಉದ್ಧಟತನ ನಿಲ್ಲಿಸಿ, ಇಲ್ಲ 62ರ ಯುದ್ಧಕ್ಕಿಂತ ಹೆಚ್ಚು ಹಾನಿಯಾಗುತ್ತದೆ: ಭಾರತಕ್ಕೆ ಚೀನಾ ಎಚ್ಚರಿಕೆ
ಎಲ್ ಎಸಿಯಲ್ಲಿನ ಭಾರತೀಯ ಸೈನಿಕರು ಉದ್ಧಟತನವನ್ನು ನಿಲ್ಲಿಸದೇ ಇದ್ದರೆ ಮುಂದಾಗುವ ಪರಿಣಾಮಗಳನ್ನು ಭಾರತ ಎದುರಿಸಬೇಕಾಗುತ್ತದೆ ಎಂದು ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಹೇಳಿದೆ.

ಭಾರತ ಅಕ್ರಮವಾಗಿ ಎಲ್‌ಎಸಿಯನ್ನು ಅತಿಕ್ರಮಣ ಮಾಡಿತ್ತು: ಚೀನಾ
ದೆಹಲಿಯಲ್ಲಿರುವ ಚೀನಾ ರಾಯಭಾರ ಕಚೇರಿ ಮಂಗಳವಾರ ಎಲ್‌ಎಸಿಯಲ್ಲಿನ ಪಾಂಗೊಂಗ್ ತ್ಸೊ ಪರಿಸ್ಥಿತಿ ಕುರಿತು ಪ್ರಕಟಣೆ ನೀಡಿದ್ದು, ಆಗಸ್ಟ್ 29 ಮತ್ತು 30ರ ಮಧ್ಯರಾತ್ರಿ ಭಾರತೀಯ ಸೈನ್ಯ ಚೀನಾ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಯಥಾಸ್ಥಿತಿಯನ್ನು ಬದಲಾಯಿಸಿದೆ ಎಂದು ಆರೋಪಿಸಿದೆ.

ಚೀನಾಗೆ ಯಾವಾಗ ತಕ್ಕ ತಿರುಗೇಟು ನೀಡುತ್ತೀರಾ ಮೋದಿ ಜೀ?: ಅತಿಕ್ರಮಣ ಕುರಿತು ಕಾಂಗ್ರೆಸ್ ಟೀಕೆ
ಗಾಲ್ವಾನ್ ಕಣಿವೆ ಸಂಘರ್ಷದ ಬಳಿಕ ಮತ್ತೆ ಕಾಲು ಕೆರೆದು ಭಾರತೀಯ ಗಡಿ ಅತಿಕ್ರಮಣಕ್ಕೆ ಮುಂದಾದ ಚೀನಾ ವಿರುದ್ಧ ಯಾವಾಗ ತಕ್ಕ ತಿರುಗೇಟು ನೀಡುತ್ತೀರಾ ಮೋದಿ ಜೀ ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ಪಾಕ್ ಆಯ್ತು, ಈಗ ಚೀನಾದಿಂದಲೂ ಮತ್ತೆ ಗಡಿ ತಂಟೆ, ಎಲ್ಎಸಿ ಒಪ್ಪಂದ ಉಲ್ಲಂಘಿಸಿ ಭಾರತದ ಗಡಿ ಅತಿಕ್ರಮಣ, ಹಿಮ್ಮೆಟ್ಟಿಸಿದ ಸೈನಿಕರು!
ಲಡಾಖ್ ನಲ್ಲಿ ಚೀನಾ ಯೋಧರ ಪುಂಡಾಟ ಮುಂದುವರೆದಿದ್ದು, ಉಭಯ ದೇಶಗಳ ಸೇನಾ ಅಧಿಕಾರಿಗಳ ಸಭೆ ಬಳಿಕ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದ್ದ ಚೀನಾ ಇದೀಗ ಮತ್ತೆ ಎಲ್ಎಸಿಯಲ್ಲಿ ಅತಿಕ್ರಮಣಕ್ಕೆ ಪ್ರಯತ್ನಿಸಿದೆ.

