LAC

1,750 ಭವಿಷ್ಯದ ಪದಾತಿ ಯುದ್ಧ ವಾಹನಗಳ ಖರೀದಿಗೆ ಸೇನೆಯಿಂದ ಪ್ರಕ್ರಿಯೆ ಪ್ರಾರಂಭ
ಭಾರತೀಯ ಸೇನೆ ತನ್ನ ಪದಾತಿದಳಕ್ಕೆ ಹೆಚ್ಚಿನ ಚಲನಶೀಲತೆಯ ಭವಿಷ್ಯದ ಯುದ್ಧ ವಾಹನ(ಎಫ್ಐಸಿವಿ) ಗಳ ಖರೀದಿಗೆ ಭಾರತೀಯ ಸೇನೆ ಮಾಹಿತಿಗಾಗಿ ಮನವಿ (ಆರ್ ಎಫ್ಐ) ನ್ನು ಸಲ್ಲಿಸಿದೆ.

ಚೀನಾ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ: ರಕ್ಷಣಾ ಪಡೆ ಮುಖ್ಯಸ್ಥ ಜ. ಬಿಪಿನ್ ರಾವತ್
ಗಡಿ ವಾಸ್ತವ ರೇಖೆ(ಎಲ್ಎಸಿ)ರ ಪೂರ್ವ ಲಡಾಕ್ ನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ ಎಂದು ಭಾರತೀಯ ರಕ್ಷಣಾ ಪಡೆ ಮುಖ್ಯಸ್ಥ ಜ.ಬಿಪಿನ್ ರಾವತ್ ಹೇಳಿದ್ದಾರೆ.

ಲಡಾಕ್ ಸಂಘರ್ಷ ಮಧ್ಯೆ ಅಂಧ್ರ ಪ್ರದೇಶದಲ್ಲಿ ಭಾರತದ ಗಡಿಗೆ ಹತ್ತಿರವಾಗಿ ರೈಲ್ವೆ ಸಂಪರ್ಕ ಜಾಲ ನಿರ್ಮಾಣ ಆರಂಭಿಸಿದ ಚೀನಾ!
ಪೂರ್ವ ಲಡಾಕ್ ನಲ್ಲಿ ಗಡಿ ವಿವಾದ ಮಧ್ಯೆ ಅರುಣಾಚಲ ಪ್ರದೇಶದ ಭಾರತದ ಗಡಿಯಲ್ಲಿರುವ ಟಿಬೆಟ್ ನ ಲಿಂಜ್ಹಿಯ ನೈರುತ್ಯ ಸಿಚಿಯಾನ್ ಪ್ರಾಂತ್ಯದ ಯಾನ್ ಮಧ್ಯೆ ಸಿಚುವಾನ್-ಟಿಬೆಟ್ ರೈಲ್ವೆ ಸಂಪರ್ಕಜಾಲವನ್ನು ನಿರ್ಮಿಸಲು ಚೀನಾ ಮುಂದಾಗಿದೆ.

ಎಲ್‌ಎಸಿಯಲ್ಲಿ ಬಂಧಿಸಲ್ಪಟ್ಟ ಚೀನೀ ಸೈನಿಕನ ಬಳಿ ಸ್ಲೀಪಿಂಗ್ ಬ್ಯಾಗ್, ಸ್ಟೋರೇಜ್ ಡಿವೈಸ್, ಮೊಬೈಲ್ ಪತ್ತೆ
ಡೆಮ್‌ಚೋಕ್ ಪ್ರದೇಶದ ಬಳಿ ಭಾರತೀಯ ಸೈನ್ಯದಿಂದ ಬಂಧಿಸಲ್ಪಟ್ಟ ಚೀನಾದ ಸೈನಿಕನು ಸ್ಲೀಪಿಂಗ್ ಬ್ಯಾಗ್, ಸ್ಟೋರೇಜ್ ಡಿವೈಸ್ ಮತ್ತು ಮೊಬೈಲ್ ಫೋನ್ ಅನ್ನು ಹೊಂದಿರುವುದು ಕಂಡುಬಂದಿದೆ.

ಎಲ್ಎಸಿಯಾದ್ಯಂತ ಶಾಂತಿ ತೀವ್ರವಾಗಿ ಹದಗೆಟ್ಟಿದೆ, ಭಾರತ-ಚೀನಾ ಸಂಬಂಧದ ಮೇಲೆ ಪರಿಣಾಮ: ಜೈಶಂಕರ್
ಎಲ್ಎಸಿಯಾದ್ಯಂತ ಶಾಂತಿ ತೀವ್ರವಾಗಿ ಹದಗೆಟ್ಟಿದ್ದು, ಇಡೀ ಭಾರತ-ಚೀನಾ ಸಂಬಂಧದ ಮೇಲೆ ಪರಿಣಾಮ ಬೀರಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಮುಂದುವರಿದ ಚೀನಾ ಕುತಂತ್ರ: ಅರುಣಾಚಲ ಪ್ರದೇಶ ಗಡಿಯಲ್ಲಿ ನಾಗರಿಕರಿಗೆ ಸೇನೆಯ ಸಮವಸ್ತ್ರ ಧರಿಸಿ ಓಡಾಟ!
ಭಾರತ-ಚೀನಾ ಗಡಿಭಾಗದಲ್ಲಿ ಚೀನಾ ತನ್ನ ಸೇನಾ ಚಟುವಟಿಕೆಯನ್ನು ಮತ್ತಷ್ಟು ಹೆಚ್ಚಿಸಿದ್ದು ಭಾರತಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ. ಅರುಣಾಚಲ ಪ್ರದೇಶದ ಪೂರ್ವ ವಲಯದಲ್ಲಿ ಗಡಿ ವಾಸ್ತವ ರೇಖೆಯುದ್ದಕ್ಕೂ ಜನರ ಚಲನವಲನಗಳನ್ನು ಚೀನಾ ಹೆಚ್ಚಿಸಿದ್ದು ಗಡಿಗೆ ಹತ್ತಿರದ ಪ್ರದೇಶಗಳ ಮೇಲೆ ಚೀನಾ ಹೆಚ್ಚಿನ ಗಮನ ಹರಿಸಿದೆ ಎಂದು ತಿಳಿದುಬಂದಿದೆ.

ನಿಯಮ ಉಲ್ಲಂಘಿಸಿ ಎಲ್ ಎಸಿ ದಾಟಿದರೆ ಗುಂಡೇಟು: ಚೀನಾಗೆ ಭಾರತದ ಖಡಕ್ ಎಚ್ಚರಿಕೆ
ಚೀನಾ ಸೈನಿಕರು ನಿಯಮ ಉಲ್ಲಂಘಿಸಿ ಎಲ್ ಎಸಿ ದಾಟುವ ಭಂಡ ಧೈರ್ಯ ತೋರುವ ಸಾಹಸ ಮಾಡಿದರೆ ಗುಂಡು ಹಾರಿಸಲಾಗುತ್ತದೆ ಎಂದು ಭಾರತ ಚೀನಾಗೆ ಎಚ್ಚರಿಕೆ ನೀಡಿದೆ.

ಎಲ್ ಎಸಿ ಬಳಿ ವಾಯುನೆಲೆಗಳು, ವಾಯು ರಕ್ಷಣಾ ಸ್ಥಾನ, ಹೆಲಿಪೋರ್ಟ್ ಗಳನ್ನು ದ್ವಿಗುಣಗೊಳಿಸುತ್ತಿರುವ ಚೀನಾ: ವರದಿ
2017ರಲ್ಲಿ ಡೊಕ್ಲಾಮ ವಿವಾದ ಸಂಭವಿಸಿದ ನಂತರ ವಾಸ್ತವ ನಿಯಂತ್ರಣ ರೇಖೆ ಬಳಿ ಐದು ಹೆಲಿಪೋರ್ಟ್ ಗಳು, ಐದು ಶಾಶ್ವತ ವಾಯು ರಕ್ಷಣಾ ಸ್ಥಾನಗಳು, ಮೂರು ವಾಯುನೆಲೆಗೆಳು ಸೇರಿದಂತೆ ಕನಿಷ್ಠ 13 ಹೊಸ ಮಿಲಿಟರಿ ಸ್ಥಾನಗಳ ನಿರ್ಮಾಣ ಕಾರ್ಯವನ್ನು ಚೀನಾ ಆರಂಭಿಸಿದೆ ಎಂದು ಜಾಗತಿಕ ಭದ್ರತಾ ಕನ್ಸಲ್ ಟೆನ್ಸಿ ಸ್ಟಾರ್ಟ್ ಫಾರ್ ತಿಳಿಸಿದೆ.

ಚೀನಾಗೆ ಹಿನ್ನಡೆ: ಎಲ್ಎಸಿಯಲ್ಲಿ ಮತ್ತೆ 6 ಶಿಖರಗಳು ಭಾರತ ಸೇನೆ ವಶಕ್ಕೆ!
ಚೀನಾ ಗಡಿಯಲ್ಲಿ ತೆಗೆದಿರುವ ತಗಾದೆಗೆ ಒಂದರ ಮೇಲೆ ಒಂದರಂತೆ ಭಾರತ ಮುಟ್ಟಿ ನೋಡಿಕೊಳ್ಳುವಂತಹ ಪೆಟ್ಟು ನೀಡುತ್ತಿದೆ.