ಮಾತುಕತೆಗೆ ಬಗ್ಗದ ಚೀನಾ, ಎಲ್ಎಸಿಯಲ್ಲಿ ರಸ್ತೆ, ಸೇತುವೆ ನಿರ್ಮಾಣ ಮುಂದುವರೆಸಿ ಮೊಂಡುತನ ಪ್ರದರ್ಶನ!
ಈಶಾನ್ಯ ಲಡಾಖ್ ನಲ್ಲಿ ಚೀನಾ-ಭಾರತ ಸೇನಾ ಸಿಬ್ಬಂದಿಗಳ ನಡುವಿನ ಘರ್ಷಣೆಯ ನಂತರ, ಭಾರತದ ಪ್ರದೇಶದಲ್ಲಿದ್ದ ಪಿಎಲ್ಎ ಸಿಬ್ಬಂದಿಗಳನ್ನು ವಾಪಸ್ ಕರೆಸಿಕೊಳ್ಳುವುದಕ್ಕೆ ಹಲವು ಸುತ್ತಿನ ಮಾತುಕತೆಯನ್ನು ನಡೆಸಲಾಗಿದೆ. ಆದರೆ ಚೀನಾ ಯಾವುದಕ್ಕೂ ಬಗ್ಗದೇ ತನ್ನ ಮೊಂಡುತನವನ್ನು ಮುಂದುವರೆಸಿದೆ

ಎಲ್ ಒಸಿಯಿಂದ ಹಿಡಿದು ಎಲ್ಎಸಿಯವರೆಗೆ ಸವಾಲಿನ ಸಂದರ್ಭದಲ್ಲಿ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ: ಪ್ರಧಾನಿ ಮೋದಿ
ದೇಶದ ಸಾರ್ವಭೌಮತ್ವ, ಸ್ವಾಯತ್ತತೆಗೆ ಧಕ್ಕೆಯನ್ನುಂಟುಮಾಡಲು ಯತ್ನಿಸುವವರಿಗೆ ಭಾರತೀಯ ಯೋಧರು ಗಡಿ ನಿಯಂತ್ರಣ ರೇಖೆಯಿಂದ ಹಿಡಿದು ಗಡಿ ವಾಸ್ತವ ರೇಖೆಯವರೆಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ಪ್ರಧಾನಿ ಶನಿವಾರ 74ನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.

ಪೂರ್ವ ಲಡಾಕ್ ನಿಂದ ಸೇನೆ ಹಿಂತೆಗೆತಕ್ಕೆ ಒಪ್ಪಿಗೆ: ಮತ್ತೊಂದು ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆಗೆ ಸಿದ್ದ
ಸರಿಸುಮಾರು ಎರಡೂವರೆ ತಿಂಗಳ ಬಳಿಕ ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆ(ಎಲ್ ಎಸಿ)ಯಿಂದ ಸೇನೆಯನ್ನು ಹಿಂತೆಗೆದುಕೊಳ್ಳಲು ಭಾರತ ಮತ್ತು ಚೀನಾ ದೇಶಗಳು ಒಪ್ಪಿಗೆ ಸೂಚಿಸಿವೆ.

ಲಡಾಖ್ ಗಡಿಯಿಂದ ಹಿಂದೆ ಸರಿಯದ ಚೀನಾದಿಂದ 40,000 ಸೈನಿಕರ ನಿಯೋಜನೆ: ವರದಿ
ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಪರಿಸ್ಥಿತಿಯನ್ನು ತಿಳಿಗೊಳಿಸುವ ಮನಸ್ಥಿತಿಯಲ್ಲಿಲ್ಲ, ಏಕೆಂದರೆ ಪೂರ್ವ ಲಡಾಕ್ ವಲಯದಲ್ಲಿ ಮಾರು 40,000 ಸೈನಿಕರನ್ನು ತನ್ನ ಗಡಿಯ ಮುಂಭಾಗ ಹಾಗೂ ಅಚ್ಚುಕಟ್ಟು ಪ್ರದೇಶದಲ್ಲಿ ನಿಯೋಜನೆ ಮಾಡಿದೆ ಎಂದು ಮೂಲಗಳು ಹೇಳಿದೆ.

